ಭವಿಷ್ಯ ಸ್ಪಷ್ಟವಾಗಿ ಹೇಳಬೇಕಾದಲ್ಲಿ ನಿರ್ಧಿಷ್ಟ ಕಾಲ ಘಟ್ಟವನ್ನರಿತು ಹೇಳುವುದು ಸೂಕ್ತ: ಸ್ವಾಮೀಜಿ

ಹೊನ್ನಾಳಿ: ಯಾವುದೆ ಒಂದು ಭವಿಷ್ಯವನ್ನ ಸ್ಪಷ್ಟವಾಗಿ ಹೇಳಬೇಕಾದಲ್ಲಿ ಅದಕ್ಕೆ ನಿರ್ದಿಷ್ಟ ಕಾಲ ಘಟ್ಟವನ್ನರಿತು ಹೇಳುವುದು ಸೂಕ್ತ ಎಂಬುದಾಗಿ ಕೊಡಿ ಮಠದ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಪ್ರಸಿದ್ದ ಸುಕ್ಷೇತ್ರ ಕೋಡಿಮಠ ಮಹಾ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಹೊನ್ನಾಳಿ ದುರ್ಗಿಗುಡಿ ನಿವಾಸಿ ಶ್ರೀಮತಿ ನಾಗವೇಣಿ ಮಂಜುನಾಥ ಮಾಳಂಕಿ ಅವರ ನಿವಾಸಕ್ಕೆ ಬೇಟಿ ನೀಡಿದ ಸಂದರ್ಭ ದಲ್ಲಿ ಪತ್ರಕರ್ತರು ಕೆಳಿದ ಪ್ರಶ್ನೆಗೆ ಮೆಲಿನಂತೆ ಪ್ರತಿಕ್ರಿಯಿಸಿದರು.
ಕೇಂದ್ರದಲ್ಲಿ ಮತ್ತೆ ಬಿಜಿಪಿ ಗೆಲುವು ಸಾಧಿಸಿ ಮೋದಿ ಪ್ರಧಾನಿಯಾಗುವರೆ, ರಾಜ್ಯದಲ್ಲಿ ಸಿದ್ದರಾಮಯ್ಯ ನೆತೃತ್ವದ ಕಾಂಗ್ರೆಸ್ ಪಕ್ಷವು ಅನೇಕ ಯೋಜನೆಗಳನ್ನ ಘೋಷಣೆ ಮಾಡಿ ಜರಿಗೆ ಮುಂದಾಗಿದ್ದು ರಾಜ್ಯ ಸರ್ಕಾರಕ್ಕೆ ಭವಿಷ್ಯವಿದೆಯೇ ಎಂಬ ಪ್ರಶ್ನೆಗೆ ಮೆಲಿನಂತೆ ನುಡಿದ ಪೂಜ್ಯರು, ಇಂತಿಷ್ಟು ಕಾಲಘಟದ ಒಳಗೆ ಭವಿಷ್ಯ ಹೇಳಬೇಕಾಗುತ್ತದೆ ಈ ಹಿಂದೆ ರಾಜ್ಯದಲ್ಲಿ ಚುನಾವಣೆ ಸಮಿಪಿಸಿದಾಗ, ನಾವು ರಾಜ್ಯದಲ್ಲಿ ಸ್ಥಿರ ಸರ್ಕಾರ ಬರುತ್ತದೆಂಬ ಹೇಳಿದಕೆ ನೀಡಿzವು ಅದು ಸತ್ಯವಾಗಿದೆ. ಅದರಂತೆ ಕೇಂದ್ರದಲ್ಲಿ ಇನ್ನು ಚುನಾವಣೆ ಆರೇಳು ತಿಂಗಳು ಇದ್ದು ಅದು ಭವಿಷ್ಯ ಕಾ ಮಿತಿಯಲ್ಲಿಲ್ಲ ಮತ್ತು ಹೇಳಿಕೆಯು ದೇಶದ ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ ಎಂದು ಸೂಚ್ಯವಾಗಿ ಹೇಳಿದರು.
ಅಳುವ ಸರ್ಕಾರಗಳು ಏನೇ ಯೋಜನೆಗಳನ್ನು ಜರಿಗೆ ತಂದರೂ ತೊಂದರೆ ಇಲ್ಲ. ಕಾರಣ ನಮ್ಮ ಕರ್ನಾಟಕ ಪ್ರಾಕೃತಿಕವಾಗಿ ಎಲ್ಲಾ ರೀತಿಯಲ್ಲಿ ಸಮೃದ್ದವಾಗಿದ್ದು ಅಭಿವೃದ್ಧಿಗೆ ಪೂರಕವಾದ ನೆಲ, ಜಲ, ಪರಿಸರ ಸೇರಿದಂತೆ ಅನೇಕ ರೀತಿಯ ಸಂಪತ್ತಿದ್ದು ಇದನ್ನು ಸಮರ್ಪ ಕವಾಗಿ ಬಳಿಸಿಕೊಂಡಾಗ ಯಾವುದೇ ತೊಂದರೆ ಆಗದು ಎಂದು ವಿವರಿಸಿದರು.


ರಾಜ್ಯದಲ್ಲಿ ಅಮವಾಸ್ಯೆ ಬಳಿಕ ಮಳೆ ಬರುತ್ತದೆ. ರೈತರು ಹಾಗು ಜನತೆ ಆತಂಕ ಪಡುವ ಅಗತ್ಯವಿಲ್ಲ, ಕಾರ್ತಿಕ, ಸಂಕ್ರಾಂತಿ ಸಂದರ್ಭದಲ್ಲಿ ರಾಜ್ಯದಲ್ಲಿ ಕೆಲ ಅವಘಢಗಳು ನಡೆಯುವ ಸಂಭವಗಳಿವೆ ಎಂದು ಮನುಷ್ಯ ಮಾಡಿದ ತಪ್ಪುಗಳನ್ನು ಭಗವಂತ ಕ್ಷಮಿಸುತ್ತಾನೆ. ಆದರೆ ತಿಳಿದೂ ತಪ್ಪುಗಳನ್ನು ಮಾಡಿದಾಗ ಕ್ಷಮಿಸಲಾರ ಇತ್ತೀಚಿನ ದಿನಗಳಲ್ಲಿ ಗೊತ್ತಿದ್ದೂ ಮನುಷ್ಯ ಪ್ರಕೃತಿ, ನೆಲ, ಜಲ ಇವುಗಳನ್ನು ನಿರಂತರವಾಗಿ ದುರುಪಯೋಗ ಪಡಿಸಿ ಕೊಳ್ಳುತ್ತಿರುವ ಕಾರಣ ಇಂದು ನಾವು ಅನೇಕ ರೀತಿಯ ಪ್ರಕೃತಿ ವಿಕೋಪಗಳನ್ನು ನೋಡುತ್ತಿದ್ದೇವೆ ಎಂದು ಹೇಳಿದರು.
ಗುರುಗಳಲ್ಲಿ ಸಮಾಜಕಾರಕ ಹಾಗೂ ಮೋಕ್ಷಕಾರಕ ಗುರು ಳಿದ್ದಾರೆ, ಜತಿಗಳು ಮನೆಯಲ್ಲಿರ ಬೇಕು ಧರ್ಮ ಹೊರಗಡೆ ಇರಬೇಕು ಆಗ ಶಾಂತಿ ಇರುತ್ತದೆ ಎಂದು ಅಭಿಪ್ರಾಯ ಪಟ್ಟರು.
ಕಾಲeನವೇ ಗುರುಗಳ ಸಂಪತ್ತಾಗಿದ್ದು ಕಾಲeನದಲ್ಲಿ ಕಟ್ಟಿಗೆ ಹಾಡುತ್ತದೆ, ಕಬ್ಬಿಣವು ಓಡುತ್ತದೆ, ಅಬ್ಬಬ್ಬ ಗಾಳಿ ಮಾತನಾಡುತ್ತದೆ ಎಂದು ನೂರಾರು ವರ್ಷಗಳಲ್ಲಿ ಹೇಳಲಾಗಿದ್ದು ಇದು ಸತ್ಯವಾಗಿದೆ ಕಟ್ಟಿಗೆ ಮತ್ತು ಕಬ್ಬಿಣ ಅಂದರೆ ಇಂದು ರೈಲುಗಳು ಬಂದಿ ರುವ ಬಗ್ಗೆ ಯಾದರೆ, ಗಾಳಿ ಮಾತ ನಾಡುತ್ತದೆ ಎಂದರೆ ಮೊಬೈಲ್ ಬಂದಿರುವುದಕ್ಕೆ ಸಾಕ್ಷಿಯಾಗಿದೆ. ಇದೆ ರೀತಿ ಇನ್ನು ಕಲ್ಲಿನ ಕೋಳಿ ಕೂಗುತ್ತದೆ ಎಂದರೆ ಇಂದು ಮೊಬೈಲ್ ಗಲ್ಲಿರುವ ಸಿಮ್ ಗಳಾಗಿವೆ ಎಂದು ವಿವರಿಸಿದರು.
ಯಾವುದು ಮನುಷ್ಯನಿಗೆ, ಸಮಾಜಕ್ಕೆ ಶಾಂತಿ, ನಮ್ಮದಿ ನೀಡುತ್ತದೆಯೋ ಅದುವೆ ಧರ್ಮ ವಾಗುತ್ತದೆ, ಇನ್ನು ಸಮಾತನ ಧರ್ಮದ ಬಗ್ಗೆ ಹೆಚ್ಚು ಚರ್ಚೆ ಯಾಗುತ್ತಿರುವ ಬಗ್ಗೆ ಸುದ್ದಿಗಾರರು ಪ್ರಶ್ನಸಿದಾಗ ಈ ಬಗ್ಗೆ ಈಗಾಗಲೇ ಹುಬ್ಬಳಿಯಲ್ಲಿ ಮಾತನಾಡಿದ್ದೇನೆ ಪದೇ ಪದೇ ಹೇಳುವ ಅಗತ್ಯವಿಲ್ಲ ಎಂದರು.
ನಂತರ ಧರ್ಮ ಮತ್ತು ರಾಜಕಾರಣದ ಕುರಿತು ಮಾತನಾಡಿ ನೀರಿನ ಮೇಲೆ ದೊಣಿ ಇರಬೇಕೇ ಹೊರತು ದೋಣಿಯೊಳಗೆ ನೀರು ಬಂದರೆ ಆಪಾಯ ತಪ್ಪದು ಎಂದು ಸೂಚ್ಯವಾಗಿ ಹೇಳಿದರು .
ರಾಜಕಾರಣೆಗಳಾಗಲಿ, ಗುರು ಗಳಾಗಲಿ ಸಮಾಜದಲ್ಲಿ ಶಾಂತಿ ನಿರ್ಮಿಸುವಂತಹ ಹೇಳಿಕೆಗಳನ್ನು ನೀಡಬೇಕು ಆಶಾಂತಿ ನಿರ್ಮಾಣ ಮಾಡುವಂತಹ ಹೇಳಿಕೆ ನೀಡದಿರುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಕಣುಮಪ್ಪ, ರಾಜೇಶ್ವರಿ, ಮಲ್ಲೇಶ ಮಾಳಕ್ಕಿ, ಯುವ ಕಾಂಗ್ರೇಸ್ ಎಚ್.ಎಸ್. ರಂಜಿತಾ. ಯುವ ಮುಖಂಡ ಆನಂದ ಸೇರಿದಂತೆ ಮೊದಲಾದವರು ಇದ್ದರು.