ಅ.೩ರಿಂದ ಪ್ರಸಿದ್ಧ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಿ ಜಾತ್ರಾ ಮಹೋತ್ಸವ

ರಿಪ್ಪನ್‌ಪೇಟೆ: ಪುರಾಣ ಪ್ರಸಿದ್ದ ಶ್ರೀ ಅಮ್ಮನಘಟ್ಟದ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ ಅ.೩ ರಿಂದ ೧೩ ರವರೆಗೆ ಹಾಗೂ ಅ.೧೫ ರಿಂದ ೨೪ ರವರಗೆ ನವರಾತ್ರಿ ಉತ್ಸವ ನಡೆಯ ಲಿದ್ದು ಈ ಹಿನ್ನೆಲೆ ಯಲ್ಲಿ ಭರದ ಸಿದ್ದತೆ ನಡೆಯುತ್ತಿದೆ ಎಂದು ದೇವ ಸ್ಥಾನ ಕಟ್ಟಡ ಸಮಿತಿಯವರು ಹಾಗೂ ವ್ಯವಸ್ಥಾಪನಾ ಸಮಿತಿಯರು ತಿಳಿಸಿzರೆ.
ಸೆ.೨೮ರಂದು ಹಳೆ ಅಮ್ಮನಘಟ್ಟ ದಲ್ಲಿ ಪೂಜೆ ನೆರ ವೇರುವುದು. ೨೯ ರಂದು ದೇವಿಗೆ ಕಂಕಣ ಕಟ್ಟಲಾಗು ವುದು. ಅ.೩ ರಿಂದ ಆರಂಭವಾಗುವ ದೇವಿಯ ಜತ್ರಾ ಮಹೋತ್ಸವವು ಎರಡು ಮಂಗಳವಾರ ಹಾಗೂ ಎರಡು ಶುಕ್ರವಾರದಂದು ವಿಶೇಷವಾಗಿ ಆಚರಿಸಲಾಗುತ್ತದೆ ಮತ್ತು ಅ.೧೫ ರಿಂದ ೨೪ರವರೆಗೆ ದಸರಾ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿ ಸಲಾಗಿದ್ದು ೯ ದಿನ ನಿರಂತರ ಪೂಜೆ ಹಾಗೂ ಸಾರ್ವ ಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ವ್ಯವಸ್ಥಾ ಪನಾ ಸಮಿತಿಯರು ಅಧ್ಯಕ್ಷ ಬಿ.ಸ್ವಾಮಿರಾವ್ ವಿವರಿಸಿ ದರು.ಈ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಸರ್ವ ಸದಸ್ಯರು ಹಾಗೂ ಕಟ್ಚಡ ಸಮಿತಿಯ ಸದಸ್ಯರು ಇನ್ನಿತರರು ಇದ್ದರು.