ವೇತನ ಪಾವತಿ ವಿಳಂಬ ಖಂಡಿಸಿ ಜಿಪಂ ಸಿಇಒಗೆ ಮನವಿ…

NAREGA

ಶಿವಮೊಗ್ಗ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸೇವೆ ಸಲ್ಲಿಸಿರುವ ಸಿಬ್ಬಂದಿಗಳ ವೇತನ ವಿಳಂಬವಾಗುತ್ತಿರುವುದನ್ನು ಖಂಡಿಸಿ ತಕ್ಷಣವೇ ವೇತನ ಪಾವತಿ ಸಲು ಆಗ್ರಹಿಸಿ ಮಹಾತ್ಮ ಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ವತಿ ಯಿಂದ ಇಂದು ಜಿಪಂ ಸಿಇಓಗೆ ಮನವಿ ಸಲ್ಲಿಸಲಾಯಿತು.
ಉದ್ಯೋಗ ಖಾತ್ರಿ ಯೋಜ ನೆಯಡಿ ಜಿಲ್ಲೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಸಂಯೋಜ ಕರು, ಅಕೌಂಟ್ ಮ್ಯಾನೇಜರ್, ಆಡಳಿತ ಸಹಾಯಕರು, ತಾಂತ್ರಿಕ ಸಂಯೋಜಕರು, ಡಾಟಾ ಎಂಟ್ರಿ ಆಪರೇಟರ್ ಹೀಗೆ ಹಲವು ವಿಭಾ ಗಗಳಲ್ಲಿ ಕೆಲಸಕ್ಕೆ ತೆಗೆದುಕೊಳ್ಳ ಲಾಗಿದೆ. ಆದರೆ, ೨೦೨೩ರ ಏಪ್ರಿಲ್ ನಿಂದ ಇಲ್ಲಿಯವರೆಗೆ ನಮಗೆ ಯಾವುದೇ ರೀತಿಯ ವೇತನ ಪಾವತಿಯಾಗಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.
ಪ್ರಸ್ತುತ ಹಣದುಬ್ಬರದ ಈ ಕಾಲದಲ್ಲಿ ಜೀವನ ನಿರ್ವಹಣೆ ಮಾಡಲು ನಮಗೆ ಕಷ್ಟವಾಗುತ್ತದೆ. ಅಲ್ಲದೇ, ಗ್ರಾಮ ಪಂಚಾಯಿತಿ ಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆಗೆ ಅವಶ್ಯಕವಾಗಿರುವ ಪ್ರಯಾಣ ಭತ್ಯೆ ಕೂಡ ಪಾವತಿಸ ಲಾಗಿಲ್ಲ, ವೇತನವೂ ಇಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದ್ದ ರೂ ಪ್ರಯೋಜನವಾಗಿಲ್ಲ. ಆದ್ದರಿಂದ ನಮಗೆ ತಕ್ಷಣವೇ ಬಾಕಿ ವೇತನ ಪಾವತಿಸಬೇಕು. ಮತ್ತು ಪ್ರತಿ ತಿಂಗಳು ವಿಳಂಬವಾಗದಂತೆ ಕ್ರಮ ತೆಗೆದುಕೊಳ್ಳಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರತಿಭಟನಾಕಾರರಿಗೆ ಭರವಸೆ ನೀಡಿದ ಮುಖ್ಯ ಕಾರ್ಯನಿರ್ವ ಣಾಧಿಕಾರಿಗಳು ನಿಮ್ಮ ಸಮಸ್ಯೆ ಯನ್ನು ಶೀಘ್ರವೇ ಬಗೆಹರಿಸಲಾ ಗುವುದು ಎಂದು ಹೇಳಿದರು.