ಕನ್ನಡ ಮಾಧ್ಯಮ ಶಾಲಾ ಕಾಲೇಜು ವೇತನ ಅನುದಾನಕ್ಕೆ ಒಳಪಡಿಸಲು ಮನವಿ

ಸೊರಬ: ೧೯೯೫ರ ನಂತರ ಪ್ರಾರಂಭವಾದ ಶಾಲಾ ಕಾಲೇಜು ಗಳನ್ನು ವೇತನ ಅನುದಾನಕ್ಕೆ ಸೇರಿಸುವಂತೆ ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಎಂ.ರಮೇಶ್ ಶೆಟ್ಟಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪನವರಿಗೆ ಇಂದು ಮನವಿ ಮಾಡಿzರೆ.
ವೇತನಾನುದಾನಕ್ಕೆ ಒಳಪಡಿ ಸದೆ ಇರುವುದರಿಂದ ಕನ್ನಡ ಶಾಲೆ ಗಳು ತೀವ್ರ ಆರ್ಥಿಕ ಸಂಕಷಕ್ಕೆ ಗುರಿ ಯಾಗಿವೆ. ಇತ್ತೀಚಿನ ದಿನಗಳಲ್ಲಿ ಕಾಲೇಜುಗಳನ್ನು ನಡೆಸುತ್ತಿರುವ ಆಡಳಿತ ಮಂಡಳಿಗಳಿಗೆ ಕಾಲೇಜಿ ನಿಂದ ಯಾವುದೇ ರೀತಿಯ ಸ್ವಯಂ ಸಂಪನ್ಮೂಲ ಕ್ರೋಡೀಕರಣವಾ ಗದೆ ಶಿಕ್ಷಕರಿಗೆ ಸಂಬಳ-ವಗೈರೆ ನೀಡಲಾರದ ಸ್ಥಿತಿಗೆ ತಲುಪಿವೆ. ಇದರಿಂದ ಕನ್ನಡ ಶಾಲೆಗಳ ಶೈಕ್ಷಣಿಕ ಬೆಳವಣಿಗೆಗೆ ಬಾರೀ ಹಿನ್ನಡೆ ಉಂಟಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
೧೯೯೫ರ ನಂತರ ಪ್ರಾರಂಭ ವಾದ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳನ್ನು ವೇತನ ಅನು ದಾನಕ್ಕೆ ಒಳಪಡಿಸುವಂತೆ ಕರ್ನಾ ಟಕ ರಾಜ್ಯ ಅನುದಾನರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಮತ್ತು ನೌಕರರ ಒಕ್ಕೂಟ ವು ಅನೇಕ ವಷಗಳಿಂದ ಒತ್ತಾ ಯಿಸುತ್ತಾ ಬಂದಿರುವುದು ತಮಗೆ ತಿಳಿದಿರುವ ವಿಚಾರ.
ಈ ಹಿನ್ನೆಲೆಯಲ್ಲಿ ಹಂತ- ಹಂತವಾಗಿ ೧೯೯೫ರ ನಂತರ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳನ್ನು ವೇತನಾ ನುದಾನಕ್ಕೆ ಒಳಪಡಿಸುವ ಮೂಲಕ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸಹಾಯ ಮಾಡಬೇಕಾಗಿ ರಮೇಶ್ ಮನವಿಯಲ್ಲಿ ಕೋರಿ zರೆ.
ಈ ಸಂದರ್ಭದಲ್ಲಿ ರಾಜ್ಯ ಕೆಪಿಸಿಸಿ ಕೋ-ಆರ್ಡಿನೇಟರ್ ಹಾಗೂ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಬಳಗದ ಅಧ್ಯಕ್ಷ ಆರ್.ಮೋಹನ್, ಹಿಂದುಳಿದ ವರ್ಗಗಳ ರಾಜ್ಯ ಘಟಕದ ಸಂ ಯೋಜಕ ಮಂಜುನಾಥ್ ಇದ್ದರು.