ಅಭಿನೇತ್ರಿ ಡ್ಯಾನ್ಸ್ ಮ್ಯೂಸಿಕ್ ಅಕಾಡೆಮಿಯಿಂದ ನೃತ್ಯ ಸಂಭ್ರಮ

ಹೊನ್ನಾಳಿ: ಪ್ರತಿಭೆ ಇರುವವರು ಇತರೆ ಮಕ್ಕಳಿಗೆ ಅಕಾಡೆಮಿ ಹೆಸರಿನಲ್ಲಿ ತರಬೇತಿ ನೀಡಿ ಮಕ್ಕಳಲ್ಲಿ ತಮ್ಮ ಪ್ರತಿಭೆ ಕಾಣುವಂತವರು ಹೆಚ್ಚು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಲಿರುವರು ಎಂಬುದಾಗಿ ಹೊನ್ನಾಳಿ ಚನ್ನಮಲ್ಲಿಕಾರ್ಚುನ ಸ್ವಾಮಿಜಿಗಳು ಹೇಳಿದರು.
ಹಿರೇಕಲ್ಮಠದಲ್ಲಿ ಅಭಿನೇತ್ರಿ ಮ್ಯೂಸಿಕ್ ಅಕಾಡೆಮಿ ಸಂಭ್ರಮ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಪೂಜ್ಯರು, ಶ್ರೀ ಮಠದಿಂದ ನ.೧೪ ರಿಂದ ಡಿ.೧೨ ರವರೆಗೆ ಒಂದು ತಿಂಗಳ ಕಾಲ ನಡೆಯುವ ದಿಪೋತ್ಸವ ಕಾರ್ಯಕ್ರಮದಲ್ಲಿ ಅಕಾಡೆಮಿ ಮಕ್ಕಳಿಗೆ ಅವಕಾಶ ಕಲ್ಪಿಸಿಕೊಡಲಾಗುವುದೆಂದರು.
ಹೊನ್ನಾಳಿ ಭ್ರಹ್ಮಕುಮಾರಿ ಜೊತಿಅಕ್ಕ ಅವರು ಮಾತನಾಡಿ, ಭರತನಾಟ್ಯ ಪುರಾತನ ಕಾಲ ಹಾಗು ರಾಜರಕಾಲದಿಂದಲೂ ಉನ್ನತ ಸ್ಥಾನಮಾನದೊಂದಿಗೆ ಹೆಚ್ಚು ಮನ್ನಣೆ ಪಡೆದಿತೆಂದರು. ಬಹುರೂಪಿ ಕಲೆಯ ಪ್ರತಿಭೆಗಳಾಗಿ ಮಕ್ಕಳ ಹೊರತರುವಲ್ಲಿ ಅಕಾಡೆಮಿಯು ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಈಶ್ವರಿ ವಿದ್ಯಾಲಯದ ಪ್ರಧಾನ ಕೇಂದ್ರ ರಾಜಸ್ಥಾನದ ಅಬು ಪರ್ವತ ದಲ್ಲಿ ಸೆ.೧ ರಿಂದ ೧೫ ರವರಿಗೆ ಕಲಾ ಮತ್ತು ಸಂಸ್ಕೃತಿ ವಿಭಾಗದಿಂದ ರಾಷ್ಟೀಯ ಮಟ್ಟದ ಸಮ್ಮೇಳನದಲ್ಲಿ ಇಲ್ಲಿನ ಅಕಾಡೆಮಿ ೧೫ ಪ್ರತಿಭಾನ್ವಿತ ಮಕ್ಕಳಿಗೆ ಅವಕಾಶ ದೊರೆತಿದೆ ಎಂದರು.
ಅಭಿನೇತ್ರಿ ನಾಟ್ಯ ಮ್ಯೂಸಿಕಲ್ ಅಕಾಡೆಮಿ ಅಧ್ಯಕ್ಷೆ ಡಾ| ಪ್ರತಿಭಾ ನಿಜಗುಣಶಿವಯೋಗಿ ಮಾತನಾಡಿ ಇಲ್ಲಿನ ಮಕ್ಕಳನ್ನು ಭರತನಾಟ್ಯ ಪ್ರತಿಭಾವಂತರನ್ನಾಗಿಸಲು ತಾವು ಕಳೆದ ೨೦ ವರ್ಷಗಳ ಕನಸು ಇಂದು ನನಸಾಗಿದೆ ಎಂದರು.
ಸಮಾರಂಭದಲ್ಲಿ ರಂಗಭೂಮಿ ನಿರ್ದೇಶಕ ದರ್ಶನ,ಹೊಸಕೇರಿ ಸುರೇಶ, ಕುಮಾರ ಸ್ವಾಮಿ , ವಿದ್ಯಾ ಸ್ವಾಗತಿಸಿ,ಸ್ಪೂರ್ತಿ ನಿರೂಪಿಸಿ,ರಶ್ಮಿ ವಂದಿಸಿದರು.