2ಬಿ ಒಬಿಸಿ ಮೀಸಲಾತಿ ಕೋಟಾ ರದ್ದು ವಿರೋಧಿಸಿ ಪೀಸ್ ಆರ್ಗನೈಸೇಷನ್ ಪ್ರತಿಭಟನೆ …

ಶಿವಮೊಗ್ಗ: ರಾಜ್ಯ ಸರ್ಕಾರ ೨ಬಿ ಒಬಿಸಿ ಮೀಸಲಾತಿ ಕೋಟಾ ರದ್ದು ಮಾಡಿರುವುದನ್ನು ವಿರೋಧಿಸಿ ಮತ್ತು ಅದನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಇಂದು ಪೀಸ್ ಆರ್ಗನೈಸೇಷನ್ ವತಿಯಿಂದ ಜಿಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾ ಯಿತು.
ರಾಜ್ಯ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಇದ್ದ ೨ಬಿ ಮೀಸಲಾತಿಯನ್ನು ರದ್ದುಗೊಳಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಮುಸ್ಲಿಮರಿಗೆ ಇದ್ದ ಶೇ. ೪ ರ ಮೀಸಲಾತಿಯನ್ನು ಲಿಂಗಾಯಿ ತರು ಮತ್ತು ಒಕ್ಕಲಿಗರಿಗೆ ತಲಾ ಶೇ. ೨ ರಷ್ಟು ಹಂಚಿಕೆ ಮಾಡಿದೆ. ಇದು ಸರಿಯಲ್ಲ. ಈಗ ಮೀಸಲಾತಿ ಕಸಿದುಕೊಳ್ಳುವ ಅವಶ್ಯಕತೆ ಇರಲಿಲ್ಲ. ಇದೊಂದು ರಾಜಕೀಯ ಹನ್ನಾರವಾಗಿದೆ. ಅಷ್ಟೇ ಅಲ್ಲ, ಸಾಂವಿಧಾನಿಕ ನಿಬಂಧನೆಗಳ ಉಲ್ಲಂಘನೆಯೂ ಆಗಿದೆ. ಅಲ್ಪಸಂ ಖ್ಯಾತರ ಕಲ್ಯಾಣ ಮಾಡಬೇಕಾ ದುದು ರಾಜ್ಯ ಸರ್ಕಾರದ ಉದ್ದೇ ಶವೇ ಹೊರತೂ ಹೀಗೆ ಮೀಸಲಾತಿ ಕಸಿದಕೊಳ್ಳುವದಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.
ಸಾಮಾಜಿಕ ನ್ಯಾಯದ ಹಿನ್ನಲೆ ಯಲ್ಲಿ ೨ಬಿ ಮೀಸಲಾತಿಯನ್ನು ಮರು ಪರಿಶೀಲಿಸಿ ಮರುಸ್ಥಾಪಿ ಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮೀಸಲಾತಿಯಲ್ಲಿ ಪ್ರಮುಖ ರಾದ ರಿಯಾಜ್ ಅಹ್ಮದ್, ಶಫೀ ವು, ಜವೀದ್, ಝಾಕೀರ್, ಹುಸೇನ್ ಸಾಬ್, ಆದಿಲ್ ಪಾಷ ಮೊದಲಾದವರಿದ್ದರು.