ಸಹಸ್ರಾರು ಬೆಂಬಲಿಗರೊಂದಿಗೆ ತೆನೆ ಬಿಟ್ಟು ಕೈ ಹಿಡಿಯಲಿರುವ ಶ್ರೀಕಾಂತ್…

ಶಿವಮೊಗ್ಗ: ಜಿಲ್ಲೆಯಲ್ಲಿ ಸುಮಾರು ೨೨ ವರ್ಷಗಳ ಕಾಲ ಜೆಡಿಎಸ್ ಪಕ್ಷವನ್ನು ತಳಮಟ್ಟದಿ ಂದ ಕಟ್ಟಿ ಬೆಳೆಸಿ ಪಕ್ಷದ ಅಧ್ಯಕ್ಷರಾಗಿ ಜಿಲ್ಲೆಯ ೩ ವಿಧಾನಸಭಾ ಕ್ಷೇತ್ರಗ ಳಲ್ಲಿ ಜೆಡಿಎಸ್ ಶಾಸಕರು ಆಯ್ಕೆ ಯಾಗುವಂತೆ ಮಾಡಿದ್ದಲ್ಲದೆ ಮಹಾನಗರ ಪಾಲಿಕೆಯಲ್ಲಿ ಜೆಡಿ ಎಸ್ ಪಕ್ಷದ ಸಮ್ಮಿಶ್ರ ಆಡಳಿತ ಬರಲು ಕಾರಣರಾಗಿದ್ದ ಕೊಡುಗೈ ದಾನಿ ಖ್ಯಾತಿಯ ಎಂ. ಶ್ರೀಕಾಂತ್ ಈಗ ತಮ್ಮ ರಾಜಕೀಯ ಭವಿಷ್ಯದ ಎರಡನೇ ಇನ್ನಿಂಗ್ಸ್‌ನ್ನು ಕಾಂಗ್ರೆಸ್ ಮೂಲಕ ಕಟ್ಟಿಕೊಳ್ಳಲು ನಿರ್ಧರಿಸಿ ದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಎಂ. ಶ್ರೀ ಕಾಂತ್ ಅವರು, ಸೆ.೨೬ ರಂದು ಬೆಂಗಳೂರಿನ ಕಾಂಗ್ರೆಸ್ ಕಛೇರಿ ಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೇರಿದಂತೆ ಪ್ರಮುಖ ನಾಯಕರ ಉಪಸ್ಥಿತಿ ಯಲ್ಲಿ ತಮ್ಮ ಸಹಸ್ರಾರು ಬೆಂಬಲಿ ಗರೊಂದಿಗೆ ಜೆಡಿಎಸ್ ತೊರೆತು ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರುವುದಾಗಿ ತಿಳಿಸಿದರು.
ಶಿವಮೊಗ್ಗ ವಿಧಾನಸಭಾ ಕ್ಷೇತ್ರವೇ ನನ್ನ ರಾಜಕೀಯ ಕರ್ಮ ಭೂಮಿ, ನಾನು ಏನೇ ಮಾಡಿ ದರೂ ಇಲ್ಲಿಯೇ. ಇಷ್ಟು ವರ್ಷ ಇಲ್ಲಿನ ಜನತೆ ತೋರಿರುವ ಪ್ರೀತಿಗೆ ನಾನು ಚಿರಋಣಿ. ಮುಂದೆಯೂ ಇಲ್ಲಿಯೇ ನನ್ನ ಸೇವೆ ಮುಂದು ವರೆಯುತ್ತದೆ, ಆದರೆ ಅದು ಕಾಂಗ್ರೆಸ್ ಪಕ್ಷದ ಮೂಲಕ ಎಂದು ಘೋಷಿಸಿದರು.
ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುವುದು ಕೇವಲ ನನ್ನ ನಿರ್ಧಾರ ವಲ್ಲ, ಇಷ್ಟು ವರ್ಷ ನನ್ನೊಂದಿಗೆ ಸಹಕಾರ ನೀಡಿದ ಬೆಂಬಲಿಗರದ್ದೂ ಆಗಿದೆ ಎಂದರು.
ನಾನು ಶಿವಮೊಗ್ಗಕ್ಕೆ ಬರುವ ಮುನ್ನ ಇಲ್ಲಿ ಜೆಡಿಎಸ್‌ಗೆ ಕೇವಲ ೫೦೦ ರಿಂದ ೧ ಸಾವಿರ ಮತಗಳಿ ದ್ದವು, ನಾನು ೨೦೦೮ರಲ್ಲಿ ಚುನಾವ ಣೆಗೆ ಸ್ಪರ್ಧಿಸಿದ ನಂತರ ಅದು ಸುಮಾರು ೨೫ ಸಾವಿರದವರೆಗೂ ಮತ ಬರುವಂತಾಗಿದೆ. ತಾವು ಕೇವಲ ಪ್ರಚಾರ ಬಯಸದೆ ಜನರ ವಿಶ್ವಾಸಗಳಿಸಿ ಚುನಾವಣೆ ಮಾಡಿ ದ್ದೇನೆ ಎಂದರು.
ಕಳೆದ ಕೆಲ ವರ್ಷಗಳ ಹಿಂದೆ ಯೇ ಕಾಂಗ್ರೆಸ್ ಸೇರುವ ನಿರ್ಧಾರ ಮಾಡಿದ್ದೇ, ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರ ಸ್ವಾಮಿಯ ವರೊಂದಿಗಿನ ಭಾಂದವ್ಯ ದಿಂದಾಗಿ ಪಕ್ಷ ಬಿಡಲು ಕಷ್ಟವಾಗಿತ್ತು, ಆದರೆ ಸೂಕ್ತ ಸಮಯ ಈಗ ಬಂದಿದೆ ಅಷ್ಟೇ ಎಂದರು.
ನನ್ನ ಗೆಳೆಯರು ಅನೇಕರು ಕಾಂಗ್ರೆಸ್‌ನಲ್ಲಿದ್ದಾರೆ, ಅವರೆಲ್ಲರ ಒತ್ತಾಸೆಯೂ ಕಾಂಗ್ರೆಸ್ ಸೇರು ವುದೇ ಆಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಹೀಗೆ ಎಲ್ಲರ ಸಲಹೆಯೂ ಕಾಂಗ್ರೆಸ್ ಸೇರು ವುದೇ ಆಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ಬೇಷರತ್ತಾಗಿ ಹೋಗುತ್ತಿದ್ದೇನೆ, ಆದರೆ ಅಲ್ಲಿ ನನ್ನ ಬೆಂಬಲಿಗರಿಗೆ ಭವಿಷ್ಯ ಸಿಗುವ ನಿರೀಕ್ಷೆ ಹೊಂದಿ ದ್ದೇನೆ. ನನ್ನ ಬಗ್ಗೆ ಎಂದಿಗೂ ನಾನು ಯೋಚಿಸಿದವನ್ನಲ್ಲ, ಪಕ್ಷ ನೀಡಿದ ಕೆಲಸ ಮಾಡುತ್ತ ಬಂದವನು ಎಂದರು.
ಜೆಡಿಎಸ್ ಪಕ್ಷದ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ, ಪಕ್ಷ ನನಗೆ ಸಾಕಷ್ಟು ಅವಕಾಶ ಕಲ್ಪಿಸಿದೆ. ಅದಕ್ಕೆ ಧನ್ಯವಾದಗಳು ಎಂದ ಅವರು, ಇಂದಿನ ರಾಜಕೀಯ ಹಾಗೂ ಶಿವಮೊಗ್ಗದ ಮತದಾರರ ಅಭಿಲಾಷೆಯಂತೆ ತಾವು ಕಾಂಗ್ರೆಸ್ ಸೇರುವುದು ಸರಿ ಎಂಬ ಲೆಕ್ಕಾ ಚಾರಕ್ಕೆ ಬಂದಿದ್ದೇನೆ ಎಂದು ಅವರು ತಿಳಿಸಿದರು.
ಎಂ. ಶ್ರೀಕಾಂತ್‌ರೊಂದಿಗೆ ಮಾಜಿ ಮೇಯರ್ ನಾಗರಾಜ್ ಕಂಕಾರಿ, ಮಾಜಿ ಉಪಮೇಯರ್ ಪಾಲಾಕ್ಷಿ, ಮಾಜಿ ಪಾಲಿಕೆ ಸದಸ್ಯರು ಎಸ್. ಎನ್. ಮಹೇಶ್, ರಾಜಣ್ಣ, ನವಾಬ್, ಸೈಯದ್ ನುಮಾನ್, ನರಸಿಂಹ ಗಂಧದ ಮನೆ, ಬಾಸ್ಕರ್, ಶ್ಯಾಮು ಡಿ, ಆನಂದ್, ಮಂಜುನಾಥ್ ನವುಲೆ, ಅನಿಲ್ ಕುಮಾರ್, ಉಮೇಶ್, ಸಂತೋಷ್, ವಿನಯ್, ಪುನೀತ್ ಮತ್ತಿತರರೆ ಪ್ರಮುಖರು ತಮ್ಮೊಂ ದಿಗೆ ಕಾಂಗ್ರೆಸ್ ಸೇರುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿಮಾನಿಗಳು ತಮ್ಮನ್ನು ಹಿಂಬಾಲಿಸಲಿದ್ದಾರೆ ಎಂದರು.