ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸದೇ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕಿದೆ

ಹೊನ್ನಾಳಿ : ದಾಸಸಾಹಿತ್ಯದ ಮೂಲಕ ಕನಕದಾಸರು ಗಮನ ಸೆಳೆದಿದ್ದು, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳ ಬೇಕೆಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ನಗರದ ಟಿ.ಬಿ. ವೃತ್ತದಲ್ಲಿ ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಕನಕದಾಸರು ಸಮಾಜ ಸುಧಾರಕ ರಾಗಿ ಮಾತ್ರವಲ್ಲದೇ, ಸಮಾಜದ ಅಂಕು- ಡೊಂಕುಗಳನ್ನು ತಿದ್ದಲು ಕನ್ನಡ ಸಾಹಿತ್ಯದ ಮೂಲಕ ಮುಂದಾದ ಶ್ರೇಷ್ಟ ವ್ಯಕ್ತಿ ಎಂದ ರೇಣುಕಾಚಾರ್ಯ, ಜತ್ಯಾತೀತ ಮೌಲ್ಯಗಳನ್ನು ಪ್ರತಿಪಾದಿಸಿದ ಕನಕದಾಸರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂದರು.
ಸುಮಾರು ೯೫೦ ಕೆಜಿ ತೂಕದ, ೮ಅಡಿ ೩ಇಂಚು ಎತ್ತರದ ಕನಕದಾಸರ ಕಂಚಿನ ಪ್ರತಿಮೆಯನ್ನು ನಗರದ ಟಿ.ವಿ. ವೃತ್ತದಲ್ಲಿ ಪ್ರತಿಷ್ಟಾಪನೆ ಮಾಡಿದ್ದು ಸಂತಸ ಮೂಡಿಸಿದೆ ಎಂದರು.
ಈ ಸಂದರ್ಭದಲ್ಲಿ ಕುರುಬ ಸಮಾಜದ ಮುಖಂಡರುಗಳಾದ ಪಾಲಾಕ್ಷಪ್ಪ, ಬೀರಪ್ಪ, ಅರ್‍ಯಾಕ್ ಸಿದ್ದಪ್ಪ, ಎಚ್.ಪಿ.ಶಿವಯೋಗಿ, ಉಮಾಪತಿ, ಓಬಳದಾರ್ ಬಾಬು ಸೇರಿದಂತೆ ಮತ್ತಿತತರಿದ್ದರು.