ಅವಿಭಕ್ತ ಕುಟುಂಬ ಪದ್ಧತಿ ಅವಶ್ಯ: ಸ್ವಾಮೀಜಿ

ಹೊಳೆಹೊನ್ನೂರು : ಅವಿಭಕ್ತ ಕುಟುಂಬ ಪದ್ಧತಿ ಮತ್ತೆ ಬರಬೇಕಿದೆ. ಅದನ್ನು ನೋಡುವುದೇ ಒಂದು ಸಂತೋಷ. ಹೀಗೆ ಬದುಕುವುದೇ ಸ್ತುತ್ಯವಾದದ್ದು ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಈಗ ಕಾಲ ಬದಲಾಗಿದೆ. ಪ್ರಸ್ತುತ ಗಂಡ-ಹೆಂಡತಿ ಇಬ್ಬರೂ ಒಟ್ಟಿಗೆ ಇರುವುದೇ ಅವಿಭಕ್ತ ಕುಟುಂಬ ಎನ್ನುವಂತೆ ಹೇಳುವ ಘೋರವಾದ ಸ್ಥಿತಿ ಇದೆ. ಎಂತಹ ಕಷ್ಟ ಬಂದರೂ ಒಟ್ಟಿಗೆ ಬಾಳುವ ಮನಸ್ಥಿತಿ ರೂಢಿಸಿಕೊಳ್ಳಬೇಕು. ನೂರಾರು ಜನರು ಒಂದೇ ಮನೆಯಲ್ಲಿ ಸುಖವಾಗಿ ಇರುತ್ತಿದ್ದ ನಮ್ಮ ಸಂಸ್ಕೃತಿಯಲ್ಲಿ ಇಂದು ಗಂಡ ಹೆಂಡತಿಯ ನಡುವೆ ಸಾಮರಸ್ಯ ಕಡಿಮೆಯಾಗುತ್ತಿದೆ ಎಂದರೆ ಎಂತಹ ಅನರ್ಥ ಎಂದರು.
ಕಷ್ಟದಲ್ಲಿರುವಾಗ ಅಣ್ಣ ತಮ್ಮಂದಿರು ಹೇಗೆ ಪರಸ್ಪರ ಸಹಾಯ ಮಾಡಬೇಕು ಎಂಬುದನ್ನು ಮಹಾಭಾರತ ನಮಗೆ ಕಲಿಸುತ್ತದೆ. ಅeತವಾಸದಲ್ಲಿದ್ದ ಪಾಂಡವರು ಪರಸ್ಪರ ಒಬ್ಬರಿ ಗೊಬ್ಬರು ಯಾರಿಗೂ ತಿಳಿಯ ದಂತೆಯೇ ಸಹಾಯ ಮಾಡಿಕೊಂಡಿzರೆ ಎಂದರು.
ಪಂಡಿತ ಪೂಜ್ಯರಾದ ಗುತ್ತಲ ರಂಗಾಚಾರ್ಯ, ಮಠದ ದಿವಾನರಾದ ಶಶಿ ಆಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ನವರತ್ನ ಪುರುಷೋತ್ತಮಾ ಚಾರ್ಯ, ನವರತ್ನ ರಾಮಾ ಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಕಪುರ ಜಯ ತೀರ್ಥಾಚಾರ್ಯ, ಬಾಳಗಾರು ಜಯತೀರ್ಥಾಚಾರ್ಯ ಮೊದಲಾದವರಿದ್ದರು.