ಮುಸ್ಲಿಂ ಮೀಸಲಾತಿ ಕಡಿತ ಖಂಡಿಸಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಪ್ರತಿಭಟನೆ …
ಶಿವಮೊಗ್ಗ: ರಾಜ್ಯ ಸರ್ಕಾರ ಮುಸ್ಲಿಂ ಸಮುದಾಯದ ಮೀಸ ಲಾತಿಯನ್ನು ಕಡಿತಗೊಳಿಸಬೇಕು ಎಂದು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿರುವುದನ್ನು ಖಂಡಿಸಿ ಜಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಜಿಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಮುಸ್ಲಿಂ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಲಿಂಗಾ ಯತ ಮತ್ತು ಒಕ್ಕಲಿಗರ ಮತಗ ಳನ್ನು ಕ್ರೂಢೀಕರಣದ ದೃಷ್ಟಿ ಯಿಂದ ರಾಜ್ಯ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದ್ದು, ಇದು ಸಂವಿಧಾನ ವಿರೋಧಿಯಾಗಿದೆ. ಶೇ. ೪ ರಷ್ಟು ಮೀಸ ಲಾತಿ ಇರುವುದನ್ನು ಹೆಚ್ಚಿಸಬೇಕಿತ್ತೇ ಹೊರತೂ ಕಡಿತಗೊಳಿಸಿರುವುದು ಅನ್ಯಾಯವಾಗಿದೆ. ಮುಸ್ಲಿಂ ಸಮು ದಾಯಕ್ಕೆ ಆರ್ಥಿಕವಾಗಿ ಹಿಂದುಳಿ ದವರಿಗಾಗಿ ನೀಡುವ ಮೀಸ ಲಾತಿಯಲ್ಲಿ ನಿಗದಿಪಡಿಸಲಾಗು ವುದು ಎಂದಿದೆ. ಆದರೆ, ಇಲ್ಲಿ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗುವುದಾರೂ ಹೇಗೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಜತಿಗಳ ನಡುವೆ ಧರ್ಮಗಳ ನಡುವೆ ವೈಷಮ್ಯ ಬೆಳೆಸಬಾರದು. ಕೇವಲ ಓಟಿಗಾಗಿ ಸಂವಿಧಾನ ವಿರೋಧಿ ನಿರ್ಧಾರ ತೆಗೆದುಕೊ ಳ್ಳುವುದು ತಪ್ಪಾಗುತ್ತದೆ. ರಾಷ್ಟ್ರಪತಿ ಗಳು ಕರ್ನಾಟಕ ರಾಜ್ಯ ಸರ್ಕಾರ ಮಾಡಿರುವ ಈ ಶಿಫಾರಸ್ಸು ತಿರಸ್ಕ ರಿಸಬೇಕು. ಈ ಹಿಂದೆ ಇದ್ದಂತೆ ಶೇ. ೪ ರ ಮೀಸಲಾತಿಯನ್ನು ಮುಂದುವರೆಸಬೇಕು. ಅಲ್ಲದೇ ಅದನ್ನು ಹೆಚ್ಚಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರತಿಭಟನೆಯಲ್ಲಿ ಜಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಜಿಧ್ಯಕ್ಷ ಮುಜಮಿಲ್ ಪಾಷ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಷ, ಮೊಹಮ್ಮದ್ ಸಹ್ಯಾನ್, ಹಮೀದ್, ಸಿದ್ದಿಕ್, ರೆಹಮತ್, ಝಾಕೀರ್ ಇದ್ದರು.