ಸಮೂಹ ಸಂವಹನದಿಂದ ನಾವೀನ್ಯ ಯೋಜನೆಗಳು ಸಾಧ್ಯ :ಪೇಟೆಂಟ್ ವೈಲಿಂಗ್ ಕಾರ್‍ಯಾಗಾರದಲ್ಲಿ ಡಾ. ಶ್ರೀಕಂಠೇಶ್ವರ
ಶಿವಮೊಗ್ಗ : ವಿದ್ಯಾರ್ಥಿಗಳು ಸಮೂಹ ಸಂವಹನದೊಂದಿಗೆ ಬೆರೆತು ನಾವೀನ್ಯ ಯೋಜನೆಗಳನ್ನು ರೂಪಿಸು ವಂತಾಗಬೇಕು ಎಂದು ಕರ್ನಾಟಕ ರಾಜ್ಯ ವಿಜನ ಮತ್ತು ತಂತ್ರಜನ ಮಂಡಳಿ ಮಾಜಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಶ್ರೀಕಂಠೇಶ್ವರ ಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಜೆಎನ್‌ಎನ್‌ಸಿ ಎಂಜಿನಿ ಯರಿಂಗ್ ಕಾಲೇಜಿನ ನಾವೀನ್ಯತೆ ಮತ್ತು ಉದ್ಯಮಶೀಲತೆ ಕೇಂದ್ರ, ಕರ್ನಾಟಕ ರಾಜ್ಯ ವಿಜನ ಮತ್ತು ತಂತ್ರಜನ ಮಂಡಳಿ ವತಿಯಿಂದ ಉಪನ್ಯಾಸಕರಿಗಾಗಿ ಇಂದು ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ `ಪೇಟೆಂಟ್ ಫೈಲಿಂಗ್ ಮತ್ತು ಸಂಶೋಧನಾ ಪ್ರಸ್ತಾವನೆಗಳ ಬರವಣಿಗೆ ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದರು.
ಯುವ ಸಮೂಹ ತಮ್ಮ ಸುತ್ತಲಿನ ವಾತಾವರಣದಲ್ಲಿರುವ ಸಮಸ್ಯೆಗಳನ್ನೇ ನಾವೀನ್ಯತೆಯ ಮೂಲಕ ಪರಿಹರಿಸುವ ಯೋಚನೆ ಗಳನ್ನು ಮಾಡಬೇಕಿದೆ. ಅಂತಹ ಪ್ರೇರಣಾ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಉತ್ತೇಜಿಸುವ ಕಾರ್ಯ ಉಪನ್ಯಾಸಕರಿಂದ ಆಗಬೇಕಿದೆ.
ವಿದ್ಯಾರ್ಥಿಗಳ ನಾವೀನ್ಯ ಯೋಜನೆಗಳನ್ನು ಗೌರವಿಸುವ ಮೂಲಕ ಸಕಾರಾತ್ಮಕವಾಗಿ ಸ್ಪಂದಿಸಿ. ಕೇವಲ ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ನಿಮ್ಮನ್ನು ಮತ್ತು ವಿದ್ಯಾರ್ಥಿಗಳನ್ನು ಸೀಮಿತಗೊಳಿಸ ಬೇಡಿ ಎಂದು ಉಪ ನ್ಯಾಸಕರಿಗೆ ಕಿವಿ ಮಾತು ಹೇಳಿದರು.
ಎಂಎಸ್‌ಎಂಇ ಮೂಲಕ ಸರ್ಕಾರ ಸಣ್ಣ ಮತ್ತು ಮಧ್ಯಮ ಉದ್ಯಮಶೀಲತೆ ಹೆಚ್ಚು ಬೆಂಬಲವನ್ನು ನೀಡುತ್ತಿದೆ. ವಿ.ಜಿ. ಎಸ್.ಟಿ, ಕೆ.ಎಸ್.ಸಿ.ಎಸ್.ಟಿ ಮೂಲಕ ನಾವೀನ್ಯ ಯೋಚನೆ ಗಳನ್ನು ಯೋಜನೆಗಳನ್ನಾಗಿ ಪರಿವರ್ತಿಸಲು ಉತ್ತೇಜನೆ ನೀಡುತ್ತಿದೆ ಎಂದರು.
ಕೆಎಸ್‌ಸಿಎಸ್‌ಟಿ ಪೇಟೆಂಟ್ ಮಾಹಿತಿ ಕೇಂದ್ರದ ಎಂ.ಜಿ. ನಾಗಾರ್ಜುನ ಮಾತನಾಡಿ, ಕಲೆ ವಾಣಿಜ್ಯ ವಿಜನ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಪೇಟೆಂಟ್ ಫೈಲಿಂಗ್ ಮಾಡಬಹುದಾಗಿದೆ. ಕೋಟ್ಯಾಂತರ ರೂಪಾಯಿ ಆರ್ಥಿಕ ವ್ಯವಹಾರ ಕೇವಲ ನಾವೀನ್ಯ ಯೋಚನೆಯ ಪೇಟೆಂಟ್ ಫೈಲಿಂಗ್ ಮಾಡುವುದರ ಮೂಲಕ ನಡೆಸು ತ್ತಿರುವವರು ಅನೇಕರಿದ್ದಾರೆ. ನಾವೀನ್ಯ ಯೋಚನೆಗೆ ಅಂತಹ ಶಕ್ತಿಯಿದೆ. ದೇಶದ ಅಭಿವೃದ್ಧಿಯ ಪ್ರತಿಯೊಂದು ಹಂತದಲ್ಲಿ ನಾವೀನ್ಯ ಯೋಚನೆಗಳು ಸ್ಥಾನ ಪಡೆದಿದೆ ಎಂದು ಹೇಳಿದರು.
ಎನ್‌ಇಎಸ್ ಶೈಕ್ಷಣಿಕ ಆಡಳಿತಾ ಧಿಕಾರಿ ಎ.ಎನ್.ರಾಮಚಂದ್ರ ಮಾತ ನಾಡಿದರು. ಪ್ರಾಂಶುಪಾಲ ಡಾ. ಪಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಕೆ.ಎಲ್.ಅರುಣ್ ಕುಮಾರ್, ನೃಪತುಂಗ ಹಾಗೂ ಇನ್ನಿತರರಿದ್ದರು.