ಹೊನ್ನಾಳಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

ಹೊನ್ನಾಳಿ : ಇಂದು ದೇಶಾದ್ಯಂತ ೭೭ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹೊನ್ನಾಳಿಯ ತಾಲೂಕು ಕ್ರೀಡಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಧ್ವಜರೋಹಣ ಕಾರ್ಯಕ್ರಮವನ್ನು ಉಪ ವಿಭಾಗಾಧಿಕಾರಿ ಹುಲ್ಲುಮನೆ ತಿಮ್ಮಣ್ಣ ನೆರವೇರಿಸಿದರು.
ಬಳಿಕ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಮಾಜಿ ಸೈನಿಕರು ಹಾಗೂ ಪೋಲಿಸ್ ಸಿಬ್ಬಂದಿಗಳಿಂದ ಪಥಸಂಚಲನ ಕಾರ್ಯಕ್ರಮ ನೆರವೇರಿತು. ನಂತರ ಮಾತನಾಡಿದ ಉಪವಿಭಾಗಧಿಕಾರಿ ಹುಲ್ಲಮನೆ ತಿಮ್ಮಣ್ಣ ಅವರು, ಸ್ವಾತಂತ್ರ್ಯ ಬಂದ ಬಗ್ಗೆ ಹಾಗೂ ಹೋರಾಟಗಾರರ ಕುರಿತು ಸಂದೇಶ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಹಾಗೂ ಮಾಜಿ ಸೈನಿಕರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಶಾಂತನಗೌಡರು, ಪುರಸಭೆ ಮುಖ್ಯಾಧಿಕಾರಿ ನಿರಂಜನಿ, ಕ್ಷೇತ್ರದಂಡಾಧಿಕಾರಿ ತಿರುಪತಿ ಪಟೇಲ್ ಸೇರಿದಂತೆ ತಾಲ್ಲೂಕಿನ ಎಲ್ಲ ಅಧಿಕಾರಿಗಳು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಮಾಜ ಸೇವಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.