ಭದ್ರಾವತಿ ವಿಐಎಸ್‌ಎಲ್ ಪುನರಾರಂಭ:೧೨ ವರ್ಷಗಳ ಹೋರಾಟಕ್ಕೆ ಸಿಕ್ಕ ಫಲ: ಧರ್ಮಪ್ರಸಾದ್

ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆ ಯನ್ನು ನೀತಿ ಆಯೋಗದ ಶಿಫಾರಸ್ಸಿನಂತೆ ಬಂಡವಾಳ ಹಿಂತೆಗೆತ, ಖಾಸಗೀಕರಣ, ಜಂಟೀ ಸಹಭಾಗೀತ್ವದ ಬಗ್ಗೆ ನಿರಂತರವಾಗಿ ಆಧುನೀಕರಣ ಮಾಡಿ ಅಭಿವೃದ್ಧ್ಧಿಗೊಳಿಸಿ ಎಂದು ಅಗ್ರಹಿಸಿ ನಿರಂತರವಾಗಿ ಕಳೆದ ೧೨ ವರ್ಷಗಳಿಂದ ಹೋರಾಟ ಮಾಡಿದ ಫಲ ಈಗ ಕೇಂದ್ರ ಸರ್ಕಾರವು ಕಾರ್ಖಾನೆಗೆ ಅಗತ್ಯ ಬಂಡವಾಳ ನೀಡಿ ಉತ್ಪಾದನೆ ಮಾಡುವಂತೆ ಮಾಡಿದೆ. ಇದಕ್ಕೆ ಸತತ ಪರಿಶ್ರಮ ಹಾಕಿದ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಭದ್ರಾವತಿ ಬಿಜೆಪಿ ಘಟಕವು ಅಭಿನಂದನೆ ಸಲ್ಲ್ಲಿಸುತ್ತದೆ ಎಂದು ಮಂಡಳ ಅಧ್ಯಕ್ಷ ಜಿ.ಧರ್ಮ ಪ್ರಸಾದ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಕಾರ್ಖಾನೆಯನ್ನು ಬಂಡವಾಳ ಹಿಂತೆಗೆತ, ಖಾಸಗೀಕರಣ, ಜಂಟೀ ಸಹಭಾಗೀತ್ವದ ಬಗ್ಗೆ ನಡೆಸಲು ಕೇಂದ್ರ ಸರ್ಕಾರವು ತೀರ್ಮಾನಿಸಿ ಆದೇಶವನ್ನು ಹೊರಡಿಸುತ್ತದೆ. ಇದಕ್ಕೆ ಯಾವ ಕಂಪನಿಯವರು ಸ್ಪಂದಿಸದಿzಗ ಕೇಂದ್ರ ಸರ್ಕಾರವು ಕಾರ್ಖಾನೆ ಭವಿಷ್ಯದ ಬಗ್ಗೆ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳಲು ಸೈಲ್ ಆಡಳಿತದವರ ವಿವೇಚನೆಗೆ ಬಿಡುತ್ತದೆ. ಆಗ ಸೈಲ್ ಆಡಳಿತ ಮಂಡಳಿಯವರು ಅನಿವಾರ್ಯವಾಗಿ ಕಾರ್ಖಾನೆಯಲ್ಲಿ ಉತ್ಪಾದನೆ ಆರಂಭಿಸಲು ವಿಐಎಸ್‌ಎಲ್ ಕಾರ್ಖಾನೆಗೆ ಸೂಚಿಸುತ್ತದೆ. ಅದರಂತೆ ವಿಐಎಸ್‌ಎಲ್ ಅಧಿಕಾರಿಗಳು ಕಾರ್ಖಾನೆ ಪ್ರಾರಂಭದ ಬಗ್ಗೆ ಅಧಿಕೃತವಾಗಿ ನೋಟಿಸ್‌ನ್ನು ಆಯಾಯ ಘಟಕಗಳಿಗೆ ನೀಡಿದೆ. ಇದಕ್ಕೆ ತಕ್ಕ ಬಂಡವಾಳವನ್ನು ಹೂಡಿ ಕಾರ್ಖಾನೆಯನ್ನು ಪ್ರಾರಂಭ ಮಾಡಿ ಉತ್ಪಾದನೆಗೆ ಹಸಿರು ನಿಶಾನೆ ತೋರಿದೆ ಎಂದರು.
ಕಚ್ಚಾ ಪದಾರ್ಧಗಳು, ಸೆಮಿ ಫಿನಿಷಡ್ ಗೂಡ್ಸ್‌ಗಳಿಂದ ಪ್ರಾರಂಭದಲ್ಲಿ ಕಾರ್ಖಾನೆ ಯಲ್ಲಿ ಉತ್ಪದನೆಯು ಪ್ರಾರಂಭವಾಗುತ್ತದೆ. ನಂತರ ಪ್ರೈಮರಿಮಿಲ್, ಬಾರ್‌ಮಿಲ್, ಎಸ್‌ಎಂಎಸ್, ಸೇರಿದಂತೆ ವಿವಿಧ ಘಟಕಗಳು ಕಾರ್ಯನಿರ್ವಹಿಸುತ್ತದೆ. ಇಷ್ಟೆ ಪ್ರಕ್ರಿಯೆಗಳು ನಡೆಯುತ್ತಿದೆ ಇನ್ನೊಂದೆಡೆ ಕಾರ್ಖಾನೆಯ ಅಂತರಂಗದಲ್ಲಿ ಹಲವಾರು ಸಮಸ್ಯೆಗಳು ಉದ್ಭವಿಸಿದ್ದವು. ಅವುಗಳೆಲ್ಲವನ್ನೂ ಬಿಜೆಪಿಯು ಸಮರ್ಪಕವಾಗಿ ಹೋರಾಟ ಗಳನ್ನು ಮಾಡಿ ಸಂಸದರ ನೇತೃತ್ವದಲ್ಲಿ ಬಗೆಹರಿಸಿದೆ ಎಂದು ವಿವರಿಸಿದರು.
ಈಗ ಕಾರ್ಮಿಕರು ಕಾರ್ಖಾನೆಯಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿ ಉತ್ತಮ ಗುಣಮಟ್ಟದ ಉತ್ಪಾದನೆ ಮಾಡಿ ಕಾರ್ಖಾನೆ ಲಾಭದತ್ತ ಸಾಗುವಂತೆ ಸಾಧನೆ ಮಾಡಿ ತೋರಿಸಬೇಕು. ಆಗ ಸೈಲ್ ಆಡಳಿತ ಮಂಡಳಿಗೆ ವಿಐಎಸ್‌ಎಲ್ ಕಾರ್ಖಾನೆಯನ್ನು ಮುಚ್ಚುವಂತೆ ಆದೇಶವನ್ನು ಹೋರಡಿಸಿದ್ದು ತಪ್ಪು ಎಂದು ಅವರಿಗೆ ಅನಿಸುವಂತಾಗಬೇಕು ಎಂದರು.
ಕಾರ್ಖಾನೆ ಪ್ರಾರಂಭವಾಗುತ್ತಿದ್ದರೂ ಕಾರ್ಖಾನೆಗೆ ಅಗತ್ಯ ಬಂಡವಾಳ ತೊಡಗಿಸ ವುದು, ಆಧುನೀಕರಣಗೊಳಿಸುವುದು, ಗಣಿ ಅದಿರು ಮಂಜೂರು ಮಾಡುವುದು, ಹೊಸ ಯಂತ್ರೋಪಕರಣಗಳ ಅಳವಡಿಕೆ ಮಾಡಿ ಕಾರ್ಖಾನೆಯನ್ನು ಸಮಗ್ರ ಅಭಿವೃದ್ಧ್ಧಿ ಮಾಡಬೇಕೆಂಬ ಬೇಡಿಕೆ ಜೀವಂತ ಇದೆ ಎಂದು ದರ್ಮಪ್ರಸಾದ್ ಇದೇ ಸಂಧರ್ಭದಲ್ಲಿ ಸ್ಪಷ್ಟಪಡಿಸಿದರು.
ಕಾರ್ಮಿಕ ಸಂಘದ ಅಧ್ಯಕ್ಷ ಜಗದೀಶ್ ಮಾತನಾಡಿ, ಕಳೆದ ೧೨ ವರ್ಷಗಳ ಕಾಲ ಕಾರ್ಖಾನೆ ಉಳಿವಿಗೆ ನಡೆದ ಹೋರಾಟದ ಘಟನೆಗಳನ್ನು ವಿವರಿಸುತ್ತಾ ೨೦೧೬ರಲ್ಲಿ ಕಾರ್ಖಾನೆಗೆ ಬಂಡವಾಳ ಹಿಂತೆಗೆತದ ಪ್ರಕ್ರಿಯೆ ಪ್ರಾರಂಭವಾಯಿತು. ೨೦೧೮ರ ಜುಲೈನಲ್ಲಿ ಅದರ ಬಗ್ಗೆ ಅಧಿಕೃತ ಆದೇಶ ಹೊರಡಿಸಿದರು.
೨೦೧೬ ರ ಅ.೧೬ರಂದು ಹೂಡಿಕೆ ಹಿಂಪಡೆತದಿಂದ ಖಾಸಗೀಕರಣಕ್ಕೆ ಅಧಿಸೂಚನೆ ಹೊರಡಿಸಿದರು. ೨೦೧೭ರಲ್ಲಿ ಬ್ಲಾಸ್ಟ್ ಫರ್ನೆಸ್ ಎಸ್‌ಎಂಎಸ್ ಘಟಕಗಳು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿತು. ೨೦೨೨ರ ಅ.೧೨ರಂದು ಖಾಸಗೀಕರವನ್ನು ರದ್ದು ಮಾಡಿತು. ಅ.೧೪ ರಂದು ಕಾರ್ಖಾನೆ ಮುಚ್ಚುವಿಕೆಗೆ ಅಧಿಕೃತ ಅದೇಶವನ್ನು ಹೊರಡಿಸುವ ಮೂಲಕ ಕಾರ್ಖಾನೆಗೆ ಅಂತಿಮ ಮುದ್ರೆ ಒತ್ತಿತು. ಜನವರಿ ೨೦೨೩ರಂದು ಸೈಲ್ ಆಡಳಿತ ಮಂಡಳಿ ಹಣಕಾಸು ಇಲಾಖೆವತಿಯಿಂದ ಖಾಸಗೀಕರಣಕ್ಕೆ ಒಪ್ಪಿಗೆ ನೀಡಿತು. ಇಷ್ಟೆ ಘಟನೆಗಳು ನಡೆದರೂ ಕೇಂದ್ರ ಸರ್ಕಾರ ಎಂಬುದು ಒಂದು ರೀತಿಯಲ್ಲಿ ಸಮುದ್ರ ಇದ್ದಂತೆ. ಅದರಲ್ಲಿ ವಿಐಎಸ್‌ಎಲ್ ಕಾರ್ಖಾನೆ ಎಂಬುದು ಕೇವಲ ಒಂದು ಅಂಶ ಅಷ್ಟೆ. ಇಲ್ಲಿ ಬುದ್ಧಿವಂತಿಕೆಯಿಂದ ಹೋರಾಟ ಮಾಡಿದ ಫಲವಾಗಿ ಬಂಡವಾಳ ಹೂಡಿಕೆ ಹಿಂಪಡೆತ ಪ್ರಕ್ರಿಯೆಯಿಂದ ಹೊರ ಬಂದ ಮೇಲೆ ಕಾರ್ಖಾನೆ ಕಾರ್ಖಾನೆ ಪ್ರಾರಂಭಕ್ಕೆ ಸಹಕಾರಿ ಆಯಿತು. ಇದು ಸಣ್ಣ ಸಂಗತಿ ಆದರೆ ಇದಕ್ಕೆ ಸುಧೀರ್ಘ ಹೋರಾಟದ ಫಲವಾಗಿದೆ ಎಂದರು.
ಸೈಲ್ ವಿಐಎಸ್‌ಎಲ್ ಕಾರ್ಖಾನೆಗೆ ಉತ್ಪಾದನೆ ನಿಲ್ಲಿಸುವಂತೆ ಆದೇಶಿಸಿದ್ದರೂ ಸಹ ಸಂಸದ ರಾಘವೇಂದ್ರ ಅವರು ಕಾರ್ಖಾನೆ ಪ್ರಾರಂಭ ಮಾಡಲು ಒಪ್ಪಿಗೆ ಕೊಡಿಸಿದರುವುದು ಸಾಮನ್ಯ ಸಂಗತಿಯಲ್ಲ. ಈಗ ತುರ್ತಾಗಿ ಕಾರ್ಖಾನೆ ಬ್ಲಾಸ್ಟ್ ಫರ್ನೆಸ್ ಘಟಕ ಪ್ರಾರಂಭ ಮಾಡಲು ೧೫೦ ಕೋಟಿ, ಎಸ್‌ಎಂಎಸ್ ಪ್ಲಾಂಟ್‌ಗೆ ೫೦ ಕೋಟಿ ಸೇರಿದಂತೆ ಒಟ್ಟು ಅಂದಾಜು ೩೦೦ ಕೋಟಿ ರೂಗಳು ಬೇಕಿದೆ ಎಂದರು.
ಕಾರ್ಖಾನೆಗೆ ಅಗತ್ಯವಾಗಿ ಬೇಕಿರುವ ಕಬ್ಬಿಣದ ಅದಿರು ಸರಬರಾಜು ಆಗಲು ಆರಣ್ಯ ಇಲಾಖೆ ವತಿಯಿಂದ ಒಪ್ಪಿಗೆ ದೊರೆಯಬೇಕು. ಇದಕ್ಕೆ ೨೬ ಕೋಟಿ ರೂ.ಗಳು ಬೇಕಿದೆ. ಇದಕ್ಕೆ ಕಾರ್ಖಾನೆ ನಿರಂತರವಾಗಿ ತನ್ನ ಉತ್ಪಾದನೆ ಮಾಡುತ್ತಿರಬೇಕು. ಭವಿಷ್ಯದಲ್ಲಿ ಕಾರ್ಖಾನೆ ಸುಮಾರು ೫೦ ಕೊಟಿ ರೂ.ಗಳ ಲಾಭ ಮಾಡುವ ನಿರೀಕ್ಷೆ ಹೊಂದಿದೆ ಎಂದರು.
ಎಲ್ಲದಕ್ಕಿಂತ ಬಹು ಮುಖ್ಯವಾಗಿ ರಾಜಕೀಯದಲ್ಲಿ ರಾಜಕಾರಣಿಗಳು ಮಾಡುವ ರಾಜಕಾರಣಕ್ಕಿಂತ ಸೈಲ್ ಅಧಿಕಾರಿಗಳು ರಾಜಕಾರಣಿಗಳಿಗಿಂತ ಉತ್ತಮವಾಗಿ ರಾಜಕಾರಣ ಮಾಡುತ್ತಾರೆ. ಅವರು ದೆಹಲಿ ಯಲ್ಲಿ ಕಾರ್ಮಿಕರ ನಿಯೋಗಕ್ಕೆ, ಮಂತ್ರಿಗಳಿಗೆ, ಕಾರ್ಖಾನೆ ಬಗ್ಗೆ, ಸರ್ಕಾರಕ್ಕೆ ಏನು, ಯಾವಾಗ, ಹೇಗೆ ಹೇಳಬೇಕು ಎಂಬುದನ್ನು ಅತಿ ಬುದ್ಧಿವಂತಿಕೆಯಿಂದ ಮಾಡುತ್ತಾರೆ ಎಂದು ದೆಹಲಿ ಒಡನಾಟವನ್ನು ಮಾರ್ಮಿಕವಾಗಿ ತಮ್ಮ ಅನುಭವವನ್ನು ಹೇಳಿದರು.
ಗುತ್ತಿಗೆ ಕಾರ್ಮಿಕ ಅಧ್ಯಕ್ಷರಾದ ಹೆಚ್.ಜಿ. ಸುರೇಶ್, ಕುಮಾರ ಸ್ವಾಮಿ ಮಾತನಾಡಿ ಸರ್ಕಾರದ ನೀತಿ ನಿಯಮಗಳು ಏನೆ ಇದ್ದರೂ ಕಾರ್ಖಾನೆ ಪುನರಾರಂಭದ ಬಗ್ಗೆ ನಿರಂತವಾದ ಹೋರಾಟ ಮಾಡಿದ ಫಲ ಕಾರ್ಖಾನೆ ಪ್ರಾರಂಭವಾಗಿದೆ. ಇದು ನಿರಂತರವಾಗಿ ಮುಂದುವರೆಯುತ್ತದೆ ಎಂದರು.
ನಿವೃತ್ತ ಕಾರ್ಮಿಕರ ಸಂಘದ ಅಧ್ಯಕ್ಷ ಬಿ.ಜಿ. ರಾಮಲಿಂಗಯ್ಯ ಮಾತನಾಡಿ, ಕಾರ್ಖಾನೆ ಪ್ರಾರಂಭ ಮಾಡುವ ಬಗ್ಗೆ ನಿರಂತವಾದ ಹೋರಾಟ ಮಾಡಿದ ಬಿಜೆಪಿ ಮುಖಂಡರು ಗಳಿಗೆ ಹಾಗು ನಗರದ ಸಂಘ ಸಂಸ್ಥೆಗಳಿಗೆ ಧನ್ಯವಾದ ಅರ್ಪಿಸಿದರು.
ಮಂಗೋಟೆ ರುದ್ರೇಶ್, ಎಂ.ಎಸ್. ಸುರೇಶಪ್ಪ, ಕೆ.ಹೆಚ್. ತೀರ್ಥಯ್ಯ, ಪ್ರಭಾಕರ್, ಚನ್ನೇಶ್, ಶ್ರೀನಾಥ್ ಆಚಾರ್, ಸತೀಶ್, ಕವಿತಾ, ಸಿ.ಮಂಜುಳಾ, ಆಶಾ, ಮಂಗಳ, ಕಾರ್ಮಿಕ ಮುಖಂಡರು ಗಳು ಭಾಗವಹಿಸಿದ್ದರು.