ಹೊನ್ನಾಳಿ: ೪೧ ವಿಕಲಚೇತನ ಮಕ್ಕಳಿಗೆ ಅಗತ್ಯಪರಿಕರಗಳ ವಿತರಣೆ
ಹೊನ್ನಾಳಿ: ಸರ್ಕಾರಿ ಶಾಲೆಯ ವಿಶೇಷ ಅಗತ್ಯವುಳ್ಳ ೪೧ ಪಲಾನು ಭವಿಯ ವಿದ್ಯಾರ್ಥಿಗಳಿಗೆ ೧೦ ವೀಲ್‌ಚೇರ್, ೧ ಸಿಪಿಚೇರ್, ೩೦ ಊರುಗೋಲುಗಳನ್ನ ಶಾಂತನ ಗೌಡ ಅವರು ವಿತರಿಸಿದರು.
ಹೊನ್ನಾಳಿ ಬಿಆರ್‌ಸಿ ಕಛೇರಿ ಯಲ್ಲಿ ನಡೆದ ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರದಡಿ ವಿತರಣಾ ಕಾರ್ಯಕ್ರಮದಲ್ಲಿ ವಿಶೇಷ ಚೇತನ ಮಕ್ಕಳಿಗೆ ವೈದ್ಯರ ಶಿಫಾರಸ್ಸಿನ ಮೇರಿಗೆ ಪರಿಕರಗಳ ವಿತರಿಸಲಾಗಿದೆ ಎಂದರು.
ಸಿಇಒ ಮುದ್ದಹನುಮೆಗೌಡ ಮಾತನಾಡಿ, ಕಳೆದ ವರ್ಷದಲ್ಲಿ ಭಾರತೀಯ ವಿದ್ಯಾಸಂಸ್ಥೆ ಆವರಣ ದಲ್ಲಿ ೧೦೦ಕ್ಕೂ ಅಧಿಕ ವಿವಿಧ ಅಂಗವೈಕಲ್ಯ ಹೊಂದಿದ ಮಕ್ಕಳು ತಪಾಸಣೆಗೆ ಪಾಲ್ಗೊಂಡಿದ್ದರು. ಅಂದು ಸಿಜಿ ಆಸ್ಪತ್ರೆ ವೈದ್ಯರು, ಸ್ಥಳಿಯ ವೈದ್ಯರು ಸಿಫಾರಸ್ಸಿನ ಮೇರಿಗೆ ಅರ್ಹ ಪಲಾನುಭವಿಗಳ ಗುರುತಿಸಿ ಸರ್ಕಾರಗಳಿಂದ ಸಲಕರಣೆಗಳನ್ನ ವಿತರಿಸಲಾಗಿದೆ ಎಂದರು.
ಬಿಇಒ ನಂಜರಾಜ್, ಬಿಆರ್‌ಸಿ ತಿಪ್ಪೇಶಪ್ಪ, ಎಸ್‌ಪಿಡಿ ರಾಜ್ಯ ಯೋಜನಾಧಿಕಾರಿ ಹಾಗು ಜಿ ನೊಡಲ್ ಅಧಿಕಾರಿ ಹೇಮಾವತಿ, ಇಸಿಒ ಮುದ್ದಹನು ಮಗೌಡ, ಬಿಆರ್‌ಪಿ ಅರುಣ್ ಕುಮಾರ್, ಇಲಾಖೆಯ ಸಿಬ್ಬಂದಿ ಗಳಾದ ಕೊಟ್ಯಪ್ಪ, ಚಂದ್ರಶೇಖ ರಯ್ಯ, ಒಂಕಾರಪ್ಪ, ಹನು ಮಂಜಪ್ಪ, ದರಣೇಂದ್ರಯ್ಯ, ಅರಕ್ ಸಿದ್ದಪ್ಪ ಇನ್ನಿತರರಿದ್ದರು.