ಬಿಜೆಪಿ ಸದ್ಭಾವನ ಯಾತ್ರೆಗೆ ಬಿವೈಆರ್ ಚಾಲನೆ…

ಶಿವಮೊಗ್ಗ: ಹೊಳೆಹೊನ್ನೂರಿ ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರತಿಮೆಯನ್ನು ನಾಶ ಮಾಡಿದವರು ದುಷ್ಟರು. ಸರ್ಕಾರ ಇಂತಹ ಘಟನೆಗಳ ಬಗ್ಗೆ ಎಚ್ಚೆತ್ತು ಕೊಳ್ಳಬೇಕಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಅವರು ಇಂದು ಸದ್ಭಾವನಾ ಯಾತ್ರೆಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಘಟನೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ಶಿವಮೊಗ್ಗದ ಗಾಂಧಿ ಪಾರ್ಕಿನಿಂದ ಹೊಳೆಹೊನ್ನೂರುವರೆಗೆ ಪಾದಯಾತ್ರೆ ಮಾಡಿದೆ. ಗಾಂಧಿ ಯವರ ಆದರ್ಶಗಳು ಅನುಕರಣೀಯ. ೧೯೨೭ರಲ್ಲಿ ಶಿವಮೊಗ್ಗಕ್ಕೆ ಗಾಂಧೀಜಿಯವರು ಬಂದಿದ್ದರು ಎಂಬುದೇ ಒಂದುಹೆಮ್ಮೆ. ಗಾಂಧೀಜಿ ಅವರು ದೊಡ್ಡಪೇಟೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದೊಡ್ಡಪೇಟೆಗೆ ಗಾಂಧಿ ಬಜಾರ್ ಎಂದು ನಾಮಕರಣ ಮಾಡಿದ್ದನ್ನು ಅವರು ಸ್ಮರಿಸಿದರು.
ಶಿಕಾರಿಪುರದ ಈಸೂರಿನ ಹೋರಾಟಕ್ಕೂ ಅವರು ಶಕ್ತಿಯಾಗಿ ದ್ದರು. ಇಂತಹ ವ್ಯಕ್ತಿಯ ಪ್ರತಿಮೆ ಯನ್ನು ಒಡೆದಿರುವುದು ಖಂಡನೀಯ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಚಂದ್ರಯಾನ ಯಶಸ್ವಿಯಾಗಿದೆ. ಭಾರತದ ಪ್ರಧಾನಿ ಮೋದಿಯವರು ತಮ್ಮ ಎಲ್ಲಾ ಕೆಲಸಗಳ ಒತ್ತಡದ ನಡುವೆಯೂ ಬೆಂಗಳೂರಿಗೆ ಬಂದು ವಿಜನಿಗಳಿಗೆ ಪ್ರಶಂಸೆ ಮಾಡಿದ್ದಾರೆ. ಈ ಹಿಂದೆಯೂ ಕೂಡ ಅವರು ಚಂದ್ರಯಾನ ೨ ಫೇಲ್ಯೂರ್ ಆದಾಗ ವಿಜನಿಗಳಲ್ಲಿ ಶಕ್ತಿಯನ್ನು, ಭರವಸೆಯನ್ನು ತುಂಬಿದ್ದರು. ಅದರ ಪ್ರತಿಫಲವೇ ಈಗ ಗೆದ್ದಿದೆ ಎಂದರು.
ಉಪಗ್ರಹ ಹಾರಿದ ಜಗಕ್ಕೆ ಶಿವಶಕ್ತಿ ಎಂಬ ಹೆಸರನ್ನೂ ಪ್ರಧಾನಿಯವರು ಘೋಷಿಸಿದ್ದಾರೆ. ಹಾಗೆಯೇ ಆ ದಿನವನ್ನು ಕೂಡ ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಿದ್ದಾರೆ ಎಂದರು.