ಕನಿಷ್ಟ ವ್ಯವಸ್ಥೆಗಳಿಲ್ಲದೆ ಪರದಾಡಿದ ಕ್ರೀಡಾಪಟುಗಳು…
ಸೊರಬ: ಪಟ್ಟಣದ ಎಸ್. ಬಂಗಾರಪ್ಪ ಕ್ರೀಡಾಂಗಣದಲ್ಲಿ ನಿನ್ನೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ ತಾಲೂಕು ಮಟ್ಟದ ದಸರಾ ಆಯ್ಕೆಯ ಕ್ರೀಡಾ ಕೂಟ ಅವ್ಯವಸ್ಥೆಯ ಆಗರವಾಗಿತ್ತು.
ಕ್ರೀಡಾಂಗಣದಲ್ಲಿ ಸ್ವಚ್ಛತೆಯ ಕೊರತೆ, ಕುಡಿಯುವ ನೀರಿಗೆ ಪರದಾಟ, ವಿದ್ಯಾರ್ಥಿನಿಯರಿಗೆ ಬಟ್ಟೆ ಬದಲಿಸಲು ಸಹ ಕೊಠಡಿ ಇರದೇ ಮುಜುಗರ ಅನುಭವಿಸುವ ಸ್ಥಿತಿ, ಪ್ರಥಮ ಚಿಕಿತ್ಸೆಯ ಸೌಲ ಭ್ಯವೂ ಇರಲಿಲ್ಲ. ಇನ್ನೂ ಕ್ರೀಡಾಂಗ ಣದಲ್ಲಿ ಕ್ರೀಡಾಪಟುಗಳು ಅಂಕಣಕ್ಕೆ ಇಳಿಯಲು ಸಹ ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿತ್ತು.
ತಾಲೂಕಿನ ವಿವಿಧ ಭಾಗ ಗಳಿಂದ ಸುಮಾರು ೫೦೦ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ಗಳೇ ಪಾಲ್ಗೊಂಡಿರು ವುದು ಕಂಡು ಬಂದಿತು.
ಕ್ರೀಡಾಂಗಣದಲ್ಲಿ ಆಯೋಜ ಕರು ಕ್ರೀಡಾಕೂಟ ಆಯೋಜಿಸು ವಾಗ ಕೈಗೊಳ್ಳ ಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಕನಿಷ್ಟ ಗಮನವನ್ನು ನೀಡದೇ ಇರುವುದು ಎದ್ದುಕಾಣು ತ್ತಿತ್ತು. ಕ್ರೀಡಾಕೂಟದಲ್ಲಿ ಪಾಲ್ಗೊಂಡ ಕ್ರೀಡಾಪಟುಗಳಿಗೆ ಪ್ರಥಮ ಚಿಕಿತ್ಸೆ ನೀಡುವ ವ್ಯವಸ್ಥೆ ಸಹ ಇರಲಿಲ್ಲ. ಕ್ರೀಡಾಕೂಟಗಳನ್ನು ಆಯೋಜಿಸು ವಾಗ ಅಂಬ್ಯುಲೆನ್ಸ್ ವ್ಯವಸ್ಥೆ ಇರಬೇಕು ಎನ್ನುವ ಬಗ್ಗೆ ಗಮನ ನೀಡದೇ ಸಮೀಪದಲ್ಲಿ ಸರ್ಕಾರಿ ಆಸ್ಪತ್ರೆ ಇದೆ ಎಂದು ಆಯೋಕರು ಬೇಜವಾಬ್ದಾರಿತನ ದಿಂದ ವರ್ತಿಸಿದರು ಎಂದು ಕ್ರೀಡಾ ಪಟುಗಳು ಆರೋಪಿಸಿದ್ದಾರೆ.
ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಅಥ್ಲೆಟಿಕ್ಸ್, ಖೋಖೋ, ಕಬಡ್ಡಿ, ವಾಲಿಬಾಲ್, ಥ್ರೋಬಾಲ್ ಪಂದ್ಯಾವಳಿಗಳನ್ನು ಯುವಕ- ಯುವತಿಯರಿಗೆ ಆಯೋಜಿಸಲಾ ಗಿತ್ತು. ಆದರೆ, ಅಥ್ಲೆಟಿಕ್ಸ್ ಕ್ರೀಡಾಪಟುಗಳು ರನ್ನಿಂಗ್ ಟ್ರ್ಯಾಕ್ ಸಮರ್ಪಕವಾಗಿಲ್ಲದೇ ಅನೇಕರು ಗಾಯಗೊಂಡರು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದ ಕ್ರೀಡಾಪಟುಗಳು ಸಹ ಕ್ರೀಡಾಕೂಟ ದಲ್ಲಿ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗದೆ ಬೇಸರ ವ್ಯಕ್ತಪಡಿಸುವ ಸ್ಥಿತಿ ಎದುರಾಯಿತು.
ಇನ್ನು ಖೋಖೋ, ಕಬಡ್ಡಿ ಅಂಕಣಗಳಂತೂ ಕ್ರೀಡಾಪಟುಗಳಿಗೆ ವ್ಯತಿರಿಕ್ತ ಪರಿಣಾಮ ಬೀರಿತು. ಎಂದರಲ್ಲಿ ಬೆಳೆದ ಹುಲ್ಲುಗಳು, ಕಲ್ಲು ಮಿಶ್ರಿತ (ಗೊಚ್ಚು ಕಲ್ಲು) ಅಂಕಣದಿಂದಾಗಿ ಕ್ರೀಡಾಪಟು ಗಳಿಗೆ ಸ್ಪರ್ಧೆಯ ಹುಮ್ಮಸ್ಸು ಮೊಟಕುವಾಗುವಂತೆ ಮಾಡಿತು ಎಂಬುದು ಕ್ರೀಡಾಭಿ ಮಾನಿಗಳು ಆರೋಪಿಸಿದ್ದಾರೆ.
ಕ್ರೀಡಾಂಗಣದಲ್ಲಿ ಸಮರ್ಪಕ ಶೌಚಾಲಯ ಇಲ್ಲದೇ ವಿದ್ಯಾರ್ಥಿನಿಯರು ಮತ್ತು ಯುವತಿಯರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿಯೂ ಸಹ ಇಲ್ಲದಿರುವುದು ಕಂಡು ಬಂದಿತು. ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಸಂಪೂರ್ಣ ಅವ್ಯವಸ್ಥೆಯ ಆಗರ ವಾಗಿತ್ತು ಎಂದು ಕ್ರೀಡಾಪಟುಗಳು ಮತ್ತು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.