ಆ.೨೬: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಾಸಕ ವಿಜಯೇಂದ್ರ; ಸಂಸದ ಬಿವೈಆರ್ ನೇತೃತ್ವದಲ್ಲಿ ರೈತ ಮೋರ್ಚಾದಿಂದ ಪ್ರತಿಭಟನೆ
ಶಿಕಾರಿಪುರ: ತಾಲೂಕಿನಾ ದ್ಯಂತ ಹಿಂದೆಂದೂ ಕಾಣದಂತಹ ಮಳೆಯ ಕೊರತೆ ಎದುರಾಗಿದ್ದು,ಈ ದಿಸೆಯಲ್ಲಿ ರೈತರ ಬೆಳೆ ನೀರಿಲ್ಲದೆ, ಬೆಲೆಬಾಳುವ ತೋಟ ಒಣಗುತ್ತಿದೆ ಅಳಿದುಳಿದ ಫಸಲು ಉಳಿಸಿ ಕೊಳ್ಳಲು ರೈತ ಸಮುದಾಯ ಇನ್ನಿಲ್ಲದ ರೀತಿಯಲ್ಲಿ ಶ್ರಮಿಸುತ್ತಿದ್ದಾರೆ. ವಿದ್ಯುತ್ ಸಮಸ್ಯೆ ಯಿಂದಾಗಿ ಅನ್ನದಾತನ ಪರಿಸ್ಥಿತಿ ಶೋಚನೀಯವಾದ್ದು ಈ ಕೂಡಲೇ ಸರ್ಕಾರ ಸಮರ್ಪಕ ವಿದ್ಯುತ್ ನೀಡುವ ಜತೆಗೆ ಬರಗಾಲ ಪೀಡಿತ ತಾಲೂಕು ಎಂದು ಘೋಷಿಸುವಂತೆ ತಾಲೂಕು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಪ್ರೇಮಕುಮಾರ್‌ಗೌಡ ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿದರು.
ತಾಲೂಕಿನಾದ್ಯಂತ ಬರಗಾಲದ ಛಾಯೆ ದಿನದಿಂದ ದಿನಕ್ಕೆ ದಟ್ಟವಾಗುತ್ತಿದ್ದು ಕಳೆದ ಜೂನ್‌ನಲ್ಲಿ ೧೪೬ ಮಿ.ಲೀ ವಾಡಿಕೆ ಮಳೆಗೆ ಕೇವಲ ೩೩ ಮಿ.ಲೀ ಮಾತ್ರ ವಾಗಿದ್ದು ಜುಲೈನಲ್ಲಿ ವಾಡಿಕೆಗಿಂತ ೪೨ ಮಿ.ಲೀ ಹೆಚ್ಚಾಗಿ ರೈತ ವರ್ಗ ಬಿತ್ತಿದ ಫಸಲು ಜೌಗಾಗಿತ್ತು ಎಂದು ತಿಳಿಸಿದ ಅವರು, ಆಗಸ್ಟ್‌ನಲ್ಲಿ ೧೪೫ ಮಿ.ಲೀ ಬದಲಿಗೆ ಕೇವಲ ೨೫ ಮಿ.ಲೀ ಮಾತ್ರ ಮಳೆಯಾಗಿ ಶೇ.೮೪ರಷ್ಟು ಮಳೆಯ ಕೊರತೆ ಯಾಗಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಪ್ರತಿ ವರ್ಷ ಅಂದಾಜು ೨೦ ಸಾವಿಕ ಹೆಕ್ಟೇರ್ ಮೆಕ್ಕೆಜೋಳ ಭಿತ್ತನೆಯಾಗಲಿದ್ದು ಇದೀಗ ಕೇವಲ ೧೧ ಸಾವಿರ ಹೆಕ್ಟೇರ್ ಭಿತ್ತನೆಯಾಗಿದೆ ಎಂದ ಅವರು, ಜುಲೈನಲ್ಲಿ ಅತಿ ಹೆಚ್ಚು ಮಳೆಯಿಂದ ಚೇತರಿಸಿಕೊಳ್ಳದ ಜೋಳದ ಫಸಲು ಇದೀಗ ತಾಲೂಕಿನ ಇತಿಹಾಸದಲ್ಲಿ ಆಗಸ್ಟ್ ನಲ್ಲಿ ಮಳೆಯ ತೀವ್ರ ಕೊರತೆ ಯಿಂದಾಗಿ ಜೋಳ ಸುಧಾರಿಸಿ ಕೊಳ್ಳುವ ಲಕ್ಷಣವಿಲ್ಲ ಸಂಪೂರ್ಣ ಪೈರು ನಾಶವಾಗುವ ಆತಂಕದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಪ್ರತಿ ವರ್ಷ ಆಗಸ್ಟ್‌ನಲ್ಲಿ ತಾಲೂಕಿನಾದ್ಯಂತ ೧೩.೫ ಸಾವಿರ ಹೆಕ್ಟೇರ್ ಭತ್ತ ಭಿತ್ತನೆಯಾಗುತ್ತಿದ್ದು ಇದೀಗ ಅಂಜನಾಪುರ ಹಾಗೂ ಅಂಬ್ಲಿಗೊಳ್ಳ ಜಲಾಶಯದ ಕೆಳಭಾಗ ದಲ್ಲಿ ಮಾತ್ರ ಕೇವಲ ೬ ಸಾವಿರ ಹೆಕ್ಟೇರ್ ಭಿತ್ತನೆಯಾಗಿದೆ ಎಂದರು.
ನಿತ್ಯ ೬-೭ ಗಂಟೆ ವಿದ್ಯುತ್ ನೀಡುವ ಕರಾರು ತಪ್ಪಿ ಕೇವಲ ೩ ಗಂಟೆಗೆ ಸೀಮಿತಗೊಳಿಸಲಾಗಿದೆ ೧೮.೪೮೦ ಹೆಕ್ಟೇರ್ ಅಡಿಕೆ ತೋಟ, ೬೨೫ ಹೆಕ್ಟೇರ್ ತೆಂಗಿನ ತೋಟ ಅಸಮರ್ಪಕ ವಿದ್ಯುತ್‌ನಿಂದ ನಾಶವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತರ ಬೆಳೆಹಾನಿಗೆ ಪ್ರತಿ ಎಕರೆಗೆ ಸರ್ಕಾರ ಕೂಡಲೇ ರೂ.೨೦ ಸಾವಿರ ಪರಿಹಾರ ಘೋಷಿಸಬೇಕು, ನಿತ್ಯ ೭ ಗಂಟೆ ವಿದ್ಯುತ್ ಪೂರೈಸಲು ಮೆಸ್ಕಾಂಗೆ ನಿರ್ದೇಶನ ನೀಡಬೇಕು. ಕೂಡಲೇ ತಾಲೂಕು ಬರಗಾಲ ಪೀಡಿತ ಎಂದು ಘೋಷಿಸುವಂತೆ ಅವರು ಆಗ್ರಹಿಸಿದರು.
ರೈತ ಮೋರ್ಚಾ ಜಿಲ್ಲಾ ಸದಸ್ಯ ಈಸೂರು ಜಗದೀಶ ಮಾತನಾಡಿ, ಅಸಮರ್ಪಕ ವಿದ್ಯುತ್‌ಗೆ ಟಿ.ಸಿ ವಿಪರೀತ ಹಾಳಾಗಿದ್ದು ೫೦೦ ಟಿ.ಸಿ ಬೇಡಿಕೆಗೆ ಕೇವಲ ೫೦ ಮಾತ್ರ ಪೂರೈಕೆಯಾಗುತ್ತಿದೆ. ಪ್ರತಿ ಗುತ್ತಿಗೆದಾರರಿಗೆ ತಲಾ ೧ ನೀಡಲಾಗುತ್ತಿದೆ. ಕೂಡಲೇ ಇಂಧನ ಸಚಿವರು ಗಮನಹರಿಸಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು.
ಜಿಲ್ಲಾ ರೈತ ಮೋರ್ಚಾ ಖಜಾಂಚಿ ಗಿರೀಶ್ ಧಾರವಾಡದ ಮಾತನಾಡಿ, ತಾಲೂಕಿನಾದ್ಯಂತ ೨೦ ಸಾವಿರ ಹೆಕ್ಟೇರ್ ಮೆಕ್ಕೆಜೋಳ ಭಿತ್ತನೆಯಾಗಿದ್ದು ಕೇವಲ ೧೧ ಸಾವಿರ ಹೆಕ್ಟೇರ್ ಮಾತ್ರ ವಿಮೆ ವ್ಯಾಪ್ತಿಗೊಳಪಟ್ಟಿದೆ. ಕೂಡಲೇ ಪರಿಹಾರ ಬಿಡುಗಡೆಗೊಳಿಸುವಂತೆ ತಿಳಿಸಿದ ತಾಲೂಕು ಬರಗಾಲ ಪೀಡಿತ ಎಂದು ಘೋಷಿಸಿ ಸಮರ್ಪಕ ವಿದ್ಯುತ್‌ಗೆ ಆಗ್ರಹಿಸಿ ಆ.೨೬ರ ನಾಳೆ (ಶನಿವಾರ) ಕ್ಷೇತ್ರದ ಶಾಸಕ ಬಿ.ವೈ. ವಿಜಯೇಂದ್ರ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆಯನ್ನು ಹಮ್ಮಿ ಕೊಳ್ಳಲಾಗಿದೆ ಎಂದು ತಿಳಿಸಿದರು.
ಯುವ ಮೋರ್ಚಾ ಅಧ್ಯಕ್ಷ ಪ್ರವೀಣ ಬೆಣ್ಣೆ ಉಪಸ್ಥಿತರಿದ್ದರು.