ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಧ್ಯಯನ ಕೇಂದ್ರ…
ಶಿವಮೊಗ್ಗ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವ ಆಕಾಂಕ್ಷಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಸಮನ್ವಯ ಟ್ರಸ್ಟ್ ವತಿಯಿಂದ ಕೆ.ಎ.ದಯಾನಂದ್ ಐಎಎಸ್ ಹೆಸರಿನಲ್ಲಿ ಉಚಿತ ವಾಚನಾಲಯ ಸೌಲಭ್ಯ ಆರಂಭಿಸಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲ ಒದಗಿಸುವ ದೃಷ್ಠಿಯಲ್ಲಿ ರಾಜ್ಯದಲ್ಲಿಯೇ ಮೊದಲ ವಿಶೇಷ ಪ್ರಯತ್ನ ಇದಾಗಿದೆ.
ಉಚಿತ ವಾಚನಾಲಯ ಸೌಲಭ್ಯ ಪಡೆಯಲು ವಿದ್ಯಾರ್ಥಿ ಗಳನ್ನು ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ೨೦೨೩ರಲ್ಲಿ ಪದವಿ ಪೂರೈಸುತ್ತಿರುವ ಹಾಗೂ ಪದವಿ ಪೂರೈಸಿರುವ ವಿದ್ಯಾರ್ಥಿಗಳಿಗೆ ಸೆ.೧೭ ರಂದು ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸ ಬೇಕು. ಗೂಗಲ್ ಫಾರ್ಮ್ ಭರ್ತಿ ಮಾಡಿ eಠಿಠಿmo://ಟ್ಟಞo.ಜ್ಝಛಿ/೯S೩ಘ೯oqsಡಿಘೆmಖ್ಗಿPಅ ನೋಂದಾಯಿಸಿಕೊಳ್ಳಬಹುದು.
ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ವಿವರ: ಪರೀಕ್ಷೆಯನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಎರಡು ಹಂತಗಳಲ್ಲಿ ನಡೆಸಲಾಗು ತ್ತದೆ. ವಿದ್ಯಾರ್ಥಿ ವೇತನ ಪರೀಕ್ಷೆಯು ೧೦೦ ಪ್ರಶ್ನೆ ಹಾಗೂ ೨೦೦ ಅಂಕಗಳನ್ನು ಒಳಗೊಂಡಿರು ತ್ತದೆ. ಎ ಪ್ರಶ್ನೆಗಳು ಕಡ್ಡಾಯ ವಾಗಿರುತ್ತವೆ. ಪ್ರಶ್ನೆ ಪತ್ರಿಕೆಯನ್ನು ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದಲ್ಲಿರುತ್ತದೆ.
ಪ್ರತಿ ಪ್ರಶ್ನೆಯು ೨ ಅಂಕಗಳನ್ನು ಹೊಂದಿರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ ೧/೪ ನೇಯ ಅಂಕಗಳನ್ನು ಅಂದರೆ ೦.೫೦ (೨ ಅಂಕಗಳಲ್ಲಿ) ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಪರೀಕ್ಷೆಯ ಅವಧಿಯು ೨ ಗಂಟೆ ಇರಲಿದೆ. ಲಿಖಿತ ಪರೀಕ್ಷೆಯ ಫಲಿತಾಂಶದ ಕಟ್ ಆಫ್ ನಿಗದಿ ಪಡಿಸುವುದು ಸಮನ್ವಯ ಟ್ರಸ್ಟ್ ವಿವೇಚನೆಗೆ ಒಳಪಟ್ಟಿರುತ್ತದೆ.
ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ಅಗತ್ಯ ದಾಖಲೆ ಗಳೊಂದಿಗೆ ಸಮನ್ವಯ ಟ್ರಸ್ಟ್ ಆವರಣದಲ್ಲಿ ಹಾಜರಿರಬೇಕು. ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ವಿದ್ಯಾರ್ಥಿ ವೇತನ ವಿವರಗಳ ಬಗ್ಗೆ ವೈಯಕ್ತಿಕವಾಗಿ ತಿಳಿಸಲಾಗುತ್ತದೆ.
ಸಾಮಾನ್ಯ ಅಧ್ಯಯನ ಪತ್ರಿಕೆ ಪರೀಕ್ಷಾ ಪಠ್ಯಕ್ರಮ ( ೨೦೦ ಅಂಕಗಳು) : ಭಾರತದ ಇತಿಹಾಸ, ಭಾರತದ ರಾಜಕೀಯ ಮತ್ತು ಸಂವಿಧಾನ, ಭೂಗೋಳ ಶಾಸ್ತ್ರ, ಭಾರತದ ಆರ್ಥಿಕತೆ, ಸಾಮಾನ್ಯ ವಿeನ, ಮಾನಸಿಕ ಸಾಮರ್ಥ್ಯ, ಡಿಸೆಂಬರ್ ೨೦೨೨ ರಿಂದ ಆಗಸ್ಟ್ ೨೦೨೩ರವರೆಗಿನ ಪ್ರಚಲಿತ ವಿದ್ಯಮಾನಗಳು, ಆಕಾಂಕ್ಷಿಗಳ ಸಾಮಾನ್ಯ ಪ್ರಶ್ನೆಗಳು
ಉಚಿತ ವಾಚನಾಲಯ ಸೌಲಭ್ಯಕ್ಕೆ ಯಾರನ್ನು ಆಯ್ಕೆ ಮಾಡಲಾಗುತ್ತದೆ?: ಪರೀಕ್ಷೆಯು ಮುಖ್ಯವಾಗಿ ನಾಗರೀಕ ಸೇವಾ ಆಕಾಂಕ್ಷಿಯಾಗಿರುವ ಪ್ರತಿಭಾವಂತ ಮತ್ತು ಕಠಿಣ ಪರಿಶ್ರಮಿ ವಿದ್ಯಾರ್ಥಿ ಗಳನ್ನು ಆಯ್ಕೆ ಮಾಡಲಾಗುವುದು.
ಆಯ್ಕೆಯ ವಿಧಾನ : ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸಮನ್ವಯ ಟ್ರಸ್ಟ್ ಸಂಸ್ಥೆಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ. ಸಂದರ್ಶನದ ಸುತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಅಂತಿಮ ಆಯ್ಕೆಯು ಸಮನ್ವಯ ಟ್ರಸ್ಟ್ ಆಡಳಿತ ಮಂಡಳಿಯ ವಿವೇಚನೆಗೆ ಒಳಪಟ್ಟಿರುತ್ತದೆ.
ಆಫ್ಲೈನ್ ಪರೀಕ್ಷೆಗೆ ಹಾಜರಾಗಲು ಪರೀಕ್ಷೆಯ ೨ ದಿನಗಳ ಮೊದಲು ನಿಮ್ಮ ನೋಂದಾಯಿತ ಇಮೇಲ್/ಮೊಬೈಲ್ಗೆ ಸ್ಥಳ ಮತ್ತು ಪರೀಕ್ಷಾ ಸಮಯವನ್ನು ಕಳುಹಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಮನ್ವಯ ಟ್ರಸ್ಟ್ oZಞZqZqsZ ಜ್ಞಿbಜಿZ.ಟ್ಛ್ಛಜ್ಚಿಜಿZಃ ಜಞZಜ್ಝಿ.ಟಞ ಸಂಪರ್ಕಿಸ ಬಹುದಾಗಿದೆ.