ಯುವ ಪೀಳಿಗೆಗೆ ಸಂಸ್ಕೃತಿ ಪರಂಪರೆ ಪರಿಚಯ ಅವಶ್ಯಕ…

ಶಿವಮೊಗ್ಗ: ಜನಪದ ಸಂಸ್ಕೃತಿ ಸಾವಿರಾರು ವರ್ಷದ ಇತಿಹಾಸ ಹೊಂದಿದ್ದು, ನಮ್ಮ ಕಲೆ ಸಂಸ್ಕೃತಿ ಉಳಿಸುವ ಕಾರ್‍ಯ ಹಾಗೂ ಯುವ ಪೀಳಿಗೆಗೆ ಸಂಸ್ಕೃತಿ ಪರಂಪರೆ ಪರಿಚಯಿಸುವ ಅವಶ್ಯಕತೆ ಇದೆ ಎಂದು ರೋಟರಿ ಮಾಜಿ ಸಹಾ ಯಕ ಗವರ್ನರ್, ಗಾಯಕ ಜಿ. ವಿಜಯ್‌ಕುಮಾರ್ ಹೇಳಿದರು.
ಶಿವಮೊಗ್ಗದ ಬಸವೇಶ್ವರ ನಗರ ೨ನೇ ಹಂತದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಮಹಿಳೆಯರು, ಮಕ್ಕಳು ಹಾಗೂ ಪುರುಷರಿಗೆ ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಡಾವಣೆಯಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುವುದರಿಂದ ಪರಸ್ಪರ ಒಡನಾಟ ವಿಶ್ವಾಸ ವೃದ್ಧಿಯಾಗು ತ್ತದೆ. ಒಂದು ಒಳ್ಳೆಯ ಸಂಘಟನೆ ಬೆಳವಣಿಗೆ ಹೊಂದುತ್ತದೆ. ಸಂಘಟನೆಯಿಂದ ಬಡಾವಣೆಯ ಅಭಿವೃದ್ಧಿ ಕೆಲಸಗಳು ಸುಲಲಿತ ವಾಗಿ ಸಾಗುತ್ತದೆ. ಆದ್ದರಿಂದ ಮೊದಲು ನಮ್ಮ ನಮ್ಮ ಬಡಾವಣೆ ಗಳು ಸದೃಢ ಆಗಬೇಕು ಎಂದು ತಿಳಿಸಿದರು.
ಬಸವೇಶ್ವರ ನಗರ ಎರಡನೇ ಹಂತದ ನಿವಾಸಿಗಳ ಸಂಘದ ಅಧ್ಯಕ್ಷ ಜೇತೇಂದ್ರ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಹಾಗೂ ಮಾನಸಿಕ ನೆಮ್ಮದಿ ತರುತ್ತದೆ. ಸಾರ್ವಜನಿಕರು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸಬೇಕು ಎಂದರು.
ಬಸವೇಶ್ವರ ನಗರ ೨ನೆ ಹಂತದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸಾಂಸ್ಕೃತಿಕ ಸ್ಪರ್ಧೆ, ಫ್ಯಾಶನ್ ಶೋ, ನೃತ್ಯ, ಹಾಡುಗಾರಿಕೆ, ಗ್ರಾಮೀಣ ಕನ್ನಡ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಜಿ. ವಿಜಯ್‌ಕುಮಾರ್ ಅವರು ಅನೇಕ ಜನಪದ ಗೀತೆಗಳು, ಹಳೆಯ ಚಿತ್ರಗೀತೆಗಳು, ತತ್ವಪದ ಗಳು, ಶಾಯಿರಿ ಹಾಗೂ ಜೋಕ್ಸ್ ಗಳಿಂದ ಅಪಾರ ಜನರನ್ನು ಮೆಚ್ಚಿಸಿ ದರು. ಬಡಾವಣೆ ಅಧ್ಯಕ್ಷರು ಕಾರ್ಯದರ್ಶಿ, ಪದಾಧಿಕಾರಿಗಳು ಜಿ.ವಿಜಯ್ ಕುಮಾರ್ ದಂಪತಿ ಗಳಿಗೆ ಅಭಿನಂದನೆ ಸಲ್ಲಿಸಿ ಗೌರವಿಸಿ ದರು.
ವೇದಿಕೆಯಲ್ಲಿ ಕಾರ್ಯದರ್ಶಿ ಬಸವರಾಜ್, ಭಜಂತ್ರಿ ಸುರೇಶ್, ನಿರ್ದೇಶಕರಾದ ಡಾ. ಶರತ್, ಡಾ. ಲಿಂಗರಾಜ್, ದೇವರಾಜ್, ಕೊಟ್ರೇಶ್, ರಾಜೇಶ್, ಪ್ರದೀಪ್, ರುದ್ರಪ್ಪ, ಡಾ. ಕಶ್, ವಲ್ಸರಾಜ್, ಇನ್ನರ್ ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ ಕುಮಾರ್ ಉಪಸ್ಥಿತರಿದ್ದರು.