೩೩ನೇ ರಾಜ್ಯ ಮಟ್ಟದ ಸಂಸ್ಕೃತ ಭಾಷಣ ಸ್ಪರ್ಧೆ ವಿಜೇತರು..
ಶಿವಮೊಗ್ಗ: ನಗರದ ಸಂಸ್ಕೃತ ಭಾರತೀ, ತರುಣೋದಯ ಸಂಸ್ಕತ ಸೇವಾ ಸಂಸ್ಥೆ ಆಶ್ರಯದಲ್ಲಿ ಭಾನುವಾರ ಶಿವಮೆಗ್ಗ ನಗರದ ಸಂಸ್ಕೃತ ಭವನದಲ್ಲಿ ೩೩ನೇ ರಾಜ್ಯ ಮಟ್ಟದ ಸಂಸ್ಕೃತ ಭಾಷಣ ಸ್ಪರ್ಧೆ ನಡೆಸಲಾಗಿದ್ದು, ವಿಜೇತರ ವಿವರ ಇಂತಿದೆ.
ದೇಶದ ಆರ್ಥಿಕ ಸುಭದ್ರತೆಗೆ ಚಾಣಕ್ಯನ ಮಾರ್ಗೋಪಾಯ ಗಳು ಎಂದು ವಿಚಾರವಾಗಿ ಸಂಸ್ಕೃತ ದಲ್ಲಿ ಭಾಷಣ ಏರ್ಪಡಿಸಲಾಗಿತ್ತು. ನಾಗರಾಜ ನಾರಾಯಣ ಭಟ್ಟ, ಶ್ರೀ ಮಾತಾ ಸಂಸ್ಕೃತ ಮಹಾವಿದ್ಯಾ ಲಯ ಉಮ್ಮಚಗಿ ವಿದ್ಯಾರ್ಥಿ, ಇವರು ಶ್ರೀ ಆದಿಚುಂಚನಗಿರಿ ಕ್ಷೇತ್ರದ ಪರಮ ಪೂಜ್ಯ ಶ್ರೀ ಡಾ|| ಬಾಲಗಂಗಾಧರನಾಥ ಸ್ವಾಮೀಜಿ ಯವರ ಸ್ಮರಣಾರ್ಥವಾಗಿ ನೀಡ ಲಾಗುತ್ತಿರುವ ಮೊದಲನೇ ಸ್ಥಾನ ವನ್ನು ಪಡೆದುಕೊಂಡಿರುತ್ತಾರೆ.
ಸುದರ್ಶನ ಎಮ್.ಎಸ್. ಶ್ರೀ ರಾಜೀವ ಗಾಂಧಿ ಪರಿಸರ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾ ಲಯ ಶೃಂಗೇರಿ ವಿದ್ಯಾರ್ಥಿಯಾ ಗಿದ್ದು, ಇವರು ಶ್ರೀಮತಿ ಸೀತಮ್ಮ ಹಾಗೂ ವಿದ್ವಾನ್ ವೆಂಕಟರಮಣ ಉಪಾಧ್ಯ ಸ್ಮರಣಾರ್ಥವಾಗಿ ಟಿ.ವಿ. ನರಸಿಂಹ ಮೂರ್ತಿಯವರು ನೀಡಲಾಗುತ್ತಿರುವ ಎರಡನೇ ಸ್ಥಾ ನವನ್ನು ಪಡೆದುಕೊಂಡಿರುತ್ತಾರೆ.
ಹರಿತ್ರ ಭಾವಿ ಸಮೀರ ಗುರುಕುಲಂ, ಸೋಂದ ವಿದ್ಯಾರ್ಥಿ ಇವರು ಅ.ನಾ. ಮಾಧವರಾವ್ ಸ್ಮರಣಾರ್ಥವಾಗಿ ಆ.ನಾ. ರಾಧಮ್ಮ ರವರು ನೀಡಲಾಗುತ್ತಿರುವ ಮೂರನೇ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಶ್ರೀ ಸೋಮಶೇಖರ ಅವರು ಶ್ರೀ ಕಾಲ ಭೈರವೇಶ್ವರ ಸಂಸ್ಕೃತ ವೇದ ಆಗಮ ಮಹಾ ವಿದ್ಯಾ ಲಯ, ಶ್ರೀ ಆದಿಚುಂಚನಗರಿ ಇದರ ವಿದ್ಯಾರ್ಥಿ ಇವರು ಕರಂ ಬಳ್ಳಿ ಕೃಷ್ಣಶೆಟ್ಟಿಯವರು ಪ್ರಾಯೊ ಜಿಸಿರುವ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಶ್ರೀ ಪ್ರಭಂಜನ ಭಾವಿ ಸಮೀರ ಗುರುಕುಲಂ, ಸೋಂದ ವಿದ್ಯಾರ್ಥಿ ಇವರು ಶ್ರೀಮತಿ ವಾಗ್ಗೇವಿ ಜೋಯಿಸ್ ಹಾಗೂ ಶ್ರೀ ಮಧುಕರ ಜೋಯಿಸ್ ರವರು ಪ್ರಾಯೋಜಿಸಿ ನೀಡಲಾಗುತ್ತಿರುವ ಐದನೇ ಸ್ಥಾನವನ್ನು ಪಡೆದು ಕೊಂಡಿರುತ್ತಾರೆ.
ಶ್ರೀ ಯೋಗೇಶ, ಶ್ರೀ ಕಾಲ ಭೈರವೇಶ್ವರ ಸಂಸ್ಕೃತ ವೇದ ಆಗಮ ಮಹಾ ವಿದ್ಯಾಲಯ, ಆದಿಚುಂಚ ನಗಳು, ವಿದ್ಯಾರ್ಥಿ ಇವರು ಶ್ರೀಮತಿ ನಾಗೇವಿ ಜೋಯಿಸ್ ಹಾಗೂ ಶ್ರೀ ಮಧುಕರ ಜೋಯಿ ಸ್ ರವರು ಪ್ರಾಯೋ ನೀಡಲಾಗು ತ್ತಿರುವ ಐದನೇ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಅಂಜಲಿ ಎ. ಸೈಂಟ್ ಜೋ ಸೆಫ್ ವಿದ್ಯಾಲಯ, ಬೆಂಗಳೂರು ಇದರ ವಿದ್ಯಾರ್ಥಿನಿ ಇವರು ಡಾ.ಭೀಮೇಶ್ವರ ಜೋಶಿ, ಧರ್ಮದರ್ಶಿಗಳು, ಶ್ರೀ ಅನ್ನಪೂ ರ್ಣೇಶ್ವರಿ ದೇವಸ್ಥಾನ, ಶ್ರೀ ಕ್ಷೇತ್ರ ಹೊರನಾಡು ಇವರು ಪ್ರಾಯೋಜಿಸಿ ನೀಡಲಾಗುತ್ತಿರುವ ಆರನೇ ಸ್ಥಾನವನ್ನು ಪಡೆದುಕೊಂ ಡಿರುತ್ತಾರೆ.
ವಿಜೇತರಿಗೆ ನಗದು ಬಹು ಮಾನ ಮತ್ತು ಪ್ರಶಸ್ತಿ ಪತ್ರವನ್ನು ಸಂಸ್ಕೃತ ಭಾರತಿ ಶಿವಮೊಗ್ಗ ಜಿಲ್ಲಾ ಸಂಯೋಜಕ ಹಾಗೂ ತರುಣೋ ದಯ ಸಂಸ್ಕೃತ ಸೇವಾ ಸಂಸ್ಥೆಯ ಅಧ್ಯಕ್ಷ ಟಿ.ವಿ.ನರಸಿಂಹ ಮೂರ್ತಿ ಮತ್ತು ಸಂಸ್ಕೃತ ಭಾರತಿ ಜಿಲ್ಲಾ ಅಧ್ಯಕ್ಷ ಎನ್.ವಿ. ಶಂಕರನಾರಾ ಯಣ ವಿತರಿಸಿದರು.
ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಪ್ರಧಾನ ಕಾರ್ಯ ದರ್ಶಿ, ಆ.ನಾ.ವಿಜಯೇಂದ್ರ ರಾವ್, ಸ್ಪರ್ಧಾ ನಿರ್ಣಯಕರಾದ ಸೂರ್ಯಜಿದ್ದಾರ್, ಶಿವರಾಮ ಭಟ್ಟ, ಗುರುಮೂರ್ತಿ, ಸುವರ್ಣ ಉಪಸ್ಥಿತರಿದ್ದರು.