ಗ್ಯಾರಂಟಿಗಳ ಮುಳುಗಿರುವ ರಾಜ್ಯ ಸರ್ಕಾರ ರೈತರನ್ನು ಮರೆತಿದೆ
ಶಿವಮೊಗ್ಗ: ಗ್ಯಾರಂಟಿಗಳ ಮುಳುಗಿರುವ ರಾಜ್ಯ ಸರ್ಕಾರ ರೈತರನ್ನು ಮರೆತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಜನಪರವಾಗಿ ಇಲ್ಲ. ಆಂತರೀಕ ಮತ್ತು ಬಹಿರಂಗ ಬಡಿದಾಟದಲ್ಲಿ ಮುಳುಗಿದೆ. ಅವರ ಐದು ಗ್ಯಾರಂ ಟಿಗಳಲ್ಲಿ ಒಂದಾದರೂ ಜನರಿಗೆ ಸಮಾಧಾನ ತಂದಿಲ್ಲ. ಹಣ ಕೊಟ್ಟರೂ ವಿದ್ಯುತ್ ಸಿಗುತ್ತಿಲ್ಲ. ಉಚಿತ ಬಸ್ ಯೋಜನೆಯಿಂದಾಗಿ ಖಾಸಗಿ ಬಸ್ ಮತ್ತು ಆಟೋ ರಿಕ್ಷಾ ಮತ್ತಿತರ ವಾಹನಗಳ ಮಾಲೀಕರು ಪರದಾಡುವಂತಾಗಿದೆ. ನಿರು ದ್ಯೋಗಿ ಪದವೀಧರರಿಗೆ ಇನ್ನೂ ಗ್ಯಾರಂಟಿ ಲಭ್ಯವಾಗಿಲ್ಲ. ಉಚಿತ ಅಕ್ಕಿ ಯೋಜನೆಯಲ್ಲೂ ಖಚಿತತೆ ಇಲ್ಲ ಎಂದರು.
ರಾಜ್ಯದ ರೈತರು ಬರಗಾಲಕ್ಕೆ ತುತ್ತಾಗಿ ಸಂಕಷ್ಟದಲ್ಲಿzರೆ. ಅಧಿಕಾರದಲ್ಲಿರುವ ಸಚಿವರು, ಜಿ ಉಸ್ತುವಾರಿ ಸಚಿವರು ಈ ಬಗ್ಗೆ ಗಮನವನ್ನೇ ಹರಿಸುತ್ತಿಲ್ಲ. ಬರಗಾಲ ಘೋಷಣೆ ಮಾಡಲು ಯೋಚಿಸುತ್ತಿzರೆ. ರೈತರ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ರೈತರ ಆತ್ಮಹತ್ಯೆ ಪ್ರಕರಣಗಳೆಷ್ಟು, ಬೆಳೆ ಪರಿಹಾ ರಕ್ಕಾಗಿ ಏನು ಮಾಡಿzರೆ ಎಂಬಿ ತ್ಯಾದಿ ರೈತರ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ಕೂಡಲೇ ಶ್ವೇತ ಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯನ್ನು ಸಮರ್ಥಿಸಿಕೊಂಡ ಈಶ್ವರಪ್ಪ, ಈ ಮೈತ್ರಿಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಧೂಳೀಪಟ ವಾಗಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನು ಕಾಂಗ್ರೆಸ್ ಪಡೆಯು ವುದಿಲ್ಲ. ಈ ಮೈತ್ರಿಕೂಟದಿಂದ ಕಾಂಗ್ರೆಸ್ ನಾಯಕರಿಗೆ ಹೊಟ್ಟೆ ನೋವು ಶುರುವಾಗಿದೆ. ಬಿಜೆಪಿ ಕೋಮುವಾದಿ ಪಕ್ಷ ಎಂದು ಟೀಕಿ ಸುತ್ತಿzರೆ. ಬಿಜೆಪಿ ಯಾವತ್ತೂ ಕೋಮುವಾದಿ ಅಲ್ಲ. ಕಾಂಗ್ರೆ ಸ್ಸೇತರ ಸರ್ಕಾರ ರಾಜ್ಯದಲ್ಲಿ ಬಂದಾಗ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದರು. ಆಗ ಇದೇ ಸಿದ್ದರಾಮಯ್ಯನವರಿಗೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ರನ್ನಾಗಿ ಮಾಡಿದ್ದು, ಗೂಟದ ಕಾರನ್ನು ನೀಡಿದ್ದು ಬಿಜೆಪಿಯೇ. ಅದನ್ನು ಅವರು ನೆನಪಿಟ್ಟು ಕೊಳ್ಳಬೇಕು ಎಂದು ಹಂಗಿಸಿದರು.
ಗೋಷ್ಠಿಯಲ್ಲಿ ಪ್ರಮುಖರಾ ದ ಟಿ.ಡಿ.ಮೇಘ ರಾಜ್, ಜಗ ದೀಶ್, ಶಿವರಾಜ್, ಸಾಲೇಕೊಪ್ಪ ರಾಮಚಂದ್ರ, ವಿನ್ಸೆಂಟ್, ಕಾಚಿನ ಕಟ್ಟೆ ಸತ್ಯನಾರಾಯಣ, eನೇ ಶ್ವರ್, ಕೆ.ವಿ. ಅಣ್ಣಪ್ಪ ಇದ್ದರು.