ಸ್ಕಿಲ್ ಅಕಾಡೆಮಿಗೆ ಸಚಿವರ ಸಕರಾತ್ಮಕ ಸ್ಪಂದನೆ

chamber-of-commerce-ministe

ಶಿವಮೊಗ್ಗ: ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿ ಯಿಂದ ನಡೆಸಲು ಉದ್ದೇಶಿಸಿರುವ ಉನ್ನತ ಮಟ್ಟದ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಕ್ಕೆ ಸಹಕಾರ ನೀಡುವಂತೆ ರಾಯಚೂರಿನಲ್ಲಿ ಕೌಶಲಾಭಿವೃದ್ಧಿ ಸಚಿವ ಡಾ| ಶರಣ ಪ್ರಕಾಶ್ ಆರ್ ಪಾಟೀಲ್ ಅವರಿಗೆ ಶಿವಮೊಗ್ಗ ಜಿ ವಾಣಿಜ್ಯ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ ಜಿ ವಾಣಿಜ್ಯ ಸಂಘದ ವತಿಯಿಂದ ಉನ್ನತ ಮಟ್ಟದ ಕೌಶಲ್ಯಾಭಿವೃದ್ಧಿ ಕೇಂದ್ರ, ಉದ್ಯಮಶೀಲತೆ ಮತ್ತು ನಿರ್ವ ಹಣಾ ತರಬೇತಿ ಪ್ರಾರಂಭಿಸಲು ರಾಜ್ಯ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡುವಂತೆ ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ಸಚಿವರಿಗೆ ಮನವಿ ಸಲ್ಲಿಸಿ ಜಿ ಸಂಘವು ನಡೆಸುತ್ತಿರುವ ವೈವಿಧ್ಯ ಚಟುವಟಿಕೆಗಳ ಬಗ್ಗೆಯು ಸಚಿವರ ಗಮನಕ್ಕೆ ತರಲಾಯಿತು.
ಸ್ಕೀಲ್ ಅಕಾಡೆಮಿಯ ಸ್ಥಾಪನೆ ಯಿಂದ ಆಗುವ ಪ್ರಯೋಜನ ಹಾಗೂ ಕೌಶಲ್ಯಯುತ ಅಭ್ಯರ್ಥಿ ಗಳ ನಿರ್ಮಾಣದ ಸಂಪೂರ್ಣ ಮಾಹಿತಿ ಪಡೆದ ಸಚಿವ ಡಾ| ಶರಣ ಪ್ರಕಾಶ್ ಆರ್ ಪಾಟೀಲ್ ಅವರು ಸಕರಾತ್ಮಕವಾಗಿ ಸ್ಪಂದಿಸಿ, ಮುಂದಿನ ದಿನಗಳಲ್ಲಿ ಸ್ಕೀಲ್ ಅಕಾಡೆಮಿ ಹಾಗೂ ಶಿವಮೊಗ್ಗ ಜಿಯ ಸಮಗ್ರ ಅಭಿರವೃದ್ಧಿ ದೃಷ್ಠಿಯಿಂದ ಸಂಪೂರ್ಣ ಸಹಕಾರ ನೀಡುವು ದಾಗಿ ಭರವಸೆ ನೀಡಿದರು.
ರಾಯಚೂರಿನಲ್ಲಿ ಆಯೋಜಿಸಿದ್ದ ಅಖಿಲ ಕರ್ನಾಟಕ ರಾಜ್ಯ ವಾಣಿಜ್ಯ ಸಂಘಗಳ ಸಮಾವೇಶದ ಸಂದರ್ಭದಲ್ಲಿ ಸಚಿವರಿಗೆ ಮನವಿ ಸಲ್ಲಿಸಲಾ ಯಿತು. ಎಫ್‌ಕೆಸಿಸಿಐ ಅಧ್ಯಕ್ಷ ಬಿ.ವಿ. ಗೋಪಾಲ ರೆಡ್ಡಿ, ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್, ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್ ಕುಮಾರ್, ಉದ್ಯಮಿ ಕಿರಣ್, ಎಂ. ರಾಜು, ಪ್ರದೀಪ್ ಎಲಿ, ರಮೇಶ್ ಹೆಗ್ಡೆ, ಮಾಜಿ ಅಧ್ಯಕ್ಷ ಡಿ.ಎಂ. ಶಂಕರಪ್ಪ, ಜೆ.ಆರ್. ವಾಸುದೇವ್, ಜಿ.ವಿ. ಕಿರಣ್‌ಕುಮಾರ್ ಸೇರಿದಂತೆ ಶಿವಮೊಗ್ಗದ ಕೈಗಾರಿಕಾ ಉದ್ಯಮಿಗಳು ಉಪಸ್ಥಿತರಿದ್ದರು.