ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ …

ಶಿವಮೊಗ್ಗ : ಭಾರತ ಸರ್ಕಾರ, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಹಿಂದೂ ಯುವತಿ ರಕ್ಷತಿ ಯುವತಿ ಮಂಡಳಿ ಸಹಯೋಗದೊಂದಿಗೆ ಇಂದು ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ ಮತ್ತು ಕೌಶಲ್ಯಾಧಾರಿತ ಉದ್ಯಮಶೀಲತೆ ಕಾರ್ಯಕ್ರಮ (ಹೊಲಿಗೆ ತರಬೇತಿ) ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮವನ್ನು ಸುತ್ತುಕೋಟೆ ಗ್ರಾಮದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೌಶಲ್ಯಾಭಿವೃದ್ಧಿ ಇಲಾಖೆಯ ಜಿ ಕೌಶಲ್ಯಾಭಿವೃದ್ಧಿ ಅಧಿಕಾರಿ ಸುರೇಶ್ ಹೆಚ್. ಎಂ, ಕೌಶಲ್ಯ ತರಬೇತಿಯು ವ್ಯಕ್ತಿಯ ಅಭಿವೃದ್ಧಿಗೆ ಬಹಳ ಸಹಕಾರಿಯಾಗಿದೆ. ಕೌಶಲ್ಯವನ್ನು ನಿಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ಮುಂದೆ ಬರಬೇಕಾಗಿ ಕರೆಕೊಟ್ಟರು.
ಕೌಶಲ್ಯಾಭಿವೃದ್ದಿ ಇಲಾಖೆಯ, ಅಭಿಯಾನ ವ್ಯವಸ್ಥಾಪಕ ಸಮನ್ವಯ ಕಾಶಿ ಅವರು ಮಾತನಾಡಿ, ದೀನ್ ದಯಾಳ್ ಉಪಾಧ್ಯಾಯರ ಜೀವನದಲ್ಲಿ ಮಾಡಿದ ಸಾಧನೆಗಳ ಬಗ್ಗೆ ಹಾಗೂ ಅವರು ಜೀವನದಲ್ಲಿ ಅಳವಡಿಸಿಕೊಂಡ ಮೌಲ್ಯಗಳ ಬಗ್ಗೆ ತಿಳಿಸಿದರು.
ನೆಹರು ಯುವ ಕೇಂದ್ರದ ಜಿ ಯುವ ಅಧಿಕಾರಿ ಉಸ್, ನೆಹರು ಯುವ ಕೇಂದ್ರದ ಪ್ರಮುಖ ಕಾರ್ಯಕ್ರಮವಾದ ಮೇರಿ ಮಿಟ್ಟಿ ಮೇರಾ ದೇಶ್ ಬಗ್ಗೆ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಎ ಅಭ್ಯರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ಹರಮಘಟ್ಟ ಗ್ರಾಪಂ ಅಧ್ಯಕ್ಷೆ ಪುಟ್ಟಮ್ಮ, ಸುತ್ತುಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಗೀತಾ, ಹೊಲಿಗೆ ತರಬೇತಿಯ ಶಿಕ್ಷಕಿ ಸಿಂಧು ಹಾಗೂ ತರಬೇತಿ ಪಡೆದ ಅಭ್ಯರ್ಥಿಗಳು, ಗ್ರಾಮಸ್ಥರು, ನೆಹರೂ ಯುವ ಕೇಂದ್ರದ ಕಾರ್ಯಕರ್ತ ದುತೀಂದ್ರ ಉಪಸ್ಥಿತರಿದ್ದರು.
ನಂತರ ಮೇರಿ ಮಿಟ್ಟಿ ಮೇರಾ ದೇಶ್ ಕಾರ್ಯಕ್ರಮದ ಉದ್ದೇಶದನ್ವಯ ಸುತ್ತುಕೋಟೆ ಗ್ರಾಮದ ಪ್ರತಿ ಮನೆಯಿಂದ ಮನೆಯಿಂದ ಮಣ್ಣನ್ನು ಸಂಗ್ರಹಿಸಿ ಅಮೃತ ಕಳಶದಲ್ಲಿ ಶೇಖರಿಸಲಾಯಿತು.