ಸೌಹಾರ್ದವೇ ಹಬ್ಬ ಶಾಂತಿ ನಡಿಗೆ ಸಮಿತಿಯಿಂದ ಹಿಂದೂ ಮಹಾ ಸಭಾ ಗಣಪತಿಗೆ ಮಾಲಾರ್ಪಣೆ

ಶಿವಮೊಗ್ಗ: ನಗರದಲ್ಲಿ ಪ್ರತಿ ಷ್ಠಾಪಿಸಿರುವ ಹಿಂದೂ ಮಹಾಸಭಾ ಗಣಪತಿಗೆ ಮುಸ್ಲಿಂ ಮುಖಂಡರು ಸೇರಿದಂತೆ ಸೌಹಾರ್ದವೇ ಹಬ್ಬ ಶಾಂತಿ ನಡಿಗೆ ಸಮಿತಿ ವತಿಯಿಂದ ಇಂದು ಸಮಿತಿಯ ಪ್ರಮುಖರು ಮಾಲಾರ್ಪಣೆ ಮಾಡುವ ಮೂ ಲಕ ಸೌಹಾರ್ದ ಸಾರಲಾಯಿತು.
ಈ ಸಂದರ್ಭದಲ್ಲಿ ಮಾತನಾ ಡಿದ ಸಂಚಾಲಕ ವಕೀಲ ಕೆ.ಪಿ. ಶ್ರೀಪಾಲ, ಶಿವಮೊಗ್ಗದ ಗಣಪತಿ ಹಬ್ಬದ ಮೆರವಣಿಗೆ ಶಾಂತಿಯುತ ವಾಗಿ ನಡೆಯಬೇಕು. ಎಲ್ಲಾ ಧರ್ಮದ ಮುಖಂಡರು ಹಬ್ಬದಲ್ಲಿ ಪಾಲ್ಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ನಮ್ಮ ಮುಸ್ಲಿಂ ಮುಖಂಡರು ಕೂಡ ಗಣಪತಿಯ ದರ್ಶನ ಮಾಡಿರುವುದು ಅತ್ಯಂತ ಸ್ವಾಗತಾ ರ್ಹವಾಗಿದೆ. ಸ್ನೇಹ, ಸಾಮರಸ್ಯ ಗಳೇ ಇಂದು ಬೇಕಾಗಿದೆ. ಧರ್ಮಾ ಂಧತೆ, ದ್ವೇಷ ಅಳಿಯಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ರಾಜಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಓಪನ್ ಮೈಂಡ್ ಸ್ಕೂಲ್‌ನ ಮುಖ್ಯಸ್ಥ ಕಿರಣ್ ಕುಮಾರ್, ಜಮಿಯ ಮಸೀದಿ ಸದಸ್ಯ ಮೊಹಮದ್ ಹುಸೇನ್, ಮುಸ್ಲಿಂ ಮುಖಂಡರು ಮತ್ತು ಪ್ರಮುಖರಾದ ಲಿಯಾಕತ್, ಸುರೇಶ್ ಅರಸಾಳು, ಬಿ.ಚಂದ್ರೆ ಗೌಡ, ಟಿ.ಎಂ. ಚಂದ್ರಪ್ಪ, ಚೇತ ನ್, ಪ್ರಸಾದ್ ಮೊದಲಾ ದವರು ಹಾಜರಿದ್ದರು. ಹಿಂದೂ ಮಹಾ ಸಭಾ ಗಣಪತಿ ಕಮಿಟಿಯ ಮುಖ್ಯ ಸ್ಥರಾದ ದತ್ತಣ್ಣ ಮತ್ತು ಪ್ರಮು ಖರು ಹಾಜರಿದ್ದು ಸೌಹಾರ್ದ ಸಮಿತಿಯವರನ್ನು ಗೌರವಪೂರ್ವ ಕವಾಗಿ ಬರಮಾಡಿಕೊಂಡರು.