ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಿ…
ಶಿಕಾರಿಪುರ: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯಕ್ಕೆ ಸರಿಸಮಾನವಾಗಿ ಪಠ್ಯೇತರ ಚಟುವಟಿಕೆಗೂ ಹೆಚ್ಚಿನ ಮಹತ್ವ ನೀಡಬೇಕು. ಶಿಕ್ಷಕರು ಪಠ್ಯದಲ್ಲಿನ ನಾಟಕವನ್ನು ಶಿಕ್ಷಣಕ್ಕೆ ಮಾತ್ರ ಸೀಮಿತಗೊಳಿಸದೆ ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ನಾಟಕ, ರಂಗಭೂಮಿಯ ಗೀಳನ್ನು ಬೆಳೆಸು ವಂತೆ ಕ್ಷೇತ್ರದ ಶಾಸಕ ಬಿ.ವೈ ವಿಜಯೇಂದ್ರ ತಿಳಿಸಿದರು.
ಪಟ್ಟಣದ ಸಾಂಸ್ಕೃತಿಕ ಭವನ ದಲ್ಲಿ ಕೊಪ್ಪಳದ ರಂಗಧಾರಾ ರೆಪರ್ಟರಿ ಹಾಗೂ ಕಲ್ಪುರ ಸಾಂಸ್ಕೃತಿಕ ಸಂಘದ ಸಹಯೋಗ ದಲ್ಲಿ ಸ್ಥಳೀಯ ಪಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾ ಗಿದ್ದ ಚಂದ್ರಶೇಖರ ಕಂಬಾರರ ಬೆಪ್ಪು ತಕ್ಕಡಿ ಬೋಳೆ ಶಂಕರ ಹಾಗೂ ಪೂರ್ಣಚಂದ್ರ ತೇಜಸ್ವಿರವರ ಕೃಷ್ಣೆಗೌಡರ ಆನೆ ನಾಟಕ ಪ್ರದರ್ಶನ ವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು ಅವರು ಪಠ್ಯದಿಂದ ಮಾತ್ರ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಅಸಾಧ್ಯ. ಕೇವಲ ಅಂಕಗಳಿಕೆಯಿಂದ ವಿದ್ಯಾರ್ಥಿಗಳ ಜೀವನ ಪರಿಪೂರ್ಣವಾಗುವುದಿಲ್ಲ ಪಠ್ಯಕ್ಕೆ ಸರಿಸಮಾನವಾಗಿ ಪಠ್ಯೇತರ ಚಟುವಟಿಕೆಗೂ ಹೆಚ್ಚಿನ ಮಹತ್ವ ನೀಡಬೇಕು ಎಂದು ತಿಳಿಸಿದ ಅವರು, ಶಿಕ್ಷಣದಲ್ಲಿ ಹಲವು ಶ್ರೇಷ್ಠ್ಟ ಸಾಹಿತಿಗಳ ನಾಟಕಗಳನ್ನು ವಿದ್ಯಾರ್ಥಿಗಳು ಅಭ್ಯಾಸಿಸಬೇಕಾ ಗಿದ್ದು ನಾಟಕಗಳು ಕೇವಲ ಅಂಕ ಗಳಿಕೆಗೆ ಮಾತ್ರ ಸೀಮಿತವಾಗದೆ ಶಿಕ್ಷಕರು ವಿದ್ಯಾರ್ಥಿಗಳಿಗೆ ನಾಟಕ, ರಂಗಭೂಮಿಯ ಬಗ್ಗೆ ಗೀಳನ್ನು ಬೆಳೆಸಬೇಕಾಗಿದೆ ವಿದ್ಯಾರ್ಥಿ ದೆಸೆ ಯಲ್ಲಿ ನಾಟಕದ ಗೀಳು ಭವಿಷ್ಯದಲ್ಲಿ ಶ್ರೇಷ್ಟ ನಟನಾಗಿ ರೂಪಿಸಬಲ್ಲದು ಎಂದು ಅಭಿಪ್ರಾಯಪಟ್ಟರು.
ಶ್ರೇಷ್ಟ ಸಾಹಿತಿಗಳ ನಾಟಕವನ್ನು ಪ್ರದರ್ಶಿಸುವ ಮೂಲಕ ವಿದ್ಯಾರ್ಥಿ ಗಳಲ್ಲಿನ ಸುಪ್ತ ಪ್ರತಿಭೆ ಯನ್ನು ಪ್ರೋತ್ಸಾಹಿಸುವ ಪ್ರಯತ್ನ ವನ್ನು ಶ್ಲಾಸಿದ ಅವರು, ಯುವ ಪೀಳಿಗೆಯನ್ನು ಸೂಕ್ತ ಮಾರ್ಗದಲ್ಲಿ ಕರೆದೊಯ್ಯುವ ನಿಟ್ಟಿನಲ್ಲಿ ಇಲಾಖೆ, ಸಂಘ ಸಂಸ್ಥೆಯ ಎಲ್ಲ ಕಾರ್ಯಕ್ಕೆ ಸಹಕರಿಸುವುದಾಗಿ ಭರವಸೆ ನೀಡಿದರು.
ವೇದಿಕೆಯಲ್ಲಿ ಸಂಘದ ರಾಜ್ಯ ಸಂಯೋಜಕ ಶರಣು ಶೆಟ್ಟರ್, ನಿರ್ದೇಶಕ ಲಕ್ಷ್ಮಣ ಪೀರಗಾರ, ಸಂಯೋಜಕ ನಾಗರಾಜ ಕಲ್ಲೂರ, ತಾ.ಕಸಾಪ ಅಧ್ಯಕ್ಷ ಎಚ್.ಎಸ್ ರಘು, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚನ್ನವೀರಪ್ಪ, ಸರ್ಕಾರಿ ಬಾಲಿಕಾ ಪಪೂ ಕಾಲೇಜು ಉಪನ್ಯಾಸಕ ಕೆ.ಎಚ್ ಪುಟ್ಟಪ್ಪ, ಹೊಬ್ಯಾನಾಯ್ಕ, ರೇವಣಪ್ಪ, ಈಸೂರು ಕಾಲೇಜಿನ ಉಪನ್ಯಾಸಕ ಗಂಗಪ್ಪ,ಕುಮದ್ವತಿ ಕಾಲೇಜಿನ ಉಪನ್ಯಾಸಕ ಶಿವರಾಜ್,ನಳಿನ ಪಾಟೀಲ್ ಮತ್ತಿತರರು ಇದ್ದರು.