ಸಮ ಸಮಾಜ ಯುವ ಸಮೂಹದ ಗುರಿಯಾಗಲಿ: ಸ್ವಾಮೀಜಿ…
ಶಿವಮೊಗ್ಗ : ಸಮಸಮಾಜದ ಪ್ರಾಮುಖ್ಯತೆ ದುರ್ಬಲಗೊಳ್ಳುತ್ತಿ ರುವ ಸಂದರ್ಭದಲ್ಲಿ ಜೀವನ ಮಲ್ಯಗಳ ಮೂಲಕ ಸಮ ಸಮಾಜ ನಿರ್ಮಾಣ ಮಾಡು ವುದು ಯುವ ಸಮೂಹದ ಗುರಿ ಯಾಗಲಿ ಎಂದು ತುಮಕೂರಿನ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಜೆ.ಎನ್.ಎನ್ ಎಂಜಿ ನಿಯರಿಂಗ್ ಕಾಲೇಜಿನ ವತಿ ಯಿಂದ ಎಂಬಿಎ ವಿಭಾಗ ಮತ್ತು ಯುಎನ್‌ಒಡಿಸಿ ಸಂಯುಕ್ತಾ ಶ್ರಯದಲ್ಲಿ ಸೋಮವಾರ ವಿದ್ಯಾ ರ್ಥಿಗಳಿಗಾಗಿ ಏರ್ಪಡಿಸಿದ್ದ ‘ಸುಸ್ಥಿ ರ ವೈಯುಕ್ತಿಕ ಸಮಗ್ರತೆ ಉತ್ತಮ ಜೀವನ ಮತ್ತು ಆರೋಗ್ಯ’ ಕಾರ್ಯಾಗಾರ ಉದ್ಘಾಟಿಸಿ ಮಾತ ನಾಡಿದರು.
ಇತಿಹಾಸದ ಮಲ್ಯಗಳನ್ನು ಯುವ ಸಮೂಹ ಅರಿಯಬೇಕಾ ಗಿದೆ. ಅದರೇ ಇತಿಹಾಸವೇ ಕಣ್ಮರೆ ಯಾಗುತ್ತಿರುವುದು ವಿಷಾದ ನೀಯ. ಜೀವನ ಮಲ್ಯಗಳಿಂದ ಯುವ ಸಮೂಹ ತನ್ನ ವೈಯುಕ್ತಿಕ ಸಮಗ್ರತರಯನ್ನು ಸುಸ್ಥಿರ ಗೊಳಿಸಿಕೊಳ್ಳಲು ಸಾಧ್ಯವಾಗಲಿದೆ.
ನಿರಾಶೆಗಿಂತಲು ಮನುಷ್ಯನಲ್ಲಿ ಕುಸಿಯುವ ಇನ್ನೊಂದು ವಿಚಾರ ವಿಲ್ಲ. ಜೀವನದ ಸವಾಲುಗಳನ್ನು ಮಲ್ಯಯುತ ವ್ಯಕ್ತಿತ್ವಗಳಿಂದ ಎದರುರಿಸಬೇಕಿದೆ. ಎ ಸಮಸ್ಯೆಗಳಿಗೆ ವಿeನ ಪರಿಹಾರ ನೀಡುವುದಿಲ್ಲ. ಜೀವನದ ಮಲ್ಯ ಗಳು ಪರಿಹಾರ ಕಂಡುಕೊಳ್ಳುವ ಕ್ರಮ ಹೇಳಿಕೊಡಲಿದೆ.
ತೈತ್ತಿರೀಯೋಪನಿಷತ್ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಐದು ಆಯಾ ಮಗಳನ್ನು ವ್ಯಾಖ್ಯಾನಿಸಿದೆ. ಅನ್ನ, ಪ್ರಾಣ, ಮನೊ, ವಿeನ, ಆನಂದಮಯಗಳ ಮೂಲಕ ಸುಸ್ಥಿರ ಉತ್ತಮ ಬದುಕನ್ನು ನಡೆಸುವ ಜೀವನೋಪದೇಶವನ್ನು ಹೇಳಿಕೊಡಲಿದೆ ಎಂದರು.
ದಕ್ಷಿಣ ಏಷ್ಯಾದ ಯುಎನ್ ಒಡಿಸಿ ಸಂವಹನ ಅಧಿಕಾರಿ ಸಮರ್ಥ ಪಾಟಕ್ ಮಾತನಾಡಿ, ಸಮಾಜದ ಉನ್ನತಿಕರಣಕ್ಕೆ ಯುವ ಸಮೂಹ ತನ್ನ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕಿದೆ. ಸಮಾಜ ಕೋವಿಡ್, ಡ್ರಗ್ಸ್, ಸೈಬರ್ ಕ್ರೈಮ್ ನಂತಹ ಅನೇಕ ಸವಾಲು ಗಳನ್ನು ಎದುರಿಸುತ್ತಿದೆ. ಅಂತಹ ಅಂಧತ್ವದ ವಾತಾವರಣದಿಂದ ಹೊರಬರುವ ಮಲ್ಯಾಧಾರಿತ ನಡೆ ಯುವ ಸಮೂಹದಾಗ ಬೇಕಿದೆ.ವಿಶ್ವದಲ್ಲಿ ಇನ್ನೂರ ತೊಂಬ ತ್ತಾರು ಮಿಲಿಯನ್ ಜನ ಮಾದಕ ವ್ಯಸನಿಗಳಾಗಿzರೆ ಎಂದು ಸರ್ವೆ ಯೊಂದು ತಿಳಿಸುತ್ತಿದೆ. ಇನ್ನಾದರು ಯುವ ಸಮೂಹ ಅನ್ಯಾಯದ ವಿರುದ್ಧ ಧ್ವನಿಯೆತ್ತಬೇಕಿದೆ. ಧ್ವನಿ ಯಿಲ್ಲದವರ ಧ್ವನಿಯಾಗಿ ಉತ್ತಮ ಸಮಾಜಕ್ಕಾಗಿ ಕೈ ಜೋಡಿಸಬೇಕಿದೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್ .ನಾಗರಾಜ ಮಾತನಾಡಿ, ಸಮಗ್ರ ಚಿಂತನೆಗಳು ಎಂಬುದನ್ನು ನಮ್ಮ ಜೀವನದ ಪ್ರತಿಯೊಂದು ಹಂತ ದಲ್ಲಿ ಅಭಿವೃದ್ಧಿ ಪಡಿಸಿಕೊಂಡು ಹೋಗಬೇಕು. ಪ್ರಾಮಾಣಿಕತೆ ಎಂಬುದು ಸನ್ನಿವೇಶಗಳ ಆಧಾರ ದಲ್ಲಿ ಕೆಲವೊಮ್ಮೆ ವ್ಯತ್ಯಾಸಗಳಾಗಬ ಹುದು. ಹಾಗಾಗಿ ನಮ್ಮ ಸುತ್ತಲಿನ ವಾತಾವರಣವನ್ನು ಆರೋಗ್ಯ ಯುತವಾಗಿರುವಂತೆ ಎಚ್ಚರ ವಹಿಸಿ ಎಂದು ಹೇಳಿದರು.
ಎನ್‌ಇಎಸ್ ಸಹ ಕಾರ್ಯ ದರ್ಶಿ ಡಾ.ಪಿ.ನಾರಾಯಣ್ ಮಾತನಾಡಿದರು. ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ. ಮಂಜುನಾಥ ಅಧ್ಯಕ್ಷತೆ ವಹಿಸಿ ದ್ದರು.
ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಎಂಬಿಎ ವಿಭಾಗದ ನಿರ್ದೇಶಕರಾದ ಡಾ. ಶ್ರೀಕಾಂತ್, ಕಾರ್ಯಕ್ರಮ ಸಂಯೋಜಕರಾದ ಅನುರಾಧ ಸೇರಿದಂತೆ ಮತ್ತಿತರರು ಉಪಸ್ಥಿತರಿ ದ್ದರು.
ವಿವಿಧ ಕಾಲೇಜುಗಳ ವಿದ್ಯಾ ರ್ಥಿಗಳು ಭಾಗವಹಿಸಿದ್ದ ಕಾರ್ಯಾ ಗಾರದಲ್ಲಿ ದೈಹಿಕ ಆರೋಗ್ಯ ಸುಧಾರಣೆ ಕುರಿತು ಜಯಶ್ರೀ ಹಳ್ಳೂರು ಹಾಗೂ ವೈದ್ಯ ಡಾ.ಪಿ. ನಾರಾಯಣ್, ದೀರ್ಘಾವಧಿಯ ಯಶಸ್ಸು ಕುರಿತು ಜಿ ನ್ಯಾಯಾಧೀಶರಾದ ಚಂದನ್, ಭಾವನಾತ್ಮಕ ಯೋಗ ಕ್ಷೇಮ ಕುರಿತು ಕಟೀಲ್ ಅಶೋಕ್ ಪೈ ಕಾಲೇಜಿನ ಕರಣ್ ಹಾಗೂ ಮನೋವೈದ್ಯ ಡಾ.ನವೀನ್ ಆನಂದ್, ಆರೋಗ್ಯಕರ ಸಂಬಂಧ ಕುರಿತು ಸಂಜನಾ ಫರ್ನಾಂಡಿಸ್ ಹಾಗೂ ಡಾ.ಅರ್ಚನಾ ಭಟ್, ಸ್ಥಿತಿಸ್ಥಾಪಕತ್ವ ಕುರಿತು ಅಪೇಕ್ಷಾ ಪ್ರಭು ಹಾಗೂ ಪ್ರೊ.ನ್ಯಾನ್ಸಿ, ನೈತಿಕ ನಿರ್ಧಾರ ಮಾಡುವ ಬಗೆ ಕುರಿತು ವೀರೇಶಾನಂದ ಸ್ವಾಮೀಜಿ ಮಾತ ನಾಡಿದರು.