ಹೊಸನಗರ: ಕನ್ನಡ ಶಿಕ್ಷಕಿ ಫೌಜಿಯಾಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

fouziya-seravath

ಶಿವಮೊಗ್ಗ: ಕರ್ನಾಟಕ ಶಿಕ್ಷಣ ಇಲಾಖೆಯು ನೀಡಲ್ಪಡುವ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯು ಈ ಬಾರಿ ಹೊಸನಗರ ತಾಲೂಕಿನ ಅರಸಾಳು ಕ್ಲಸ್ಟರ್ ಮಾದಾಪುರ ಸರ್ಕಾರಿ ಕಿರಿಯ ಪ್ರಾಥಾಮಿಕ ಶಾಲೆಯ ಕನ್ನಡ ಶಿಕ್ಷಕಿ ಫೌಜಿಯಾ ಸರಾವತ್ ಅವರಿಗೆ ಲಭಿಸಿದೆ.
ಪ್ರಾಥಮಿಕ ಶಾಲಾ ವಿಭಾಗ ದಿಂದ ರಾಜ್ಯದಲ್ಲಿ ೨೦ ಶಿಕ್ಷಕರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಹಾಗೆಯೇ ಪ್ರೌಢಶಾಲಾ ವಿಭಾಗದಿಂದ ೧೧ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಹಾಗೆಯೇ ಶಿಕ್ಷಕಿಯರಿಗೆ ಸಾವಿತ್ರಿಭಾಯಿ ಪುಲೆ ಹೆಸರಲ್ಲಿ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆಯಂದು ಪ್ರಶಸ್ತಿ ಯನ್ನು ಬೆಂಗಳೂರಲ್ಲಿ ಪ್ರದಾನ ಮಾಡಲಾಗುವುದು.
ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಹೊಸನಗರ ತಾಲೂಕಿನ ಮಾದಾಪುರ ಹಿರಿಯ ಪ್ರಾಥಮಿಕ ಶಾಲೆಯ ಫೌಜಿಯಾ ಸರಾವತ್ ಅವರಿಗೆ ಪ್ರೌಢಶಾಲಾ ವಿಭಾಗದಿಂದ ಸಾಗರ ತಾಲೂಕಿನ ತ್ಯಾಗರ್ತಿ ಪ್ರೌಢಶಾಲೆಯ ವಿಜನ ಶಿಕ್ಷಕ ವಿಜಯ್ ಆನಂದರಾವ್ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಫೌಜಿಯಾ ಸರಾವತ್ ಅವರು ೨೦೦೭ ರಲ್ಲಿ ಶಿಕ್ಷಕ ವೃತ್ತಿಗೆ ಸೇರಿಕೊಂಡು ಸುಮಾರು ೧೬ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಈಗಾಗಲೇ ಜಿಲ್ಲಾಮಟ್ಟದ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿ ದ್ದಾರೆ. ಇತ್ತೀಚೆಗೆ ಜಿಲ್ಲಾಮಟ್ಟದ ಸಾವಿತ್ರಿಭಾಯಿ ಪುಲೆ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದುಕೊಂಡಿದ್ದರು. ನಲಿ ಕಲಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿರುವ ಇವರು ಹಲವು ಕಾರ್ಯಕ್ರಮ ನಡೆಸಿ ಮಕ್ಕಳ ಕಲಿಕೆಗೆ ಸಹಕರಿಸಿದ್ದಾರೆ. ನಲಿ -ಕಲಿ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಕಳೆದ ಎರಡು ವರ್ಷಗಳಿಂದಲೂ ತಮ್ಮದಾಗಿಸಿಕೊಂಡಿದ್ದಾರೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಮಕ್ಕಳನ್ನು ಕ್ರೀಡೆ ಮತ್ತು ಇತರೆ ಚಟುವಟಿ ಕೆಗಳಲ್ಲಿ ಭಾಗವಹಿಸುವಂತೆ ಪ್ರೋ ನೀಡಿದ್ದಾರೆ.
ನಲಿ-ಕಲಿ ಕ್ರಿಯಾಶೀಲ ತಾರೆ ಯರ ಗುಂಪಿನ ಮೂಲಕ ವಿವಿಧ ಚಟುವಟಿಕೆಗಳನ್ನು ಆಯೋಜನೆ ಮಾಡಿ ಪುನಶ್ಚೇತನಗೊಳಿಸಿ ವಿಶೇಷ ದಾಖಲಾತಿ ಆಂದೋಲನ ನಡೆಸಿ ದಾನಿಗಳಿಂದ ಶಾಲೆಗೆ, ಮಕ್ಕಳಿಗೆ ಉಪಕರಣಗಳನ್ನು ಕೊಡಿಸಿ ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವುದು ಸೇರಿದಂತೆ ಅತ್ಯಂತ ಕ್ರಿಯಾಶೀಲವಾಗಿರುವ ಇವರಿಗೆ ಪ್ರಶಸ್ತಿ ಬಂದಿರುವುದು ಅತ್ಯಂತ ನ್ಯಾಯಸಮ್ಮತವಾಗಿದೆ ಎಂದು ಶಿಕ್ಷಕಿ ಭಾಗಿರಥಿ ಅಭಿಪ್ರಾಯ ಪಡುತ್ತಾರೆ.