ದೇಶ ಕಟ್ಟುವಲ್ಲಿ ಶಿಕ್ಷಕರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ: ಪರಶುರಾಮಪ್ಪ

10sp3-

ಸಾಗರ: ದೇಶ ಕಟ್ಟುವ ಕೆಲಸ ದಲ್ಲಿ ಶಿಕ್ಷಕರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ಬಿಇಒ ಇ.ಪರಶುರಾಮಪ್ಪ ಹೇಳಿದರು.
ಪಟ್ಟಣದ ಲಯನ್ಸ್ ಸೇವಾ ಮಂದಿರದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಎಂಜಿನಿಯರ್‍ಸ್ ದಿನದ ನಿಮಿತ್ತ ಏರ್ಪಡಿಸಿದ್ದ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಶಿಕ್ಷಕರಿಗೆ ಸಮಾಜದಲ್ಲಿ ಬಹುದೊಡ್ಡ ಜವಾಬ್ದಾರಿಯಿದೆ. ಶಿಕ್ಷಕರು ಮಕ್ಕಳಿಗೆ ಸರಿಯಾದ ಪಾಠ ಮಾಡಿ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡಬೇಕು. ಉತ್ತಮ ಸಮಾಜ ನಿಮಾಣದಲ್ಲಿ ಅವರ ಕೊಡುಗೆ ದೊಡ್ಡದು ಎಂದರು.
ಲಯನ್ಸ್ ಸಂಸ್ಥೆಯು ಅಂತರ ರಾಷ್ಟೀಯ ಸಂಸ್ಥೆಯಾಗಿದ್ದು, ಜಗತಿಕ ಮಟ್ಟದಲ್ಲಿ ತನ್ನ ಗುರಿಯನ್ನು ಸಾಧಿಸುತ್ತಿದೆ. ಬಡತನ ನಿವಾರಣೆ, ಮನುಷ್ಯರು ಶಾಂತಿ, ಸಹಬಾಳ್ವೆಯಿಂದ ಬದುಕ ಬೇಕೆಂಬುದು ಸಂಸ್ಥೆಯ ಆಶಯ. ಸಮಸ್ಯೆಗಳಿಲ್ಲದೇ ಬದುಕುವ ವಾತಾವರಣ ಸೃಷ್ಟಿಯಾಗಬೇಕು ಎಂಬುದು ಎಲ್ಲರ ಬಯಕೆ. ಆದರೆ ಅಂಥ ವಾತಾವರಣ ಇನ್ನೂ ಬಂದಿಲ್ಲ. ನಕಾರಾತ್ಮಕ ಧೋರಣೆ ವಿರುದ್ಧ ಹೋರಾಡಲು ಕಾರ್ಯೋನ್ಮುಖವಾಗಬೇಕು. ಲಯನ್ಸ್ ಸಂಸ್ಥೆಯು ಆರೋಗ್ಯ ವಂತ ಸಮಾಜ, ಬಡತನ ನಿವಾರಣೆಯತ್ತ ಕಾರ್ಯಕ್ರಮ ನಡೆಸುತ್ತ ಬಂದಿದೆ ಎಂದರು.
ನಿವೃತ್ತ ಶಿಕ್ಷಕರಾದ ಚಂದ್ರಪ್ಪ ಎಸ್., ಕೆ.ಪಿ. ಪರಶುರಾಮಪ್ಪ, ವಿನೋದ ಎಚ್.ಕೆ., ಸರೋಜಮ್ಮ ಹಾಗೂ ಎಂಜಿನಿಯರ್ ಮತ್ತು ಸಿವಿಲ್ ಗುತ್ತಿಗೆದಾರ ಎಚ್.ಎಂ. ಶಿವಕುಮಾರಸ್ವಾಮಿ ಹಾಗೂ ಎಂಜೆಎಫ್ ದಾನಿಗಳಾದ ಡಾ| ಪ್ರಸನ್ನ ಟಿ. ಮತ್ತು ಡಿ.ಕೆ.ಸಿದ್ದೇಶ್ವರ ಪ್ರಸಾದರನ್ನು ಸನ್ಮಾನಿಸಲಾಯಿತು.
ಲಯನ್ಸ್ ಸಂಸ್ಥೆ ಅಧ್ಯಕ್ಷೆ ಪ್ರಭಾವತಿ ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ ನೀಡಿದ ಆಹಾರ ಸಾಮಗ್ರಿಗಳನ್ನು ಫಲಾನುಭವಿಗಳಿಗೆ ವಿತರಿಸಲಾ ಯಿತು. ಲಯನ್ಸ್ ವಲಯಾಧ್ಯಕ್ಷ ರವೀಶಕುಮಾರ್, ಕಾರ್ಯದರ್ಶಿ ಸವಿತಾ ಮಹಾಬಲೇಶ್, ಪ್ರಮುಖರಾದ ಬಿ.ಎಸ್. ಚ್ಚಿದಾನಂದಮೂರ್ತಿ, ಎಂ.ಬಿ. ಪುಟ್ಟಸ್ವಾಮಿ, ಇ.ಡಿ.ಶ್ರೀಧರ್, ಎನ್.ಆರ್. ವಿನಯ್, ಜಿ.ಕೆ. ಕೃಷ್ಣಮೂರ್ತಿ, ಟಿ.ಬಿ.ಮಂಜುನಾಥ ಶೆಟ್ಟಿ, ಕೆ.ಬಿ.ಮಹಾಬಲೇಶ್ ಮತ್ತಿತರರು ಹಾಜರಿದ್ದರು.
ಸವಿತಾ ಪ್ರಾರ್ಥಿಸಿದರು. ಪ್ರಭಾ ಶ್ರೀಧರ್ ಸ್ವಾಗತಿಸಿದರು. ನಾಗರಾಜ್ ಎಂ.ಎಚ್. ವಂದಿಸಿದರು. ಪ್ರೊ. ಬಿ.ಸಿ.ಶಶಿಧರ್ ಮತ್ತು ತಿಮ್ಮಪ್ಪ ನಿರೂಪಿಸಿದರು.