ಸಂಭ್ರಮ ಶನಿವಾರ: ಅರಿವು.. ಅನುಭವ… ಅವಲೋಕನ….

ಇಂದಿನ ಮಕ್ಕಳು ಶಾಲೆಗೆ ಹೋಗುವುದನ್ನು ಗಮನಿಸಿದರೆ ನಮಗೆ ಗಾಬರಿಯಾಗುತ್ತದೆ. ಕಾರಣ ಇಷ್ಟೆ ಕೇಲವು ಮಕ್ಕಳು ಬ್ಯಾಗ್ ತೆಗೆದುಕೊಂಡು ಹೋಗುತ್ತಿರುವ ದೃಶ್ಯ, ಮೂಟೆ ಹೊತ್ತುಕೊಂಡು ಹೋಗುತ್ತಿರುವಂತೆ ಭಾಸವಾಗುತ್ತದೆ.
ಮಕ್ಕಳಿಗೆ ಶಾಲೆಯಲ್ಲಿನ ಕಲಿಕೆ ಸಂತೋಷದಾಯಕ ಮತ್ತು ಆನಂದದಾಯಕವಾಗಿರಬೇಕು ಎಂದು ಬಯಸುವುದು ವಾಡಿಕೆ. ಇಂತಹ ಬ್ಯಾಗಿನ ಹೊರೆನ್ನು ಕಡಿಮೆ ಮಾಡಿ ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆ, ಕೌಶಲಗಳು ಹಾಗೂ ಮೌಲ್ಯಗಳು ಅನಾವರಣಗೊಳ್ಳಬೇಕು. ಇವುಗಳನ್ನು ಶಾಲಾ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಮೈಗೂಡಿಸಿಕೊಳ್ಳಲು ಅವಕಾಶ ನೀಡಿದಲ್ಲಿ ಉತ್ತಮ ನಾಗರಿಕರಾಗಲು ಸಹಾಯವಾಗುತ್ತದೆ.
ಶಾಲಾ ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣವು, ಶಿಕ್ಷಣದ ಗುರಿ ಮತ್ತು ಉದ್ದೇಶಗಳೊಂದಿಗೆ ಸಮ್ಮಿಳಿತಗೊಂಡಿದೆ. ೧೯೬೮ರ ರಾಷ್ಟ್ರೀಯ ಶಿಕ್ಷಣ ನೀತಿಯು ಪೌರ ಪ್ರeಯನ್ನು, ಸಂಸ್ಕೃತಿ ಮತ್ತು ರಾಷ್ಟ್ರೀಯ ಭಾವೈಕ್ಯತೆಯನ್ನು ಬಲಪಡಿಸುವ ಗುರಿ ಯನ್ನು ಹೊಂದಿತ್ತು. ೧೯೮೬ರ ರಾಷ್ಟ್ರೀಯ ಶಿಕ್ಷಣ ನೀತಿಯು ಕೂಡ ಪ್ರಗತಿಪರ ರಾಷ್ಟ್ರದ ಜತ್ಯತೀತ ಪ್ರಜಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯಲು ಮೌಲ್ಯಶಿಕ್ಷಣದ ಅಗತ್ಯವನ್ನು ಸಾರಿ ಹೇಳುತ್ತದೆ.
೨೦೦೫ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿಯೂ ಸಹ ಮೌಲ್ಯಗಳು ಹಾಗೂ ನೈತಿಕ ವಿಚಾರಗಳನ್ನು ಶಾಲಾ ಶಿಕ್ಷಣದಲ್ಲಿ ಅತ್ಯಾವಶ್ಯಕ ಅಂಶಗಳೆಂದು ಪರಿಗಣಿಸಲಾಗಿದೆ. ಮಗುವಿನ ವ್ಯಕ್ತಿತ್ವ ನಿರ್ಮಾಣದಲ್ಲಿ ಮತ್ತು ಸಂತಸದಾಯಕ ಜೀವನ ನಡೆಸಲು ನೈತಿಕಪ್ರe ಮತ್ತು ಮೌಲ್ಯಗಳು ಅವಶ್ಯಕ ಹಾಗೂ ಸಮಾಜಕ್ಕೆ ಧನಾತ್ಮಕ ಕೊಡುಗೆಗಳನ್ನು ನೀಡಲು ಸಹಾಯಕಾರಿ ಎಂಬುದನ್ನು ೨೦೨೦ರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿಯೂ ಉಖಿಸಲಾಗಿದೆ.
ಸಂಭ್ರಮ ಶನಿವಾರ:
ಈ ಪರಿಕಲ್ಪನೆ- ಮಕ್ಕಳಿಗೆ ಶಾಲೆಯ ಹೊರಗಿನ ಚಟುವಟಿಕೆಗಳ ಅನುಭವ ಒದಗಿಸಲು ವರ್ಷದಲ್ಲಿ ೧೦ ದಿನಗಳು ಬ್ಯಾಗ್ ರಹಿತ ದಿನವನ್ನು ಆಚರಿಸಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ಶಿಫಾರಸ್ಸು ಮಾಡಿದೆ. ಇದರನ್ವಯ ಮಕ್ಕಳಿಂದಲೇ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರವೇ ರೂಪಿಸಿರುವ ಕಾಂiiಕ್ರಮವೇ ಈ ಸಂಭ್ರಮ ಶನಿವಾರ -ಬ್ಯಾಗ್ ರಹಿತ ದಿನ. ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ೧ ರಿಂದ ೮ನೇ ತರಗತಿ ಮಕ್ಕಳಿಗೆ ತಿಂಗಳಿಗೆ ಒಂದು ಶನಿವಾರದಂದು ಆಚರಿಸಲು ನಿರ್ಧರಿಸಲಾಗಿದೆ.
ಈ ಕಾರ್ಯಕ್ರಮವು ಮಗುವಿನಲ್ಲಿ ಸ್ವತಂತ್ರವಾಗಿ ಯೋಚಿಸುವ, ಸೂಕ್ಷ್ಮಗ್ರಾಹಿ, ಸಂತಸ ಮನಸ್ಸಿನ ವ್ಯಕ್ತಿತ್ವವನ್ನು ರೂಪಿಸಲು ಅವಶ್ಯಕವಾದ ಧನಾತ್ಮಕ ಮೌಲ್ಯಗಳನ್ನು ಬೆಳೆಸಲು ಸಹಾಯವಾಗುತ್ತದೆ. ಈ ಕಾರ್ಯಕ್ರಮದ ದಿನ ಯಾವುದೇ ಪುಸ್ತಕ, ನೋಟ್‌ಪುಸ್ತಕ, ಬ್ಯಾಗ್ ಇಲ್ಲದೆ ಮಕ್ಕಳು ಶಾಲೆಗೆ ಬರುತ್ತಾರೆ. ನಾಗರಿಕ ಪ್ರe ಬೆಳೆಸುವ, ಸಾಮಾಜಿಕ- ಭಾವನಾತ್ಮಕ ಕೌಶಲಗಳು ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವ ಸಂತಸದಾಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಶಾಲೆಯಲ್ಲಿ ಮಕ್ಕಳು ತಮ್ಮ ಹೆಚ್ಚಿನ ಸಮಯವನ್ನು ಗ್ರಂಥಾಲಯ, ಪ್ರಯೋಗಾಲಯ, ಕ್ರೀಡಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.
ಸಂಭ್ರಮ ಶನಿವಾರ ಪರಿಕಲ್ಪನೆಗೆ ಪೂರಕವಾದ ಉದ್ದೇಶಗಳು:
೧. ಮಕ್ಕಳಲ್ಲಿ ಧನಾತ್ಮಕ ಬದಲಾವಣೆ ತರುವ ಮೂಲಕ ನಾಗರಿಕ/ಪೌರಪ್ರeಯನ್ನು ಬೆಳೆಸುವುದು.
೨. ಚಟುವಟಿಕೆ ಆಧಾರಿತ ಅನ್ವಯಿಕ ಕಲಿಕೆ ಉಂಟುಮಾಡುವುದರ ಮೂಲಕ ಮಕ್ಕಳ ಭಾಗವಹಿಸುವಿಕೆ ಉತ್ತೇಜಿಸುವುದು.
೩. ಮಕ್ಕಳಿಗೆ ಶೈಕ್ಷಣಿಕ ಮತ್ತು ಭೌತಿಕ ಹೊರೆಯನ್ನು ಕಡಿಮೆ ಮಾಡುವುದು.
೪. ಮೌಲ್ಯಾಧಾರಿತ ಶಿಕ್ಷಣದ ಮೂಲಕ ಮಕ್ಕಳಲ್ಲಿ ಸಮಗ್ರ ವ್ಯಕ್ತಿತ್ವವನ್ನು ಬೆಳೆಸುವುದು.
ಸಂಭ್ರಮ ಶನಿವಾರ ನಡೆಸುವ ವಿಧಾನ:

  • ಆಯಾ ಶಾಲಾ ಪರಿಸರದ ಸ್ಥಿತಿ ಗತಿಗಳನ್ನು ಆಧರಿಸಿ, ಪುನಃಶ್ಚೇತನ ಕಾರ್ಯಕ್ರಮವನ್ನು ಆಯೋಜಿಸು ವುದು. ಚಟುವಟಿಕೆಗಳನ್ನು ಶಾಲಾ ಹೊರಾಂಗಣದಲ್ಲಿ ನಡೆಯುವಂತೆ ಆಯೋಜಿಸಿದರೆ ಉತ್ತಮ. ಕಾರ್ಯಕ್ರಮದ ಉದ್ದೇಶಗಳನ್ನು ಮಕ್ಕಳಿಗೆ ವಿವರಿಸಬೇಕು ಹಾಗೂ ತಮ್ಮಲ್ಲಿನ ಸೃಜನಶಿಲತೆಯನ್ನು ಅಭಿವ್ಯಕ್ತಿಗೊಳಿಸಲು ಈ ಕಾರ್ಯಕ್ರಮವು ಉತ್ತಮ ಸಾಧನವಾಗಿದೆ ಎಂಬುದನ್ನು ಮನದಟ್ಟು ಮಾಡಬೇಕು.
  • ಮಕ್ಕಳು ಗುಂಪಿನಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಮಾರ್ಗದರ್ಶನ ನೀಡಲು ವಿದ್ಯಾರ್ಥಿ ನಿರೂಪಕ/ನಾಯಕನನ್ನು ಪ್ರತಿ ಗುಂಪಿಗೂ ನೇಮಕ ಮಾಡಬೇಕು. ಪದೇ ಪದೇ ಒಂದೇ ವಿದ್ಯಾರ್ಥಿಗೆ ನಾಯಕತ್ವದ ಜವಾಬ್ದಾರಿ ನೀಡಬಾರದು. ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನೇ ಯಾವಾಗಲೂ ನಾಯಕತ್ವಕ್ಕೆ ಆಯ್ಕೆ ಮಾಡದೇ, ಲಿಂಗ ತಾರತಮ್ಯ ಮಾಡದೇ ಕಲಿಕೆಯಲ್ಲಿ ಹಿಂದುಳಿದ ಮಕ್ಕಳು, ವಿಕಲಚೇತನ ಮಕ್ಕಳು ಹೀಗೆ ಎಲ್ಲರಿಗೂ ಸಮಾನ ಅವಕಾಶ ದೊರೆಯುವಂತೆ ಮಾಡುವುದು.
  • ನಿರೂಪಕ ವಿದ್ಯಾರ್ಥಿಗಳು ಸಂಬಂಧಿಸಿದ ಕಾರ್ಯಕ್ರಮ ಚಟುವಟಿಕೆಯನ್ನು ಒಂದು ವಾರದ ಮೊದಲೇ ಓದಿಕೊಂಡು, ಪ್ರತಿ ಚಟುವಟಿಕೆಗೆ ಅಗತ್ಯ ಇರುವ ವಸ್ತು, ಸಾಮಗ್ರಿ ಸಂಪನ್ಮೂಲಗಳನ್ನು ಸಂಗ್ರಹಿಸಿ, ಕಾರ್ಯಕ್ರಮದ ಸಂಪೂರ್ಣ ವಿಧಿ ವಿಧಾನಗಳ ಕುರಿತು ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಶಿಕ್ಷಕರ ಮಾರ್ಗದರ್ಶನ ಪಡೆಯಬೇಕು.
    ಶಿಕ್ಷಕರ ಪಾತ್ರ:
  • ಶಿಕ್ಷಕರು ದಿನದ ಎ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಬೇಕು.
  • ವಿದ್ಯಾರ್ಥಿಗಳು ನಿರೀಕ್ಷಿಸದ ಹೊರತು ಶಿಕ್ಷಕರು ಮಧ್ಯ ಪ್ರವೇಶ ಮಾಡಬಾರದು.
  • ವಿದ್ಯಾರ್ಥಿಗಳು ಶಿಕ್ಷಕರೊಡನೆ ಚರ್ಚಿಸಲು ಬಂದಾಗ ಶಿಕ್ಷಕರು ತಾಳ್ಮೆಯಿಂದ ಮಾರ್ಗದರ್ಶನ ಮಾಡಬೇಕು.
  • ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗದಂತೆ ಶಿಕ್ಷಕರು ಎಚ್ಚರಿಕೆ ವಹಿಸಬೇಕು.
  • ಶಾಲೆಯಲ್ಲಿ ನಡೆದ ಸಂಭ್ರಮ ಶನಿವಾರ ಕಾರ್ಯಕ್ರಮದ ವರದಿಯನ್ನು ದಾಖಲಿಸುವುದು.
    ಸಂಭ್ರಮ ಶನಿವಾರದ ಪ್ರಮುಖ ವಿಷಯಗಳು :
    ೧. ಸಾರ್ವಜನಿಕ ಸೌಕರ್ಯಗಳು ಮತ್ತು ನನ್ನ ಜವಾಬ್ದಾರಿ.
    ೨. ಲಿಂಗತ್ವ ಸಮಾನತೆಗೆ ಪ್ರೋತ್ಸಾಹ.
    ೩. ಪೌಷ್ಠಿಕತೆ, ಸ್ವಾಸ್ಥ್ಯ ಮತ್ತು ಶುಚಿತ್ವ.
    ೪. ಮಾದಕ ವಸ್ತುಗಳ ದುರ್ಬಳಕೆ ತಡೆಗಟ್ಟುವಿಕೆ ಮತ್ತು ನಿರ್ವಹಣೆ.
    ೫. ಆರೋಗ್ಯ ಜೀವನ ಶೈಲಿ.
    ೬. ಹಿಂಸೆ, ಅಪರಾಧ, ಅಪಘಾತಗಳ ಸಂದರ್ಭಗಳಲ್ಲಿ ರಕ್ಷಣೆ ಹಾಗೂ ಭದ್ರತೆ.
    ೭. ಆಧುನಿಕ ತಂತ್ರeನ ಸಾಧನಗಳು ಮತ್ತು ಅಂತಜಲದ ಸದ್ಬಳಕೆ.
    ೮. ಸಾರ್ವಜನಿಕ ನೈರ್ಮಲ್ಯ -ಘನತ್ಯಾಜ್ಯದ ನಿರ್ವಹಣೆಯ ಅಗತ್ಯತೆ ಮತ್ತು ವಿಧಾನಗಳು.
    ೯. ರಸ್ತೆ ಸುರಕ್ಷತೆ.
    ೧೦. ವಿಶೇಷ ಚೇತನ ಉಳ್ಳ ವ್ಯಕ್ತಿಗಳೊಂದಿಗೆ ಸಂವಹನ.
    ಹೀಗೆ ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಬ್ಯಾಗ್ ವಿಪರೀತ ಹೊರೆಯಾದಂತಹ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ ಸ್ವಲ್ಪ ಮಟ್ಟಿನ ಬ್ಯಾಗ್ ಹೊರೆಯನ್ನು ಕಡಿಮೆ ಮಾಡುವುದರ ಜೊತೆಗೆ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣವಾಗುತ್ತದೆ.
    ನಾಯಕತ್ವ, ಕ್ರೀಯಾಶಿಲತೆ, ಅಭಿವ್ಯಕ್ತಿ ಸ್ವಾತಂತ್ರ, ಅರಿವು, ಅನುಭವ, ಅನೂಭೂತಿಯಂತಹ ಗುಣಗಳು ಅಭಿವೃದ್ಧಿಯಾಗುತ್ತವೆ. ಆದ್ದರಿಂದ ಶಿಕ್ಷಕರು ಮತ್ತು ಪಾಲಕ ಸಮುದಾಯ ಇದರೊಂದಿಗೆ ಕೈಜೋಡಿಸಿz ಆದಲ್ಲಿ ಕಾರ್ಯಕ್ರಮದ ಯಶಸ್ಸು ನಿಶ್ಚಿತ. ಈ ದಿಶೆಯಲ್ಲಿ ನಾವು ನೀವೆಲ್ಲರೂ ಕಾರ್ಯ ಪ್ರವೃತ್ತರಾಗೋಣ.
    ಎನ್.ಎನ್.ಕಬ್ಬೂರ
    ಎಂ.ಎ., ಬಿ.ಎಡ್.,
    ಶಿಕ್ಷಕರು ಮತ್ತು ಬರಹಗಾರರು, ಸವದತ್ತಿ ತಾಲೂಕು.