ಆ.೨೭ : ಈಡಿಗರ ಸಂಘದಿಂದ ಸಮಾಜದ ನೂತನ ಸಚಿವರಿಗೆ, ಶಾಸಕರಿಗೆ ಅಭಿನಂದನೆ …
ಸಾಗರ: ಸಾಗರ ಪ್ರಾಂತ್ಯ ಆರ್ಯ ಈಡಿಗರ ಸಂಘದಿಂದ ಆ.೨೭ರಂದು ಬೆಳಿಗ್ಗೆ ೧೧ಕ್ಕೆ ವರದಹಳ್ಳಿ ರಸ್ತೆಯ ಈಡಿಗರ ಸಮುದಾಯ ಭವನದಲ್ಲಿ ಸಮಾಜದ ನೂತನ ಸಚಿವರು ಮತ್ತು ಶಾಸಕರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಉಪಾಧ್ಯಕ್ಷ ಟಿ.ವಿ.ಪಾಂಡುರಂಗ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಸಚಿವ ಮಧು ಬಂಗಾರಪ್ಪ, ಶಾಸಕರಾದ ಗೋಪಾಲಕೃಷ್ಣ ಬೇಳೂರು, ಶಿರಸಿ-ಸಿzಪುರ ಶಾಸಕ ಭೀಮಣ್ಣ ಟಿ. ನಾಯ್ಕ್ ಅವರನ್ನು ಅಭಿನಂದಿಸಲಾಗು ವುದು. ಸಂಘದ ಅಧ್ಯಕ್ಷ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಸಿಗಂಧೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ. ರಾಮಪ್ಪನವರು ಸಮಾರಂಭ ಉದ್ಘಾಟಿಸುವರು ಎಂದರು.
ಈಡಿಗರ ಸಂಘವು ೧೯೭೨ರಲ್ಲಿ ಮೊದಲ ಬಾರಿಗೆ ಶಾಸಕರಾದ ಕಾಗೋಡು ತಿಮ್ಮಪ್ಪನವರ ಅವಧಿಯಲ್ಲಿ ಈಡಿಗ ಹಾಸ್ಟೆಲ್ ಆರಂಭ ಗೊಂಡಿತು. ೨೦೧೦ ರಲ್ಲಿ ಸಮಾಜದ ಕಲ್ಯಾಣ ಮಂಟಪ ಆರಂಭ ಗೊಂಡು ೨೦೧೪ರಲ್ಲಿ ಪೂರ್ಣ ಗೊಂಡಿತು. ಇದಕ್ಕೆ ಅಂದಾಜು ೧.೫ ಕೋಟಿ ರೂ. ವೆಚ್ಚ ತಗಲಿದೆ. ಇದರಲ್ಲಿ ಸಮಾಜದವರಿಗೆ ರಿಯಾಯಿತಿ ದರದಲ್ಲಿ ಹಾಗೂ ಇತರೆ ಸಮುದಾಯದವರಿಗೆ ಸಹಜ ದರದಲ್ಲಿ ಕಲ್ಯಾಣ ಮಂಟಪ ನೀಡಲಾಗುವುದು. ೨೦೧೫-೧೬ ರಲ್ಲಿ ಹೊಸ ವಿದ್ಯಾರ್ಥಿ ನಿಲಯ ವನ್ನು ಅಂದಾಜು ೧.೫ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ೫೦ ಮಕ್ಕಳು ವಾಸವಿದ್ದು, ಶಿಕ್ಷಣ ಪಡೆಯುತ್ತಿzರೆ ಎಂದರು.
ಈಡಿಗರ ಸಂಘವು ಸಮಾಜ ಮುಖಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ೧೦೦ ಬಾಟಲ್ ರಕ್ತವನ್ನು ಸಂಗ್ರಹಿಸಿ ರಕ್ತನಿಧಿ ಕೇಂದ್ರಕ್ಕೆ ನೀಡಲಾಗಿದೆ. ಸಮಾಜದ ಕೆಲವು ದಾನಿಗಳಿಂದ ಹಣ ಸಂಗ್ರಹಿಸಿ ದತ್ತಿನಿಧಿ ಸ್ಥಾಪಿಸಲಾಗಿದೆ. ಅದರಿಂದ ಬರುವ ಬಡ್ಡಿ ಹಣಕ್ಕೆ ಮತ್ತಷ್ಟು ಹಣ ಕ್ರೂಡಿಕರಿಸಿ ಪ್ರತಿ ವರ್ಷ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಈ ಬಾರಿ ಸುಮಾರು ೪೦ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ. ಹಾಸ್ಟೆಲ್ ಕಟ್ಟಡವನ್ನು ವಿಸ್ತರಿಸಲಾ ಗುತ್ತಿದ್ದು, ಎರಡು ಅಂತಸ್ತಿನ ಕಟ್ಟಡಕ್ಕೆ ಸರ್ಕಾರದಿಂದ ೧.೫ ಕೋಟಿ ರೂ. ಅನುದಾನಕ್ಕೆ ವಿನಂತಿಸಲಾಗಿದೆ. ಇದು ಪೂರ್ಣಗೊಂಡ ನಂತರ ೧೦೦ ಮಕ್ಕಳಿಗೆ ಇಲ್ಲಿ ಅವಕಾಶ ಕಲ್ಪಿಸಬಹುದು ಎಂದರು.
ಮಹಿಳಾ ವಿದ್ಯಾರ್ಥಿ ನಿಲಯವೂ ಈಡಿಗ ಮಹಿಳಾ ಸಂಘದ ಆಶ್ರಯದಲ್ಲಿ ಸಂಘವು ಹೊಂದಿದ್ದು, ಇಲ್ಲಿ ೫೦ ವಿದ್ಯಾರ್ಥಿನಿ ಯರು ಇದ್ದು, ಶಿಕ್ಷಣ ಪಡೆಯುತ್ತಿ zರೆ. ವಿದ್ಯಾರ್ಥಿನಿಯವರಿಗೆ ಹೊಸ ಕಟ್ಟಡ ನಿರ್ಮಿಸುವ ಯೋಜನೆಯಿದೆ. ಸಂಘವು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಉನ್ನತ ಶಿಕ್ಷಣ ಬಯಸುವವರಿಗೆ ಸಂಘವು ನೆರವು ನೀಡುತ್ತದೆ ಎಂದರು.
ಸಂಘವು ಸಾಗರದಲ್ಲಿ ವಿಶಾಲ ವಾದ ಈಡಿಗರ ಸಮುದಾಯ ಭವನವನ್ನು ಹೊಂದಿದೆ. ಸೊರಬ ದಲ್ಲೂ ಸಮುದಾಯ ಭವನ ನಿರ್ಮಾಣ ಹಂತದಲ್ಲಿದೆ. ಶಿವಮೊಗ್ಗದಲ್ಲಿ ಪೂರ್ಣಗೊಂಡು ಉಪಯೋಗ ಪಡೆಯುತ್ತಿzರೆ. ತೀರ್ಥಹಳ್ಳಿ, ಹೊಸನಗರದಲ್ಲಿ ಸಮುದಾಯ ಭವನ ರ್ಮಾಣ ವಾಗಿದೆ. ತ್ಯಾಗರ್ತಿಯಲ್ಲಿ ಸಮುದಾಯ ಭವನ ನಿರ್ಮಾಣ ಹಂತದಲ್ಲಿದೆ ಎಂದರು.
ಕಾಗೋಡುತಿಮ್ಮಪ್ಪನವರಿಗೆ ದೇವರಾಜು ಅರಸು ಪ್ರಶಸ್ತಿ ಪುರಸ್ಕಾರ ದೊರೆತಿರುವ ಹಿನ್ನಲೆಯಲ್ಲಿ ಪ್ರತ್ಯೇಕ ಅಭಿನಂದನಾ ಸಭೆಯನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಹಿರಿಯ ನಾಯಕರು ಸಮುದಾಯದ ಸರ್ವತೋಮುಖ ಏಳಿಗೆಗೆ ಶ್ರಮಿಸಿರುವ ಕಾಗೋಡರನ್ನು ಎ ಸಮುದಾಯದವರು ಸ್ಮರಿಸುತ್ತಾರೆ. ಅವರಿಗೆ ಬಂದಿರುವ ಪ್ರಶಸ್ತಿಯಿಂದ ಪ್ರಶಸ್ತಿಯ ಮೌಲ್ಯ ಹೆಚ್ಚಾಗಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಪರಮೇಶ್ವರಪ್ಪ, ಖಜಂಚಿ ಮರಸ ಮಂಜಪ್ಪ, ನಿರ್ದೇಶಕರಾದ ಎಂ.ಸಿ. ಪರಶುರಾಮಪ್ಪ, ಕಲಸೆ ಚಂದ್ರಪ್ಪ, ಷಣ್ಮುಖ ಸೂರನಗz,ಶಿವಪ್ಪ ಹಾಜರಿದ್ದರು.