ರಾಘವೇಂದ್ರ ಮಠದ ಯಾತ್ರಿ ನಿವಾಸದ ಮೇಲಂತಸ್ಥಿನ ೨ ಕೋಟಿ ರೂ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ
ಹೊನ್ನಾಳಿ: ಪಟ್ಟಣದ ರಾಘವೇಂದ್ರ ಮಠದಲ್ಲಿನ ಯಾತ್ರಿ ನಿವಾಸದ ಮೇಲಂತಸ್ಥಿನ ೨ ಕೋಟಿ ರೂ ವೆಚ್ಚದ ಹೆಚ್ಚುವರಿ ಕಾಮ ಗಾರಿಯ ಗುದ್ದಲಿ ಪೂಜೆಯನ್ನು ಕಾಂಗ್ರೇಸ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯ ಉಪಾದ್ಯಕ್ಷ ಹೆಚ್.ಎ. ಉಮಾಪತಿ ನೆರವೇರಿಸಿದರು.
ನಂತರ ಮಾತನಾಡಿದ ಅವರು ೨೦೧೬-೧೭ನೇ ಸಾಲಿನಲ್ಲಿ ಶಾಸಕ ಶಾಂತನಗೌಡರ ಅವಧಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಯಾತ್ರಿ ನಿವಾಸಕ್ಕೆ ೧ ಕೋಟಿ ರೂ. ಹಾಗೂ ಮುಜರಾಯಿ ಇಲಾಖೆ ಯಿಂದ ೭೫ಲಕ್ಷ ರೂಗಳ ಹಣ ಬಿಡುಗಡೆಗೊಂಡ ಕಾಮಗಾರಿ ಪ್ರಾರಂಭಿಸಲಾಗಿತ್ತು. ಯಾತ್ರಿ ನಿವಾಸದ ವಿಸ್ತೀರ್ಣದಲ್ಲಿ ೧೫೦೦ ರಿಂದ ೨೦೦೦ ಜನ ಭಕ್ತರು ಸಭೆಯಲ್ಲಿ ಪಾಲ್ಗೊಳ್ಳುವಷ್ಟು ವಿಶಾಲವಾಗಿದೆ ಎಂದರು.
ಪಿಡಬ್ಲೂಡಿ ಇಂಜಿನಿಯರ ಕಣ್ವಪ್ಪ ಮಾತನಾಡಿ, ರೇಣುಕಾಚಾರ್ಯರ ಅವಧಿಯಲ್ಲಿ ಪಿಡಬ್ಲೂಡಿಯಿಂದ ೧ಕೋಟಿ ಹಣ ಬಿಡುಗಡೆಗೊಂಡು ಕಾಮಗಾರಿ ನಡೆದಿತ್ತು ಇಂದು ೨ ಕೋಟಿ ರೂ ವೆಚ್ಚದಲ್ಲಿ ಮುಂದುವರೆದ ಕಾಮಗಾರಿ ನಡೆಸಲಾಗುತ್ತಿದ್ದು. ಪಿಡಬ್ಲೂಡಿ ಇಲಾಖೆಯಿಂದ ಒಟ್ಟು ೩ ಕೋಟಿ ರೂಗಳ ಬಿಡುಗಡೆ ಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರೇಣುಕಾಚಾರ್ಯ, ರಾಘವೇಂದ್ರಮಠದ, ಟ್ರಸ್ಟನ ಅಧ್ಯಕ್ಷ ಶ್ರೀನಿವಾಸಮೂರ್ತಿ, ಉಪಾದ್ಯಕ್ಷ ಕೆಆರ್ ಶ್ರೀನಿವಾಸ, ನಿರ್ದೇಶಕರಾದ ಎನ್ ಜಯರಾವ್, ಗುತ್ತಿಗೆದಾರರಾದ ನಾಗರಾಜಗುಂಡಣ್ಣ, ಸತ್ಯನಾರಾಯಣರಾವ್, ಲಾಯರ್ ಉಮಾಕಾಂತ್, ಮನೋಹರ, ಅಜಿತ್ ಇನ್ನಿತರರು ಉಪಸ್ಥಿತರಿದ್ದರು.