ಆ.೨೫ರಿಂದ ಸೆ.೮ರವರೆಗೆ ಶಂಕರ ಕಣ್ಣಾಸ್ಪತ್ರೆಯಿಂದ ಜಗೃತಿ ಪಾಕ್ಷಿಕ ಮಾಸಾಚರಣೆ..
ಶಿವಮೊಗ್ಗ: ನಗರದ ಜನತೆಗೆ ನೇತ್ರ ದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿಷ್ಠಿತ ಶಂಕರ ಕಣ್ಣಿನ ಆಸ್ಪತ್ರೆಯು ನೇತ್ರದಾನ ಜಗೃತಿ ಪಾಕ್ಷಿಕ ಮಾಸದ ನಿಮಿತ್ತ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಮಹೇಶ್ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಆ.೨೫ರಿಂದ ಸೆ.೮ರವರೆಗೆ ನಿರಂತರವಾಗಿ ನೇತ್ರದಾನ ಜಾಗೃತಿ ಪಾಕ್ಷಿಕ ಮಾಸಾಚರಣೆ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ನಗರದ ಶಂಕರ ಕಣ್ಣಿನ ಆಸ್ಪತ್ರೆ ವತಿಯಿಂದ ಆ.೨೫ರಂದು ಕಪ್ಪು ರಿಬ್ಬನ್ ಧರಿಸಿ ಮಹಾವೀರ ಸರ್ಕಲ್‌ನಿಂದ ಟಿ. ಸೀನಪ್ಪಶೆಟ್ಟಿ ಸರ್ಕಲ್ (ಗೋಪಿ ಸರ್ಕಲ್)ವರೆಗೆ ಜಗೃತಿ ಜಥಾ ಆಯೋಜಿಸಲಾಗಿದೆ.
ಹಾಗೆಯೇ ಆ.೨೭ರಂದು ಬಸ್ ನಿಲ್ದಾಣದ ಬಳಿ ಬೂತ್ ಅನ್ನು ಸ್ಥಾಪಿಸಿ ಕಣ್ಣು ದಾನ ಮಾಡುವವರು ತಮ್ಮ ಒಪ್ಪಿಗೆ ಪತ್ರವನ್ನು ಬೂತ್‌ನಲ್ಲಿರುವ ಪೆಟ್ಟಿಗೆಗೆ ಹಾಕಬಹುದಾಗಿದೆ.
ಸೆ. ೩ ರಂದು ಬೆಳಿಗ್ಗೆ ೮ಕ್ಕೆ ಜಗೃತಿ ಸೈಕಲ್ ಜಥಾ ಆಯೋಜಿಸಲಾಗಿದೆ ಮತ್ತು ಆಯ್ದ ಶಾಲಾ ಮಕ್ಕಳಿಗೆ ಕಣ್ಣಿನ ಚಿತ್ರ ಬರೆದು ಧ್ಯೇಯ ವಾಕ್ಯ ಸೂಚಿಸಲು ಸ್ಪರ್ಧೆ ಇರುತ್ತದೆ. ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಗುವುದು ಎಂದರು.
ಆಸ್ಪತ್ರೆಯ ವೈದ್ಯ ಡಾ. ಮಲ್ಲಿಕಾರ್ಜುನ್ ಅವರು ಮಾತನಾಡಿ, ಜಗತ್ತಿನಲ್ಲಿಯೇ ಕರಿ ಗುಡ್ಡೆಯಿಂದ ದೃಷ್ಟಿ ಹೀನತೆಗೆ ಒಳಗಾಗಿರುವವರು ಶೇ.೫ ರಷ್ಟಿದ್ದಾರೆ. ಭಾರತದಲ್ಲಿ ಸುಮಾರು ೧.೨ ಲಕ್ಷಕ್ಕೂ ಹೆಚ್ಚು ಜನರು ಈ ದೃಷ್ಟಿದೋಷ ಹೊಂದಿದ್ದಾರೆ . ಇದನ್ನು ಸರಿಪಡಿಸಲು ಕಣ್ಣಿನ ದಾನ ಮಾಡಬೇಕು ಎಂದರು.
ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಇದುವರೆಗೆ ೧೮,೬೦೦ ಕಣ್ಣಿನ ದಾನದ ಬಗ್ಗೆ ಒಪ್ಪಿಗೆ ಪತ್ರಕ್ಕೆ ಸಹಿಹಾಕಿದ್ದು, ಇದುವರೆಗೂ ೨,೫೦೦ ಮಂದಿ ನೇತ್ರದಾನ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಅಂಧರಿಗೆ ಕಣ್ಣನ್ನು ಅಳವಡಿಸುವ ಮೂಲಕ ಅವರ ಬಾಳಿಗೆ ಬೆಳಕು ನೀಡಲಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಡಾ. ಗಾಯತ್ರಿ ಶಾಂತಾರಾಮ್ ಉಪಸ್ಥಿತರಿದ್ದರು.
ಪತ್ರಿಕಾ ಗೋಷ್ಠಿಯ ನಂತರ ಪತ್ರಕರ್ತರಿಗೆ ಉಚಿತವಾಗಿ ನೇತ್ರ ಪರೀಕ್ಷೆ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಗೋಪಾಲ್ ಯಡಗೆರೆ, ನಾಗರಾಜ ನೇರಿಗೆ, ರಾಕೇಶ್ ಡಿಸೋಜ, ಶಿವಮೊಗ್ಗ ನಂದನ್, ಗಜೇಂದ್ರ ಸ್ವಾಮಿ, ಸ್ಪಂದನ ಚಂದ್ರು, ಮೋಹನ್, ಜೋಸೆಫ್ ಟೆಲ್ಲಿಸ್, ಹುಲಿಮನೆ ತಿಮ್ಮಪ್ಪ, ಶಿಜು ಪಾಷ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.