ನಾಡು, ನುಡಿ, ಜಲ, ಗಡಿ ವಿಚಾರದಲ್ಲಿ ರಾಜಕೀಯ ಬದಿಗಿಟ್ಟು ಒಂದಾಗಬೇಕಿದೆ
ಶಿವಮೊಗ್ಗ: ನಾಡು, ನುಡಿ, ಜಲ, ಗಡಿ ವಿಚಾರಗಳು ಬಂದಾಗ ಯಾವುದೇ ಸರ್ಕಾರವಿರಲಿ, ಪಕ್ಷಾತೀತವಾಗಿ ಸಮಸ್ಯೆಗಳನ್ನು ಎದುರಿಸಬೇಕು ಎಂದು ಮಾಜಿ ಶಾಸಕರ ಸಂಘದ ರಾಜ್ಯ ಅಧ್ಯಕ್ಷ ಹೆಚ್.ಎಂ. ಚಂದ್ರಶೇಖರಪ್ಪ ಹೇಳಿದರು.
ಸುದ್ದಿಗೋಷಿದ್ದಯಲ್ಲಿ ಮಾತನಾಡಿದ ಅವರು, ರಾಜ್ಯ ಪ್ರತಿ ಬಾರಿಯೂ ಪ್ರಮುಖವಾಗಿ ಕಾವೇರಿ ನೀರಿನ ಸಮಸ್ಯೆ ಎದುರಾ ಗುತ್ತಿದೆ. ಕೋರ್ಟ್ ಆದೇಶಾನು ಸಾರ ಈಗಾಗಲೇ ರಾಜ್ಯಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಹೀಗೆ ನೀರು ಹರಿಸುತ್ತಾ ಹೋದರೆ ಕರ್ನಾಟಕ ರಾಜ್ಯದ ರೈತರ ಮತ್ತು ಕುಡಿ ಯುವ ನೀರಿನ ಸಮಸ್ಯೆ ಬಗೆಹರಿ ಸುವುದು ಹೇಗೆ ಎಂದು ಪ್ರಶ್ನಿಸಿದ ಅವರು, ಇಂತಹ ಸಂದ ರ್ಭಗಳಲ್ಲಿ ಪಕ್ಷಾತೀತವಾಗಿ ಹೋರಾಟ ಬೇಕಾದ ಅವಶ್ಯಕತೆ ಇದೆ ಎಂದರು.
ರಾಜಕೀಯ ಪ್ರe ಬೆಳೆಸಿಕೊ ಳ್ಳುವುದು ಇಂದು ಅನಿವಾರ್ಯ ವಾಗಿದೆ. ನಾಡಿನ ಹಿತಾಸಕ್ತಿಗಾಗಿ ರಾಜಕಾರಣ ಮಾಡುವುದು ತರವಲ್ಲ. ಅಭಿವೃದ್ದಿಗೂ ರಾಜಕಾರ ಣಕ್ಕೂ ವ್ಯತ್ಯಾಸವಿವೆ. ಚುನಾವ ಣೆಗೂ ಮುನ್ನ ಆಯಾ ಪಕ್ಷದ ಸಿದ್ಧಾಂತಗಳು ಬೇರೆಬೇರೆಯಾ ಗಿಯೇ ಇರುತ್ತವೆ. ಆದರೆ ಹೊಸ ಸರ್ಕಾರ ರಚನೆ ಆದಾಗ ಒಟ್ಟಾರೆ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸಬೇ ಕಾಗುತ್ತದೆ. ಇದಕ್ಕಾಗಿ ಹೋರಾಟ ಕೂಡ ಅನಿವಾರ್ಯ ಎಂದರು.
ಮಾಜಿ ಶಾಸಕರುಗಳ ಕೂಡ ನಾವೀಗ ಮಾಜಿ ಆಗಿದ್ದೇವೆ. ನಮ್ಮ ಕೆಲಸ ಏನೂ ಇಲ್ಲ ಎಂದು ಕುಳಿತು ಕೊಳ್ಳಬಾರದು. ಇಲ್ಲಿಯೂ ಕೂಡ ಪಕ್ಷ ಮುಖ್ಯವಲ್ಲ. ಎ ಮಾಜಿ ಶಾಸಕರು ಕೂಡ ತಮ್ಮ ತಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತಿಸುತ್ತಾ ನಾಡು, ನುಡಿಯ ವಿಚಾರದಲ್ಲಿ ತಮ್ಮದೇ ಆದ ಸೇವೆ ಮಾಡಬೇಕು ಎಂದ ಅವರು, ಮುಂದಿನ ವಿಧಾನಸಭೆ ಕಲಾಪದಲ್ಲಿ ಎಲ್ಲರೂ ಕಾವೇರಿ ನೀರಿಗೆ ಸಂಬಂಧಿಸಿದಂತೆ ಒಟ್ಟಾಗಿ ನಿರ್ಧಾರ ತೆಗೆದುಕೊಳ್ಳ ಬೇಕು. ಈ ಎ ವಿಚಾರಗಳಿಗೆ ಪ್ರತಿರೂಪವಾಗಿ ಪಕ್ಷಾತೀತವಾಗಿ ದೊಡ್ಡ ಮಟ್ಟದ ಸಭೆಯನ್ನು ಕರೆಯಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರ ಸಂಘದ ನಿರ್ದೇಶಕ ಕೆ.ಜಿ. ಕುಮಾರಸ್ವಾಮಿ ಇದ್ದರು.