ಸಮಾಜದ ಬದಲಾವಣೆಗೆ ಹೋರಾಟದ ಹಿನ್ನೆಲೆ ಇರಬೇಕು: ಕಾಗೋಡು ತಿಮ್ಮಪ್ಪ
ಸಾಗರ: ಸಮಾಜದ ಬದಲಾವ ಣೆಗೆ ಹೋರಾಟದ ಹಿನ್ನೆಲೆ ಇರ ಬೇಕು ಎಂದು ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಇಲ್ಲಿನ ವರದಹಳ್ಳಿ ರಸ್ತೆಯ ಈಡಿಗರ ಸಮುದಾಯ ಭವನದಲ್ಲಿ ಸಾಗರ ಪ್ರಾಂತ್ಯ ಆರ್ಯ ಈಡಿಗರ ಸಂಘದಿಂದ ಸಮಾಜದ ನೂತನ ಸಚಿವರು ಮತ್ತು ಶಾಸಕರಿಗೆ ಏರ್ಪ ಡಿಸಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು , ಸಮಾಜ ಬೆಳೆಯಲು ಶಿಸ್ತು ಮತ್ತು ಒಗ್ಗಟ್ಟಿನ ಅಗತ್ಯವಿದೆ ಎಂದರು.
ಹೋರಾಟದ ಮೂಲಕ ಸಮಾಜದ ಬದಲಾವಣೆಯೂ ಸಾಧ್ಯವಾಗಿದೆ. ೧೯೫೨ರಲ್ಲಿ ಉಳುವ ವನೇ ಹೊಲದೊಡೆಯ ಹೋರಾಟ ಈ ನೆಲದಲ್ಲಿ ಆರಂಭ ಗೊಂಡಿತು. ಲೋಹಿಯಾ, ಗೋಪಾಲಗೌಡರು ಈ ಹೋರಾಟದಲ್ಲಿ ಭಾಗವಹಿಸಿ ದ್ದರು. ಈ ಹೋರಾಟದ ನಂತರ ೧೯೭೨ರಲ್ಲಿ ನಾನು ಶಾಸನಸಭೆಗೆ ಹೋದಾಗ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರ ಮೂಲಕ ಇದಕ್ಕೊಂದು ಶಾಸನಸ್ವರೂಪ ಸಿಕ್ಕಿತು. ಗೇಣಿ ರೈತರು ಭೂಮಿ ಹಕ್ಕು ಪಡೆದರು. ಇದು ಇತಿಹಾಸದಲ್ಲಿ ಶಾಶ್ವತವಾಗಿ ದಾಖಲಾಗಿದೆ ಎಂದರು.
ಕಾಗೋಡು ಚಳವಳಿ ಹಿಂದೆ ರಾಜಕಾರಣದ ಬೆಳವಣಿಗೆ ಸಾಧ್ಯ ವಾಯಿತು. ಇಂಥ ಹೋರಾಟದ ಫಲ ಎಲ್ಲ ಸಮಾಜದವರಿಗೆ ಸಿಕ್ಕಿದೆ. ಯಾವುದೇ ಭಿನ್ನಾಭಿಪ್ರಾಯವಿಲ್ಲದೇ ಹೋರಾಟ ಮಾಡಿಕೊಂಡು ಬಂದ ಸಮಾಜ ನಮ್ಮದು. ನನ್ನ ಬದುಕಿನಲ್ಲಿ ಏನೇನು ಮಾಡಬೇಕು ಎಂದು ಅಂದುಕೊಂಡಿzನೋ ಅದೆಲ್ಲ ವನ್ನೂ ಮಾಡಿ ತೋರಿಸಿದ್ದೇನೆ. ಮುಂದಿನ ಹೋರಾಟಕ್ಕೆ ಸಮಾಜದ ಮಧು ಬಂಗಾರಪ್ಪ, ಗೋಪಾಲಕೃಷ್ಣ ಅಂಥವರು ಇzರೆ. ಯಾವುದನ್ನು ಮಾಡುವುದಿದ್ದರೂ ಹೃದಯ ವೈಶಾಲ್ಯತೆಯಿಂದ ಆಲೋಚಿಸ ಬೇಕು ಎಂದವರು ಸಲಹೆ ನೀಡಿದರು.
ಅಭಿನಂದನೆ ಸ್ವೀಕರಿಸಿದ ಸಚಿವ ಮಧು ಬಂಗಾರಪ್ಪ ಮಾತನಾಡಿ, ಸಮಾಜದ ಹಿರಿಯರಾದ ಕಾಗೋಡು ತಿಮ್ಮಪ್ಪನವರು ಸಮಸ್ಯೆಗೆ ಒತ್ತು ಕೊಡುತ್ತ ರಾಜಕಾರಣ ಮಾಡಿಕೊಂಡು ಬಂದಿzರೆ. ಸಾಮಾನ್ಯ ಜನರಿಗೆ ಸರ್ಕಾರದ ಸೌಲಭ್ಯ ಸಿಗಬೇಕು ಎಂಬುದು ಅವರ ಚಿಂತನೆ. ಮಲೆನಾಡಿನಲ್ಲಿ ಅನೇಕ ಸಮಸ್ಯೆ ಗಳಿವೆ. ಬಗರ್‌ಹುಕುಂ, ೯೪-ಸಿ, ಅರಣ್ಯ ಹಕ್ಕು, ಶರಾವತಿ ಸಂತ್ರಸ್ತರ ಸಮಸ್ಯೆ ನಮ್ಮ ಎದುರಿಗಿರುವ ಸವಾಲುಗಳು. ನನಗೂ ಮಲೆನಾಡಿನ ಸಮಸ್ಯೆಯ ಅರಿವಿದೆ. ಇನ್ನು ೫ ವರ್ಷದೊಳಗೆ ಶೇ. ೧೦೦ ರಷ್ಟು ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡುತ್ತೇನೆ. ಹಿಂದೆ ಶಾಸಕನಾಗಿದ್ದ ಅವಧಿಯಲ್ಲಿ ಸೊರಬದಲ್ಲಿ ೧೯೦೦ ಜನರಿಗೆ ಭೂಮಿ ಹಕ್ಕು ಕೊಟ್ಟಿದ್ದೇವೆ. ೯೪-ಸಿ ಕಾಗೋಡು ತಿಮ್ಮಪ್ಪನವರ ಕನಸು. ಭೂಮಿ ಹಕ್ಕು ಕೊಡುವುದು ಪುಣ್ಯದ ಕೆಲಸ. ಸರ್ಕಾರದಿಂದ ಇದನ್ನು ಅನುಷ್ಠಾನಗೊಳಿಸಲು ಎಲ್ಲ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.
ನಾವು ದೀಪ ಹಚ್ಚಿ ಶರಾವತಿ ಸಂತ್ರಸ್ತರನ್ನು ಕತ್ತಲಲ್ಲಿಟ್ಟಿದ್ದೇವೆ. ಅವರ ತ್ಯಾಗದ ಕಾರಣದಿಂದ ನಾವು ಬೆಳಕು ಕಂಡಿದ್ದೇವೆ. ಅವರಿಗೆ ಇನ್ನೂ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ. ಹೋರಾಟದ ಮೂಲಕ ಅವರಿಗೆ ನ್ಯಾಯ ಕೊಡುತ್ತೇವೆ. ಜನಪರ ವಾದ ಚಿಂತನೆ ಮತ್ತು ಹೋರಾಟದ ಗುಣ ನನ್ನ ರಕ್ತದಲ್ಲಿದೆ. ಸಮಸ್ಯೆ ಇತ್ಯರ್ಥಕ್ಕೆ ಎಲ್ಲ ರೀತಿಯ ಹೋರಾಟ ಮಾಡುತ್ತೇವೆ ಎಂದರು.
ಅಭಿನಂದನೆ ಸ್ವೀಕರಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ರಾಜ್ಯದಲ್ಲಿ ಈಡಿಗ ಸಮುದಾಯ ಸುಮಾರು ೫೫-೬೦ ಲಕ್ಷ ಸಂಖ್ಯೆಯಿರಬಹುದು. ಕಾಗೋಡು ತಿಮ್ಮಪ್ಪ ಮತ್ತು ಬಂಗಾರಪ್ಪನವರು ಜನಾಂಗದ ನಾಯಕರಾಗಿ ಮಾರ್ಗದರ್ಶನ ಮಾಡಿzರೆ. ಎಲ್ಲ ಸಮಾಜದ ಜೊತೆ ಉತ್ತಮ ಸಂಬಂಧವಿಟ್ಟು ಕೊಂಡು ನಮ್ಮ ಸಮಾಜವನ್ನು ಗಟ್ಟಿಗೊಳಿಸಬೇಕು. ಸಮಾಜದ ಕೋಟಾದಲ್ಲಿ ಬಿಜೆಪಿ ಸಚಿವರಾದ ವರು ಸಮಾಜದ ಏಳಿಗೆ ಚಿಂತನೆ ಮಾಡದೆ ಆರ್‌ಎಸ್‌ಎಸ್ ಕಡೆ ಹೋದರೆಂದು ಆರೋಪಿಸಿದರು.
ಸರ್ಕರ ಬೇರೆ ಬೇರೆ ಸಮಾಜದ ನಿಗಮ ಸ್ಥಾಪಿಸಿ ಅವರ ಬೆಳವಣಿಗೆಗೆ ಕೋಟ್ಯಾಂತರ ರೂ. ಅನುದಾನ ನೀಡಿದೆ. ಆದರೆ ನಮಗೆ ಕೋಶ ರಚನೆ ಮಾಡಿದರು. ಈಡಿಗ ಸಮಾಜಕ್ಕೆ ನಿಗಮ ಮಾಡಿ ೫೦೦ ಕೋಟಿ ರೂ. ಅನುದಾನ ಕೊಡ ಬೇಕು. ಈ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು. ಸ್ವಾಮೀಜಿಯವ ರೊಬ್ಬರು ಈ ಸಮಾಜದ ಜವಾಬ್ದಾರಿ ಹೊರದಿದ್ದರೆ ನಾವು ಉದ್ಧಾರವಾಗುವುದಿಲ್ಲ. ಪಕ್ಷ ಯಾವುದಾದರೂ ಇರಲಿ, ಸಮಾಜದ ಪ್ರಶ್ನೆ ಬಂದಾಗ ಎಲ್ಲರೂ ಒಂದಾಗಬೇಕು ಎಂದರು.
ಶಿರಸಿ-ಸಿzಪುರ ಶಾಸಕ ಭೀಮಣ್ಣ ಟಿ.ನಾಯ್ಕ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಬಂಗಾರಪ್ಪ ನವರು ಈ ಸಮಾಜಕ್ಕೆ ರಾಜಕೀಯ ಪ್ರe ಮತ್ತು ರಾಜಕಾರಣದ ಶಕ್ತಿ ನೀಡಿದರು. ಸಮಾಜದಲ್ಲಿ ಎಲ್ಲರಿಗೂ ಜವಾಬ್ದಾರಿಗಳಿವೆ. ಬಂಗಾರಪ್ಪನವರ ಅವಧಿಯಲ್ಲಿ ಸಮಾಜದ ಹತ್ತಾರು ಜನರು ಶಾಸಕರು, ಸಂಸದರು ಇದ್ದರು. ಸಮಾಜದ ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಶಿಕ್ಷಣ ಮತ್ತು ಸಂಸ್ಕಾರ ಸಮಾಜದ ಹೆಗ್ಗುರುತು. ನಮ್ಮ ಸಮಾಜದ ಬಗ್ಗೆ ಹೆಮ್ಮೆ ಪಟ್ಟುಕೊಂಡು ಇನ್ನೊಂದು ಸಮಾಜ ವನ್ನು ಪ್ರೀತಿಸಬೇಕು ಎಂದರು.
ಶ್ರೀ ಕ್ಷೇತ್ರ ಸಿಗಂದೂರು ದೇವಸ್ಥಾನದ ಧರ್ಮದರ್ಶಿ ಡಾ.ರಾಮಪ್ಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಾಜ ದಲ್ಲಿ ಒಗ್ಗಟ್ಟು ಮತ್ತು ಶಿಸ್ತು ಪಾಲಿಸುವುದರಿಂದ ಯಶಸ್ಸು ಲಭಿಸುತ್ತದೆ. ಸಂಕಟ ಎದುರಾದಾಗ ನಮ್ಮ ಒಗ್ಗಟ್ಟಿನ ಬಲದಿಂದ ಎಂಥ ಸಮಸ್ಯೆಗೂ ಪರಿಹಾರ ಕಂಡು ಕೊಳ್ಳಬಹುದು. ಸಮಾಜದ ಯಾರಿಗೇ ಅನ್ಯಾಯವಾದರೂ ಸಂಘಟಿತರಾಗಿ ಹೋರಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಸಮಾಜದ ಉಪಾಧ್ಯಕ್ಷ ಟಿ.ವಿ. ಪಾಂಡುರಂಗ ಅವರು ಸಮಾಜದ ವಿವಿಧ ಬೇಡಿಕೆಯ ಮನವಿಯನ್ನು ಸಚಿವ ಮಧು ಬಂಗಾರಪ್ಪನವರಿಗೆ ನೀಡಿದರು. ಗಗನ್ ಪ್ರಾರ್ಥಿಸಿದರು. ಮರಸ ಮಂಜಪ್ಪ ಸ್ವಾಗತಿಸಿದರು. ಜ್ಯೋತಿ ಎಂ.ಎಚ್. ಮತ್ತು ಅಮೃತ ನಿರೂಪಿಸಿದರು.