ಹರಿಹರದಲ್ಲಿ ಪರಿಸರ ಸ್ನೇಹಿ ಗಣೇಶಮೂರ್ತಿಯ ಕಲಾವಿದರು…

ಭಾರತದ ಪುರಾಣ ಮತ್ತು ಸಂಸ್ಕೃತಿಯ ಪ್ರಕಾರ ಯಾವುದೇ ಪೂಜ ಕಾರ್ಯಗಳಲ್ಲಿ ಮೊದಲು ಪೂಜಿಸುವ ದೇವರು ಗಣೇಶ. ಎ ದೇವರು ಮತ್ತು ದೇವತೆಗಳಲ್ಲಿ ಗಣೇಶ ನನ್ನು ಪ್ರಥಮ ಪೂಜ್ಯ ಎಂದು ಹೇಳಲಾಗು ತ್ತದೆ. ಅವರನ್ನು ವಿನಾಯಕ, ವಿಘ್ನ ವಿನಾಶಕ, ಸರ್ವಪ್ರದಾಯ, ಮಂಗಳಮೂರ್ತಿ ಮುಂತಾದ ಹೆಸರುಗಳಿಂದ ಕರೆಯುತ್ತಾರೆ.
ಗಣೇಶನು ಮನಸ್ಸಿನ ಶಕ್ತಿ, ಸೃಜನಶೀಲತೆ, eನದ ದೇವರು ಮತ್ತು ಯೋಗದ ಪ್ರಕಾರ ಮೂಲಾಧಾರ ಚಕ್ರವು ಗಣೇಶನ ದೇಹದಲ್ಲಿ ವಾಸಿಸುವ ಸ್ಥಳವಾಗಿದೆ ಆದ್ದರಿಂದ ಯೋಗಿ ಗಳು ದೇಹದೊಳಗಿನ ಗಣೇಶನ ಶಕ್ತಿಯನ್ನು ಅನುಭವಿಸಲು ಧ್ಯಾನವನ್ನು ಅಭ್ಯಾಸ ಮಾಡುತ್ತಾರೆ. ನಮ್ಮ ಹಿಂದು ಧರ್ಮದ ಅನೇಕ ಹಬ್ಬಗಳಲ್ಲಿ ಗಣೇಶ ಚತುರ್ಥಿಗೆ ವಿಶಿಷ್ಠ ಸ್ಥಾನವನ್ನು ನೀಡಲಾಗಿದೆ.


ಭಾದ್ರಪದ ಮಾಸದಲ್ಲಿ ಗಣೇಶನ ಮೂರ್ತಿಯನ್ನು ಕೂಡಿಸುವ ಸಂಪ್ರದಾಯವಿದೆ. ಈ ಆಚರಣೆ ನಮ್ಮಲ್ಲಿ ಮೊದಲಿನಿಂದಲೂ ಇದೆ. ಮಾರುಕಟ್ಟೆಯಲ್ಲಿ ಇಟ್ಟಿರುವ ಗಣೇಶನ ಮೂರ್ತಿಗಳನ್ನು ಖುಷಿಯಿಂದಲೇ ತಂದು ಮನೆಯಲ್ಲಿಟ್ಟು ಶಾಸೋಕ್ತವಾಗಿ ಪೂಜಿಸುವ ಸಂಸ್ಕೃತಿ ನಮ್ಮದು. ೩, ೫, ೧೧ ಹಾಗೂ ೨೧ ದಿನಗಳವರೆಗೆ ಪೂಜಿಸಿ, ವಿಸರ್ಜಿಸುತ್ತಾರೆ.
ಪ್ಲಾಸ್ಟ್‌ರ್ ಆಫ್ ಪ್ಯಾರೀಸ್ ಗಣಪಗಳ ಬಳಕೆಗೆ ಬದಲು ಮಣ್ಣಿನಿಂದ ತಯಾರಿಸಿದ ಗಣಪಗಳನ್ನು ಉಪಯೋಗಿಸಲು ಸರ್ಕಾರವು ಜನತೆಗೆ ಕರೆ ಕೊಟ್ಟ ಹಿನ್ನೆಲೆಯಲ್ಲಿ, ಹರಿಹರ ನಗರದ ಕುಂಬಾರ ಬಸವರಾಜರವರ ಪುತ್ರರಾದ ಬಿ.ವಾಗೀಶ್, ಬಿ.ಗಿರೀಶ್ ಮಣ್ಣಿನಿಂದ ಮಾಡಿದ ನೈಸರ್ಗಿಕ ಗಣಪಗಳಿಗೆ ಎಂದಿನಂತೆ ಈ ಬಾರಿಯೂ ಹೆಚ್ಚಿನ ಬೇಡಿಕೆ ಇತ್ತು. ಹರಿಹರದ ನಗರದ ಕುಂಬಾರ ಓಣಿ ಕೇವಲ ಮಣ್ಣಿನ ಗಡಿಗೆ- ಮಡಿಕೆಗಳನ್ನು ಮಾಡುವ ವೃತ್ತಿಗೆ ಸೀಮಿತವಾಗಿತ್ತು. ಆದರೆ ಈಗ ವಿವಿಧ ಆಕಾರದ, ವಿವಿಧ ಗಾತ್ರದ ಗಣೇಶನ ಮೂರ್ತಿಗಳನ್ನು ತಯಾರಿಸುತ್ತಿzರೆ. ಕುಂಬಾರ ಗಣೇಶ ಓಣಿ ಎಂದು ಕರೆದರೂ ತಪ್ಪಾಗಲಾರದು. ಈ ಓಣಿಯಲ್ಲಿ ಇನ್ನು ಅನೇಕ ಕಲಾವಿದರಿzರೆ. ಉತ್ತಮ ಆರೋಗ್ಯವುಳ್ಳ ೮೫ ವಯಸ್ಸಿನ ಕುಂಬಾರ ಗಣೇಶಪ್ಪನವರು ಇಂದಿಗೂ ಈ ಮಣ್ಣಿನ ಗಣೇಶ ಮೂರ್ತಿಗಳನ್ನು ಮಾಡುತ್ತಾ ಬಂದಿzರೆ. ಇಲ್ಲಿನ ಐದಾರು ಕುಟುಂಬಗಳು ಈ ವೃತ್ತಿಯನ್ನು ಮುಂದುವರೆಸಿಕೊಂಡು ಬಂದಿzರೆ. ಸುಮಾರು ನಾಲ್ಕು ತಲೆಮಾರುಗಳಿಂದ ಕುಂಬಾರಿಕೆ ವೃತ್ತಿಯನ್ನು ಮಾಡಿಕೊಂಡು ಬಂದ ಈ ಕುಟುಂಬದವರು ಕಳೆದ ೧೫-೨೦ ವರ್ಷಗಳಿಂದ ಗಣೇಶನ ಮೂರ್ತಿಗಳನ್ನು ತಯಾರಿಸುವಲ್ಲಿ ಹೆಸರು ಗಳಿಸಿzರೆ. ಇಂದು ಇವರು ಗಣೇಶ ತಯಾರಿಸುವಲ್ಲಿ ನುರಿತ ಅದ್ಭುತ ಕಲಾವಿದರೆನಿಸಿzರೆ.
ಕುಂಬಾರಿಕೆ ವೃತ್ತಿಯ ಹಳ್ಳಿ ಬಸಪ್ಪನವರ ಪುತ್ರ ಬಸಪ್ಪನವರು ಸಂಗೀತ ವಿದ್ವಾಂಸರು. ಇವರ ಪುತ್ರರೇ ಕರಿಬಸಪ್ಪನವರು. ಶರಣ ಪರಂಪರೆಯನ್ನು ರೂಢಿಸಿಕೊಂಡು ಬಂದ ಇವರ ಮನೆಯನ್ನು ಪ್ರವೇಶಿಸಿದೊಡನೆ ಜಗದ್ಗುರುಗಳ, ಸಾಧು-ಸಂತರ, ಶರಣರ, ಅನೇಕ ದೇವರ ಹಳೆಯ ನೂರಾರು ಪೋಟೋಗಳನ್ನು ಕಾಣಬಹುದು. ಗುರು-ಲಿಂಗ-ಜಂಗಮರ ಪ್ರೇಮಿಗಳಾದ ಕುಂಬಾರ ಕರಿಬಸಪ್ಪನವರ ಮೊಮ್ಮಕ್ಕಳು ಹಾಗೂ ಬಸವರಾಜಪ್ಪನವರ ಮಕ್ಕಳೇ ಈ ಕಲಾವಿದರು. ಕುಂಬಾರಿಕೆ ವೃತ್ತಿಯಿಂದ ಮೂರ್ತಿಗಳನ್ನು ಮಾಡುವ ವಿದ್ಯೆಯನ್ನು ಕಲಿತವರು. ಇವರ ಚಿಕ್ಕಪ್ಪ ಶಿಕ್ಷಕ ಗಂಗಾಧರ ಹಾಗೂ ಸಂಗೀತ ಶಿಕ್ಷಕ ಕಾಂತರಾಜ ಇವರ ಪ್ರೋತ್ಸಾಹ ಇವರಿಗಿದೆ. ಇವರ ಮನೆಯ ಪ್ರತಿಯೊಬ್ಬ ಸದಸ್ಯರು ಗಣೇಶ ಮೂರ್ತಿಗಳನ್ನು ತಯಾರಿಸುವಲ್ಲಿ ಸಹಕಾರ ನೀಡುತ್ತಾ ಬಂದಿzರೆ.
ತಾಲೂಕಿನ ವಿವಿಧ ಗ್ರಾಮಗಳಿಂದ ಮಣ್ಣನ್ನು ಸಂಗ್ರಹಿಸಿ, ಸ್ವಚ್ಛಗೊಳಿಸಿ ಸ್ನಾನ ಮಾಡಿಯೇ ಮೂರ್ತಿಗಳನ್ನು ತಯಾರಿಸಲು ಪ್ರಾರಂಭಿಸುತ್ತಾರೆ. ಪ್ರತಿವರ್ಷವೂ ದಸರಾದಿಂದ ಗಣೇಶ ಮೂರ್ತಿಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಶ್ರ್ರಾರವಣ ಮಾಸದ ನಂತರ ತಯಾರಿಸಿದ ಮೂರ್ತಿಗಳಿಗೆ ಬಣ್ಣವನ್ನು ಕೊಟ್ಟು, ಮಾರುಕಟ್ಟೆಗೆ ತರುವರು. ಈ ವರ್ಷ ೯ ಇಂಚಿನಿಂದ ಹಿಡಿದು ೫-೬ ಅಡಿಗಳವರೆಗೆ ಸುಮಾರು ಒಂದು ಸಾವಿರ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸಿzರೆ. ಕೊಪುರದ ಉತ್ತಮ ಬಣ್ಣ ಅಂದರೆ ಪರಿಸರ ಸ್ನೇಹಿ ಬಣ್ಣವನ್ನು ಮೂರ್ತಿಗಳಿಗೆ ಕೊಡುವರು. ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುವುದಲ್ಲದೆ ಅತಿ ಹೆಚ್ಚು ಶ್ರಮವನ್ನು ಹಾಕುವರು.
ಇವರು ತಯಾರಿಸಿದ ಈ ಗಣಪ ಮೂರ್ತಿಗಳು ಗದಗ, ರಾಣೆಬೆನ್ನೂರು, ಹುಬ್ಬಳ್ಳಿ, ಹಂಪಿ-ಹೊಸಪೇಟೆ, ದಾವಣಗೆರೆ ಕಡೆಗಳಲ್ಲಿ ಬಹು ಬೇಡಿಕೆ ಇದ್ದು, ೫೦೦-೬೦೦ಕ್ಕೂ ಹೆಚ್ಚು ಗಣೇಶ ಮೂರ್ತಿಗಳು ಮಾರಾಟವಾಗುತ್ತವೆ ಎಂದು ಅವರು ಹೇಳುತ್ತಾರೆ.
ಪರಿಸರಸ್ನೇಹಿ ಗಣೇಶ ಮೂರ್ತಿಗಳಲ್ಲಿ ಮಹಾರಾಜ ಗಣಪತಿ. ಪೂನಾದ ದಗಡು ಶೇಟ್ ಗಣಪತಿ, ಮುಂಬೈ ಲಾಲ್‌ಬಾಗ್‌ಚಾ ಗಣಪತಿ, ಹನುಮಾನ್ ಗಣಪತಿ, ನಂದಿವಾಹನ ಗಣಪತಿ, ಬಾಲ ಗಣಪತಿ, ಪರಮೇಶ್ವರ ಗಣಪತಿ, ವಿಷ್ಣು-ಗರುಡ ಗಣಪತಿ, ಮುಂಬೈ ಚಿಂತಾಮಣಿ ಗಣಪತಿ, ಮೂಷಕವಾಹನ ಗಣಪತಿ, ಮರ್ವಾಡಿ ಪೇಟಾ ಗಣಪತಿ, ಬಡಕಾನ್ ಗಣಪತಿ, ಸಿದ್ದಿವಿನಾಯಕ ಗಣಪತಿ, ಇಡಗುಂಜಿ ಗಣಪತಿ, ಸಾಯಿಬಾಬಾ ಗಣಪತಿ, ಪಂಚಮುಖಿ ಆಂಜನೇಯ ಗಣಪತಿ ಹೀಗೇ ವಿವಿಧ ರೀತಿಯ ಆಕರ್ಷಕ ಗಣೇಶ ಮೂರ್ತಿಗಳನ್ನು ಈ ಕಲಾವಿದರು ತಯಾರಿಸಿzರೆ. ವಿವಿಧ ಮಣ್ಣಿನ ಮೂರ್ತಿಗಳೊಂದಿಗೆ ಚಿತ್ರಕಲೆ, ಪೇಂಟಿಂಗ್, ಕ್ರಿಯೇಟಿವ್ ಆರ್ಟ್ ಮಾಡುವಲ್ಲಿ ಈ ಸಹೋದರರು ಪ್ರವೀಣರು.
ಶುದ್ಧ ನೈಸರ್ಗಿಕ ಮಣ್ಣಿನಿಂದ ಗಣೇಶನ ಮೂರ್ತಿಗಳನ್ನು ತಯಾರಿಸಿರುವುದರಿಂದ ನೀರಿನಲ್ಲಿ ಕರಗಿ ಹೋಗುತ್ತವೆ. ಮುಂದಿನ ವರ್ಷದಿಂದಾದರೂ ನಾಡಿನಾದ್ಯಂತ ಪರಿಸರ ಸ್ನೇಹಿ ಗಣೇಶಗಳು ಮಾರುಕಟ್ಟೆಗೆ ಬರಲಿ. ಇವರ ಈ ಪರಿಸರ ಕಾಳಜಿ ಮೆಚ್ಚುವಂತಹುದು. ವಿವಿಧೆಡೆಗಳಿಂದ ಭಕ್ತರು ಈಗಾಗಲೇ ಗಣೇಶ ಮೂರ್ತಿಗಳನ್ನು ಖರೀದಿಸುತ್ತಿದ್ದು, ಗಣೇಶ ಮೂರ್ತಿಗಳು ಬೇಕಾದಲ್ಲಿ ೬೩೬೬೩೪೫೯೯೦ ನಂಬರಿಗೆ ಸಂಪರ್ಕಿಸಬಹುದು. ಸಹೋದರರ ಈ ಕಲೆ ನಾಡಿನಾದ್ಯಂತ ಪರಿಚಿತವಾಗಲಿ. ವಿಘ್ನನಿವಾರಕ ಗಣೇಶ ಸರ್ವರಿಗೂ ಶುಭವನ್ನುಂಟುಮಾಡಲಿ.

ಹೆಚ್.ಎಂ. ಗುರುಬಸವರಾಜಯ್ಯ.ಉಪನ್ಯಾಸಕರು ನಂದಿಪುರ