ರಾಹುಲ್ ಅನರ್ಹತೆ ವಿರೋಧಿಸಿ ಜಿ ಕಾಂಗ್ರೆಸ್ ಪ್ರತಿಭಟನೆ…
ಶಿವಮೊಗ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂಸದ ಸ್ಥಾನ ಅನರ್ಹಗೊಳಿಸಿರು ವುದನ್ನು ವಿರೋಧಿಸಿ ಇಂದು ಜಿ ಕಾಂಗ್ರೆಸ್ ವತಿಯಿಂದ ಮಹಾತ್ಮ ಗಾಂಧಿ ಪಾರ್ಕ್‌ನಲ್ಲಿ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ವಜ ಮಾಡಿ ರುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಂಡಂತಾಗಿದೆ. ಇದು ಪ್ರಜಪ್ರಭುತ್ವದ ಕಗ್ಗೊಲೆಯಾ ಗಿದೆ. ಸಂಸತ್ ಪಾವಿತ್ರ್ಯತೆಯನ್ನೇ ಬಿಜೆಪಿ ಹಾಳು ಮಾಡಿದೆ ಎಂದು ಪ್ರತಿಭಟನಾಕಾರರು ದೂರಿದರು.
ಧರ್ಮಗಳ ನಡುವೆ ಕಂದಕ ತೋಡುತ್ತಿರುವ ಬಿಜೆಪಿ ಸರ್ಕಾರ ಕೋಮು ಗಲಭೆಗಳನ್ನು ಸೃಷ್ಠಿಸಿ ಚುನಾವಣೆಯ ಲಾಭ ಪಡೆಯಲು ಹೊರಟಿದೆ. ಪ್ರಧಾನಿ ನರೇಂದ್ರ ಮೋದಿ ಅವರದು ಹಿಟ್ಲರ್ ಸಂಸ್ಕೃತಿ ಯಾಗಿದೆ. ಬ್ರಿಟಿಷ್ ಸರ್ಕಾರ ದಲ್ಲೂ ಕೂಡ ಇಂತಹ ವಾತಾವರಣ ಇರಲಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದೇಶಾದ್ಯಂತ ಕಸಿದುಕೊಳ್ಳುವ ಹುನ್ನಾರವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಗೋ ಬ್ಯಾಕ್ ಮೋದಿ, ತೊಲಗಲಿ ತೊಲಗಲಿ ಮೋದಿ ತೊಲಗಲಿ, ದ್ವೇಷ ರಾಜಕಾರಣ ತೊಲಗಲಿ, ಅಭಿವ್ಯಕ್ತಿ ಸ್ವಾತಂತ್ರ್ಯ ಉಸಿರಾಡಲಿ ಎಂದು ಪ್ರತಿಭಟನಾ ಕಾರರು ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಪ್ರಮುಖ ರಾದ ರಮೇಶ್ ಹೆಗ್ಡೆ, ಕೆ.ಬಿ. ಪ್ರಸನ್ನಕುಮಾರ್, ಇಸ್ಮಾಯಿಲ್ ಖಾನ್, ಎಲ್. ಸತ್ಯನಾರಾಯಣ್, ಚಂದ್ರಭೂಪಾಲ್, ಹೆಚ್.ಪಿ. ಗಿರೀಶ್, ರಂಗನಾಥ್, ಸುವರ್ಣಾ ನಾಗರಾಜ್, ಶಶಿಧರ್, ನೇತಾಜಿ, ಯು. ಶಿವಾನಂದ್, ಚಂದನ್, ಚಿನ್ನಪ್ಪ, ರಘು ಇದ್ದರು.