ಯುವಪೀಳಿಗೆಗೆ ತಮ್ಮ ಮುಂದಿನ ಜೀವನ ಮೀಸಲಿಡಿ: ಬಿವೈಆರ್

ಶಿಕಾರಿಪುರ: ತಪಸ್ಸಿನ ರೀತಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ನಿವೃತ್ತ ನೌಕರರು ಮುಂದಿನ ಜೀವನವನ್ನು ಕುಟುಂಬದ ಹಿತಕ್ಕಾಗಿ ಮಾತ್ರ ಮೀಸಲಿರಿಸದೆ ಯುವ ಪೀಳಿಗೆಗೆ ಸೂಕ್ತ ಮಾರ್ಗರ್ಶನ ನೀಡುವ ಮೂಲಕ ನಿವೃತ್ತಿಯ ಬದುಕನ್ನು ಸಮಾಜದ ಏಳ್ಗೆಗೆಗಾಗಿ ಸಾರ್ಥಕಗೊಳಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಪಟ್ಟಣದ ಸಾಂಸ್ಕೃತಿಕ ಭವನ ದಲ್ಲಿ ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘ(ರಿ)ದ ೩೪ನೇ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು, ಅಲ್ಲಮಪ್ರಭು, ಅಕ್ಕಮಹಾದೇವಿ ಮತ್ತಿತರ ಶ್ರೇಷ್ಟ ಶಿವಶರಣರು ಜನಿಸಿದ ತಾಲೂಕಿನಲ್ಲಿ ಅನುಭವ ಮಂಟಪದ ರೀತಿಯಲ್ಲಿ ಜಾತಿ ಮತ ಬೇಧವಿಲ್ಲದೆ ಎಲ್ಲ ನಿವೃತ್ತ ನೌಕರರು ಸಂಘದ ಮೂಲಕ ಇತರರಿಗೆ ಪ್ರೇರ ಣೆಯಾಗುವ ರೀತಿಯಲ್ಲಿ ಸಂಘಟಿತ ರಾಗಿದ್ದು ಶ್ಲಾಘನೀಯ ಎಂದ ಅವರು, ೨೧ನೇ ಶತಮಾನ ಭಾರತೀ ಯರದ್ದಾಗಿದ್ದು ಮರ ಗಿಡದಿಂದ ಇದೀಗ ಅಂತರಿಕ್ಷದ ವರೆಗೆ ಸಾಧನೆ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ. ವಿeನಿಗಳ ಎಲ್ಲ ಸಾಧನೆಯಲ್ಲಿ ಹಿರಿಯರ, ನಿವೃತ್ತರ ಮಾರ್ಗದರ್ಶನ ಬಹು ಮುಖ್ಯ ಕಾರಣ ಎಂದು ತಿಳಿಸಿದರು.


ನಿವೃತ್ತರು ಸೇವಾವಧಿಯಲ್ಲಿ ತಪಸ್ಸಿನ ರೀತಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದು, ಮುಂದಿನ ಜೀವನ ವನ್ನು ಕುಟುಂಬದ ಹಿತಕ್ಕಾಗಿ ಮಾತ್ರ ಮೀಸಲಿರಿಸದೆ ಯುವ ಪೀಳಿಗೆಗೆ ಸೂಕ್ತ ಮಾರ್ಗದರ್ಶನದ ಮೂಲಕ ಸಮಾಜದ ಅಭಿವೃದ್ದಿ ಗಾಗಿ ಸಾರ್ಥಕಗೊಳಿಸುವಂತೆ ತಿಳಿಸಿದರು.
ಸರ್ಜಿ ಗ್ರೂಪ್ ಅಫ್ ಹಾಸ್ಪಿಟಲ್ ಛೇರ್ಮನ್, ಮಕ್ಕಳ ತಜ್ಞ ಡಾ| ಧನಂಜಯ ಸರ್ಜಿ ಅವರು ಮಾತನಾಡಿ, ಬದುಕನ್ನು ಸಕಾರಾತ್ಮವಾಗಿ ಸ್ವೀಕರಿಸಿದಾಗ ಮಾತ್ರ ಲವಲವಿಕೆಯಿಂದಿರಲು ಸಾಧ್ಯ. ಚಿತೆ ಮರಣಾ ನಂತರದ ಸುಡಲಿದ್ದು ಚಿಂತೆ ಬದುಕಿದ್ದಾಗ ಸುಡುತ್ತದೆ. ಭಗವಂತ ಪ್ರತಿಯೊ ಬ್ಬರಿಗೂ ಒಂದು ಬದುಕು, ಆಯಸ್ಸು ನೀಡಿದ್ದು ಅವನ ಕೃಪೆ ಯಿಂದ ದೊರೆತ ಅಂತಸ್ತು, ಆಯಸ್ಸು, ಆರೋಗ್ಯ ಎಲ್ಲವನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಮಧುಮೇಹ ಖಾಯಿಲೆ ಬಗ್ಗೆ ಚಿಂತೆಬಿಟ್ಟು ಅದರಿಂದಾಗಿ ಯೋಗ, ಧ್ಯಾನ, ವಾಯು ವಿಹಾರದ ಸುಂದರ ಬದುಕು ರೂಡಿಸಿಕೊಳ್ಳಲು ಯತ್ನಿಸುವಂತೆ ಸಲಹೆ ನೀಡಿದರು.
ಪ್ರಾಸ್ಥಾವಿಕವಾಗಿ ಸಂಘದ ಲೆಕ್ಕ ಪರಿಶೋಧಕ ಕಮಲಾಕರ ಮಾತ ನಾಡಿ, ೧೯೮೦ರ ಅ.೧೦ ರಂದು ದಿ.ಪರಶುರಾಮ ಘೋರ್ಪಡೆ ಅಧ್ಯಕ್ಷತೆಯಲ್ಲಿ ೨೫ ಸದಸ್ಯರಿಂದ ಆರಂಭವಾದ ನಿವೃತ್ತ ನೌಕರರ ಸಂಘ ಇದೀಗ ೮೯೭ ಸದಸ್ಯರನ್ನು ಹೊಂದಿದೆ. ಸಣ್ಣ ಸ್ವಂತ ಕಟ್ಟಡಕ್ಕೆ ಸಂಸದರು ರೂ.೨ ಲಕ್ಷ ಅನುದಾನ ನೀಡಿ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ. ಪ್ರತಿ ತಿಂಗಳು ಸಭೆ ನಡೆಯಲಿದ್ದು ಜಿಲ್ಲಾ ಸಂಘದ ಸಭೆಯಲ್ಲಿ ಪಾಲ್ಗೊಂಡು ರಾಜ್ಯ ಸಭೆಯ ಸುತ್ತೋಲೆ ಸಂಘದಲ್ಲಿ ಅಂಗೀಕರಿಸಲಾಗುತ್ತಿದೆ. ಹಲವರು ಸಂಘದ ಸದಸ್ಯತ್ವ ಹೊಂದಿಲ್ಲ. ಸದಸ್ಯತ್ವ ಹೆಚ್ಚಿಸುವ ಬಗ್ಗೆ ಪ್ರತಿ ಯೊಬ್ಬರೂ ಗಮನ ನೀಡುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ೭೦ ವರ್ಷ ಮೀರಿದ ಹಿರಿಯ ಸದಸ್ಯ ರನ್ನು ಸನ್ಮಾನಿಸಲಾಯಿತು. ಪ್ರಸಕ್ತ ಸಾಲಿನಲ್ಲಿ ಮರಣ ಹೊಂದಿದವರಿಗೆ ಕ್ಷಣ ಕಾಲ ಮೌನಾಚರಿಸಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ದೇಹದಾನಿ ಸಂಘದ ಗೌರವಾಧ್ಯಕ್ಷ ರಾಮಕೃಷ್ಣಪ್ಪನವರ ಸಹಿತ ಗಣ್ಯರನ್ನು ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜಿ.ಗಿರಿಯಪ್ಪ ವಹಿಸಿ ಮಾತನಾಡಿದರು. ಸಾನಿಧ್ಯವನ್ನು ಸ್ಥಳೀಯ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ವಿಭಾಗೀಯ ಕಾರ್ಯದರ್ಶಿ ಹನುಮಂತಪ್ಪ, ಜಿಲ್ಲಾ ಸಂಘದ ಕಾರ್ಯದರ್ಶಿ ಷಣ್ಮುಖಪ್ಪ, ಲೋಕೇಶಪ್ಪ, ಮಲ್ಲೇಶಪ್ಪ, ಗಿರೀಶ್, ಚನ್ನಗಿರಿ ತಾ.ಅಧ್ಯಕ್ಷ ತೀರ್ಥಪ್ಪ, ಸ್ಥಳೀಯ ಸಂಘದ ಉಪಾಧ್ಯಕ್ಷ ಜೆಟ್ಯಪ್ಪ, ಪ್ರ.ಕಾ ತಿಮ್ಮಪ್ಪ, ನಾಗರಾಜಪ್ಪ, ಹಾಲೇಶಪ್ಪ, ಚಿದಂಬರ ದೀಕ್ಷಿತ್, ಪಾಂಡುರಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.
ವಿಜಯಲಕ್ಷ್ಮಿ ನಾಡಿಗ್, ನಿರ್ಮಲಾ ಪೈ ಪ್ರಾರ್ಥಿಸಿ, ಮಲ್ಲಿಕಾರ್ಜುನ ಪಾಟೀಲ್ ಸ್ವಾಗತಿಸಿ, ಬಸವರಾಜಪ್ಪ ನಿರೂಪಿಸಿ ಹಾಲೇಶಪ್ಪ ವಂದಿಸಿದರು.