ಹೊನ್ನಾಳಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷೆಯಾಗಿ ಕುಂದೂರು ನೀಲಮ್ಮ
ಹೊನ್ನಾಳಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆಯಾಗಿ ಕುಂದೂರು ಕೆಬಿ ನೀಲಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿರುವರು.
ಪಟ್ಟಣದ ಗುರು ಭವನದಲ್ಲಿ ನೂತನ ಅದ್ಯಕ್ಷರ ಪದಗ್ರಹಣ ಸಮಾರಂಭವು ಸಂಘದ ಮಾಜಿ ಅಧ್ಯಕ್ಷ ಕೆ.ಪ್ರಕಾಶ ನಾಯ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಡಿದ ಪ್ರಕಾಶ ನಾಯ್ಕ ಅವರು, ಸಂಘದ ಮುಖ್ಯ ಉದ್ದೇಶ ಶಿಕ್ಷಕರ ರಕ್ಷಣೆ, ಶಿಕ್ಷಕರು ಕರ್ತವ್ಯದಲ್ಲಿ ಎದುರಿಸುವ ಅನೇಕ ಸಮಸ್ಯೆಯ ಪರಿಹಾರಕ್ಕೆ ಸಹಕಾರಿಯಾಗಿ ನಿಂತು ಕೆಲಸ ಮಾಡಿದೆ. ಸಂಘದಲ್ಲಿನ ತಿರ್ಮಾನದಂತೆ ಇಂದು ಅಧ್ಯಕ್ಷರ ಸ್ಥಾನ ಹಂಚಿಕೆ ಪ್ರಕ್ರಿಯೆಯಲ್ಲಿ ನೀಲಮ್ಮನವರು ಅಧ್ಯಕ್ಷೆಯಾಗಲು ಸಾಧ್ಯವಾಗಿದೆ ಎಂದರು.
ಪ್ರತಿ ತಿಂಗಳ ಅಂತ್ಯದಲ್ಲಿ ತಾಲೂಕಿನಲ್ಲಿ ನಿವೃತ್ತಿ ಹೊಂದುವ ಶಿಕ್ಷಕರಿಗೆ ಸಂಘವು ಸನ್ಮಾನ ಕಾರ್ಯ ಹಮ್ಮಿಕೊಳ್ಳುತ್ತಿದ್ದು ಇದೀಗ ಅಧ್ಯಕ್ಷ ಹಾಗು ಕಾರ್ಯದರ್ಶಿಗಳೂ ಮಹಿಳೆ ಯರೇ ಆಗಿದ್ದು ಇನ್ನು ಅನೇಕ ಕಾರ್ಯಯೋಜನೆ ಹಮ್ಮಿಕೊಂಡರೆ ಎ ರೀತಿಯ ಪ್ರೋತ್ಸಾಹ ಸಂಘ ದಿಂದ ದೊರೆಯಲಿದೆ ಎಂದರು.
ಮಾಜಿ ಶಾಸಕ ರೇಣುಕಾಚಾರ್ಯ ಮಾತನಾಡಿ, ಸಂಘವು ಈ ಹಿಂದೆ ಒಪಿಎಸ್ಗಾಗಿ ಹೋರಾಟ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಭೇಟಿ ನೀಡಿ ಬೆಂಬಲಿಸಿದ್ದು ಸರ್ಕಾರಕ್ಕೂ ಒತ್ತಾಯಿಸಲಾಯಿತ್ತು. ಆದರೆ ಸರ್ಕಾರ ಇದನ್ನು ಸೂಕ್ತ ರೀತಿಯಲ್ಲಿ ಪರಿಗಣಿಸದ ಕಾರಣ ರಾಜ್ಯದಲ್ಲಿ ಬಿಜೆಪಿ ಹಿನ್ನಡೆ ಅನುಭ ವಿಸುವಂತಾಯಿತು ಅನೇಕ ಐಪಿಎಸ್ ಅಧಿಕಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡುವುದರಿಂದ ಶಿಕ್ಷಕರ ಅನೇಕ ಬೇಡಿಕೆಗಳು ಇಂದಿಗೂ ನೆನೆಗುದಿಗೆ ಬೀದ್ದಿವೆ. ಏನೇ ಆದರು ನಿಮ್ಮ ಹೋರಾಟದ ಬೇಡಿಕೆಗೆ ತಮ್ಮ ಸಹಕಾರವಿರುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಂಜರಾಜ್, ಬಿಆರ್ಸಿ ತಿಪ್ಪೇಶಪ್ಪ, ಅಕ್ಷರ ದಾಸೋಹ ರುದ್ರಪ್ಪ, ಈಶ್ವರಪ್ಪ, ನೌಕರರ ಸಂಘದ ಅಧ್ಯಕ್ಷ ಆರ್ ಎಸ್ ಪಾಟೀಲ್,ಬಿ ಕುಮಾರ, ಮಂಜಪ್ಪ ಗಂಡುಗಲಿ,ಕೆ ಅರುಣ್, ಬಸವರಾಜ್, ಜಿ ಗೀತಾ, eನೇಶ, ಕೊಟ್ಯಪ್ಪ, ಕುಮಾರ ನಾಯ್ಕ, ನಾಗೇಶ, ಮಹಮ್ಮದ್ ರಫಿ, ಹರಿಹರ ಚಂದ್ರಪ್ಪ ಸೇರಿದಂತೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.