ಸಹಕಾರಿ ಯೂನಿಯನ್‌ನಿಂದ ಪ್ರಬಂಧ ಸ್ಪರ್ಧೆ…

ಶಿವಮೊಗ್ಗ : ಶಿವಮೊಗ್ಗ ಜಿ ಸಹಕಾರ ಯೂನಿಯನ್ ಹಾಗೂ ವಿನೋಬನಗರದ ಡಿವಿಎಸ್ ಪ.ಪೂ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ೨೦೨೩-೨೪ನೇ ಸಾಲಿನಲ್ಲಿ ಪ್ರೌಢಶಾಲಾ ವಿದ್ಯಾಥಿ ಗಳಿಗೆ ಜಿ ಮಟ್ಟದಲ್ಲಿ ಪ್ರಬಂಧ ಸ್ಪರ್ಧೆ ಹಾಗೂ ಜಿಯ ಪಪೂ ಕಾಲೇಜು ವಿದ್ಯಾರ್ಥಿಗಳಿಗೆ ಜಿ ಮಟ್ಟದ ಚರ್ಚಾಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಟಾಟನೆ ಯನ್ನು ಕರ್ನಾಟಕ ಇನ್ಟ್‌ಸ್ಟಿ ಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್‌ನ ಪ್ರಾಂಶು ಪಾಲ ಎನ್. ರವಿ ಜ್ಯೋತಿ ಬೆಳಗಿ ಸುವುದರ ಮೂಲಕ ಉದ್ಟಾಟಿಸಿ ದರು.,ಮುಖ್ಯ ಅತಿಥಿಗಳಾಗಿ ಡಿ. ವಿ.ಎಸ್.ಕಾಲೇಜಿನ ಉಪನ್ಯಾಸಕ ರಶ್ಮಿ ಆಗಮಿಸಿದ್ದರು. ಸಹಕಾರ ಯೂನಿಯನ್ ಉಪಾಧ್ಯಕ್ಷ ಕೆ.ಜಿ. ಮಮತಾ ಚಂದ್ರಕುಮಾರ್ ಅಧ್ಯ ಕ್ಷತೆ ವಹಿಸಿದ್ದರು ಆಗಮಿಸಿದರು.
ಪ್ರಬಂಧಸ್ಪರ್ಧೆಯಲ್ಲಿ ಹೊಸ ನಗರ ತಾಲೂಕು ರಿಪ್ಪನ್ ಪೇಟೆ ಸರಕಾರಿ ಪ್ರೌಢಶಾಲೆಯ ವಿಂದ್ಯಾ ಜಿ. ಪ್ರಥಮ, ಆನವಟ್ಟಿಯ ಕರ್ನಾಟಕ ಪಬ್ಲಿಕ್ ಶಾಲೆಯ ಭಾಗ್ಯಶ್ರೀ ಕೆ.ಶೇಟ್ ದ್ವಿತೀಯ, ಪಿಳ್ಳಂಗೆರೆ ಶಾಲೆಯ ನಿಖಿಲ್ ಡಿ. ಮೂರನೇ ಸ್ಥಾನ ಪಡೆದಿzರೆ.
ಚರ್ಚಾಸ್ಪರ್ಧೆಯಲ್ಲಿ ತೀರ್ಥ ಹಳ್ಳಿಯ ಸರಕಾರ ಪಿಯು ಕಾಲೇ ಜಿನ ದೀಪ್ತಿ ಬಿ.ಪಿ, ಪಿಇಎಸ್ ಕಾಲೇಜಿನ ಅನಿರುದ್ಧ್, ಕೋಣಂ ದೂರಿನ ಶೃಂಗ ಎಂ.ಆರ್ ವಿಷಯದ ಪರವಾಗಿ ಬಹುಮಾನ ಪಡೆದಿzರೆ. ವಿಷಯಕ್ಕೆ ವಿರೋಧ ವಾಗಿ ಕೋಣಂದೂರಿನ ಪ್ರತೀಕ್, ಸಾಗರ ಪಿಯು ಕಾಲೇಜಿನ ಚಿಂತನ್ ,ಶಿವಮೊಗ್ಗ ಆದಿಚುಂಚನಗಿರಿ ಕಾಲೇಜಿನ ಮಹಾಲಕ್ಷ್ಮೀ ಬಹು ಮಾನ ವಿಜೇತರಾದರು. ತೀರ್ಪು ಗಾರರಾಗಿ ಸಹಕಾರಿ ಅಭಿವೃದ್ಧಿ ಅಧಿಕಾರಿ ಅಶೋಕ ಭಾಗವಹಿಸಿ ದ್ದರು. ಕಾರ್ಯಕ್ರಮದಲ್ಲಿ ಮಹಾ ಲಕ್ಷ್ಮಿ ಪ್ರಾರ್ಥಿಸಿದರು. ಕೆ.ಸಿ.ಹನು ಮಂತಪ್ಪ ಸ್ವಾಗತಿಸಿದರು. ಯಶ ವಂತಕುಮಾರ್ ವಂದಿಸಿದರು.