ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಿ: ಶಾಸಕ ಶಾಂತನಗೌಡ

ಹೊನ್ನಾಳಿ: ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದು ಶ್ರೀ ಸಾಯಿಗುರುಕುಲ ಸಿಬಿಎಸ್‌ಇ ವಸತಿಯುತ ಶಾಲಾ-ಕಾಲೇಜುಗಳ ಅಧ್ಯಕ್ಷರೂ ಆದ ಶಾಸಕ ಡಿ.ಜಿ. ಶಾಂತನಗೌಡ ಕರೆ ನೀಡಿದರು.
ಅವರು ತಾಲ್ಲೂಕಿನ ಎಚ್. ಕಡದಕಟ್ಟೆಯ ಶ್ರೀ ಸಾಯಿ ಗುರುಕುಲ ಸಿಬಿಎಸ್‌ಇ ವಸತಿಯುತ ಶಾಲಾ-ಕಾಲೇಜುಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಿಬಿಎಸ್‌ಇ ಇಂಟರ್‌ನ್ಯಾಶನಲ್ ಹಬ್ ಲೆವೆಲ್ ಖೋ-ಖೋ ಕ್ರೀಡಾಕೂಟವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಆರೋಗ್ಯದ ಹಿತದೃಷ್ಟಿಯಿಂದಲೂ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳ ಬೇಕು. ಆಟದಲ್ಲಿ ಸೋಲು- ಗೆಲುವು ಮುಖ್ಯವಲ್ಲ ಸ್ಪರ್ಧಿಸು ವುದು ಮುಖ್ಯವೆಂದು ಸಲಹೆ ನೀಡಿದರು.
ಪ್ರತಿಯೊಂದು ಶಾಲಾ- ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ಗಳು ಪ್ರತಿಯೊಂದು ಆಟೋಟ ಗಳಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ವಿದ್ಯಾರ್ಜನೆಯನ್ನು ಮಾಡುವುದರ ಮೂಲಕ ರಾಜ್ಯ- ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆಯಬೇಕು ಎಂದು ಕಿವಿ ಮಾತು ಹೇಳಿದರು.
ತಮಗೆ ಸ್ಪೂರ್ತಿ ತುಂಬಲು ಏಕಲವ್ಯ ಮತ್ತು ಭರತ್ ಪ್ರಶಸ್ತಿ ಪುರಸ್ಕೃತರು ಭಾರತ ಖೋ-ಖೋ ತಂಡದ ಮಾಜಿ ಉಪನಾಯಕರಾದ ಮುನೀರ್ ಭಾಷಾರವರು ಬಂದಿದ್ದು ಅವರ ಮಾರ್ಗದರ್ಶ ನದಲ್ಲಿ ವಿದ್ಯಾರ್ಥಿಗಳು ಖೋ- ಖೋ ಕ್ರೀಡೆಯ ಬಗ್ಗೆ ಸಮರ್ಪಕ ಮಾಹಿತಿ ಪಡೆದುಕೊಂಡು ಸಾಧನೆ ಗೈಯಬೇಕು ಎಂದು ತಿಳಿಸಿದರು.
ಭಾರತ ಖೋ-ಖೋ ತಂಡದ ಮಾಜಿ ಉಪನಾಯಕರಾದ ಮುನೀರ್ ಭಾಷಾ ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಗೇಮ್‌ಗಳ ಗೀಳಿನಿಂದ ಹೊರಬರ ಬೇಕು. ದೇಶೀಯ ಕ್ರೀಡೆಗಳಾದ ಕಬಡ್ಡಿ ಮತ್ತು ಖೋ-ಖೋ ಆಟ ಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದರು. ಈ ಕ್ರೀಡೆಗಳನ್ನು ಆಡುವುದರಿಂದ ಸಧೃಡ ದೇಹಕಾಯ ಹೊಂದಬಹುದಾಗಿದೆ ಎಂದು ಮಾಹಿತಿ ನೀಡಿದರು.
ತಾವು ಆರ್ಥಿಕ ಸಮಸ್ಯೆಯಿಂದ ವಿದ್ಯಾಭ್ಯಾಸವನ್ನು ಮೊಟಕುಗೊಳಿಸ ಬೇಕಾಯ್ತು. ಆದರೆ ಖೋ-ಖೋ ಆಟವನ್ನು ಸತತ ಆಭ್ಯಾಸ ಮಾಡಿ ಕರ್ನಾಟಕ ರಾಜ್ಯದ ನಾಯಕ ನಾಗುವ ಅವಕಾಶ ಒಗದಿ ಬಂದದ್ದು ನನ್ನ ಸೌಭಾಗ್ಯವೆಂದು ತಮ್ಮ ಕ್ರೀಡಾ ಸಾಧನೆಯ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.
ಸಂಸ್ಥೆಯ ಪ್ರಾಂಶುಪಾಲ ದರ್ಶನ್ ಅವರು ಮಾತನಾಡಿ, ೧೬ ವರ್ಷದೊಳಗಿನ ಸಿಬಿಎಸ್‌ಇ ಶಾಲೆಗಳ ೨೬ ತಂಡಗಳು ಈ ಕ್ರೀಡಾ ಕೂಟದಲ್ಲಿ ಪಾಲ್ಗೊಂಡಿದ್ದು ಕುವೆಂಪು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಶಿಕ್ಷಕರುಗಳು ತೀರ್ಪುಗಾರರಾಗಿ ಆಗಮಿಸಿzರೆ ಎಂದು ತಿಳಿಸಿದರು.
ಬಾಲಕರ ವಿಭಾಗದಲ್ಲಿ ಶ್ರೀ ಸಾಯಿ ಗುರುಕುಲ ಸಿಬಿಎಸ್‌ಇ ವಸತಿಯುತ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದರೆ ದಾವಣಗೆರೆಯ ಅನ್‌ಮೋಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದರು.
ಬಾಲಕಿಯರ ವಿಭಾಗದಲ್ಲಿ ಶ್ರೀ ಸಾಯಿಗುರುಕುಲ ಸಿಬಿಎಸ್‌ಇ ವಸತಿಯುತ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದರೆ ದ್ವಿತೀಯ ಸ್ಥಾನವನ್ನು ಸೇಂಟ್ ಪಾಲ್ಸ್ ಸೆಂಟ್ರಲ್ ಶಾಲೆಯ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನವನ್ನು ಪಡೆದು ಕೊಂಡಿzರೆ ಎಂದು ಸಂಸ್ಥೆಯ ಶಿಕ್ಷಣ ಸಂಯೋಜಕ ಎ.ಜಿ.ಹರೀಶ್ ಕುಮಾರ್ ಅವರು ತಿಳಿಸಿzರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಶಂಕರಪ್ಪಗೌಡ್ರು, ಕಾರ್ಯದರ್ಶಿ ಸೌಮ್ಯ ಪ್ರದೀಪ್ ಗೌಡ, ಖಂಜಂಚಿ ಡಿ.ಜಿ. ಸೋಮಪ್ಪ, ನಿದೇಶಕರಾದ ಡಿ.ಎಸ್. ಅರುಣ್, ವಾಣಿ ಸುರೇಂದ್ರಗೌಡ, ಶಿಕ್ಷಕರಾದ ಹರೀಶ್‌ರಾಜ್ ಅರಸ್, ಉಷಾ, ಉಮಾ, ದಾಕ್ಷಾಯಿಣಿ, ದೈಹಿಕ ಶಿಕ್ಷಕರಾದ ತಿಪ್ಪೇಸ್ವಾಮಿ, ಮಧು ಕುಮಾರ್ ಸಂಸ್ಥೆಯ ಶಿಕ್ಷಕ -ಶಿಕ್ಷಕಿಯರು ಉಪಸ್ಥಿತರಿದ್ದರು.