ಸಂಕಷ್ಟದಲ್ಲಿರುವವರನ್ನು ಸೂಕ್ಷ್ಮವಾಗಿ ಗಮನಿಸಿ ನೆರವಿನ ಹಸ್ತ ಚಾಚಿ…

ಭದ್ರಾವತಿ: ನಮ್ಮ ಪರಿಸರ ಅಕ್ಕ ಪಕ್ಕದ ಮಹಿಳೆಯರಿಗೆ ಏನಾದರೂ ತೊಂದರೆ, ತಾಪತ್ರಯ, ಕಷ್ಟಗಳು ಬಂದಂತಹ ಸಂಧರ್ಭದಲ್ಲಿ ಅದನ್ನು ಸೂಕ್ಷ್ಮವಾಗಿ ಗಮನಿಸಿ ಸೂಕ್ತವಾದ ರೀತಿಯಲ್ಲಿ ಪ್ರತಿಕ್ರಿಯಿಸಿ ಸಹಾಯ ಹಸ್ತ ಚಾಚುವ ಮೂಲಕ ಉದಾರತೆ ತೋರಿಸಬೇಕು ಎಂದು ಬೆಂಗಳೂರಿನ ಸುಮಂಗಲಿ ಸೇವಾ ಆಶ್ರಮದ ಅಧ್ಯಕ್ಷೆ ಡಾ.ಎಸ್.ಜಿ. ಸುಶೀಲಮ್ಮ ಮನವಿ ಮಾಡಿದರು.
ಅವರು ತಾಲ್ಲೂಕಿನ ವೀರಶೈವ ಲಿಂಗಾಯಿತ ಮಹಿಳಾ ಸಮಾಜದ ವತಿಯಿಂದ ಹಳೇ ನಗರದ ಶ್ರೀ ವೀಭದ್ರೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ವಿಶ್ವದ ಭಾರತೀಯರ ಕೌಟುಂಬಿಕ ವ್ಯವಸ್ಥೆ ಅತ್ಯುತ್ತಮ ವಾಗಿದ್ದು ಪ್ರಪಂಚಕ್ಕೆ ಮಾದರಿ ಯಾಗಿದೆ. ಆದರೆ ಅಮೇರಿಕಾ ದೇಶದ ಕೌಟುಂಬಿಕ ವ್ಯವಸ್ಥೆ ನಮಗೆ ಎಂದೂ ಬೇಕಾಗಿಲ್ಲ. ಅಲ್ಲಿ ಯಾರನ್ನೆ ಭೇಟಿ ಆಗಬೇಕು ಎಂದರೆ ಮುಂಚಿತವಾಗಿ ತಿಳಿಸಿ ಅನುಮತಿ ಯನ್ನು ಪಡೆದುಕೊಂಡು ಬಿಡುವು ಮಾಡಿಕೊಂಡು ಹೋಗಬೇಕು. ಆದರೆ ನಮ್ಮಲ್ಲಿ ಯಾವಾಗ ಬೇಕಾದರೂ ಯಾರನ್ನೂ ಯಾವ ವೇಳೆಯದರೂ ಭೇಟಿ ಮಾಡಿ ಪ್ರೀತಿ ವಿಶ್ವಾದ ಮಾತುಗಳನ್ನಾಡ ಬಹುದು. ಪರಸ್ಪರ ನಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳಬಹುದು. ಇದೇ ನಮ್ಮ ಕುಟುಂಬ ವ್ಯವಸ್ಥೆಯ ಗುಟ್ಟು ಎಂದರು.
ಸಮಾಜದಲ್ಲಿ ಮನುಷ್ಯ ಎಂದ ಮೇಲೆ ಕಷ್ಟ ಕಾರ್ಪಣ್ಯಗಳು ತೊಂದರೆ ತಾಪತ್ರಯಗಳು ಸರ್ವೇ ಸಾಮಾನ್ಯ. ಸಿರಿತನ, ಬಡತನಗಳು ಸಹಜ ಅವುಗಳು ಬರುತ್ತವೆ ಹೋಗುತ್ತದೆ. ಆದರೆ ಎಂತಹ ಪರಿಸ್ಥಿತಿ ಬಂದರೂ ನಾವು ನಾವಾಗಿ ರಬೇಕು. ನಮ್ಮ ಆತ್ಮಸ್ಥೈರ್ಯವನ್ನು ಎಂದಿಗೂ ಕಳೆದುಕೊಳ್ಳಬಾರದು. ಭಗವಂತನಲ್ಲಿ ಆಚಲವಾದ ನಿಷ್ಠೆಯನ್ನು ಹೊಂದಿದ್ದರೆ ಎಂತಹ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಬಹುದು ಎಂದರು.
ನಾವು ಯಾವುದೆ ಏನೇ ಕೆಲಸ ಮಾಡಬೇಕಾದಲ್ಲಿ ಅಂದವಾಗಿ ಚಂದವಾಗಿ ಶಿಸ್ತಿನಿಂದ ಮಾಡಿದಾಗ ಖಂಡಿತವಾಗಿ ಬೇರೆಯವರಿಂದ ಪ್ರಶಂಶೆ ದೊರೆತಾಗ ಆನಂದ ವಾಗುತ್ತದೆ. ನಂತರ ನಾವು ಅಂತಹ ಆನಂದಿಂದ ಪರಮಾನಂದವನ್ನು ಅನುಭವಿಸುತ್ತೇವೆ. ಅಂತಹ ಪರಮಾನಂದ ಅನುಭವಿಸು ವಂತಹ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಕರೆ ನೀಡಿದರು.
ಬೆಂಗಳೂರಿನ ವಕೀಲರು ಹಾಗು ಸಮಾಜ ಸೇವಕಿ, ಹವ್ಯಾಸಿ ಸ್ಟಾಂಪ್ ಸಂಗ್ರಹಕಿ ಪ್ರಪ್ರಥಮ ಹೆವಿ ವೆಹಿಕಲ್ ಡ್ರೈವಿಂಗ್ ಲೈಸೆನ್ಸ್ ಪಡೆದಿರುವ ಶ್ರೀದೇವಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿ, ಇದುವರೆಗೂ ಹಲವಾರು ಮಹಾ ಪುರುಷರ ಅಂಚೆ ಚೀಟಿಗಳು ಬಡುಗಡೆ ಯಾಗಿದೆ. ಆದರೆ ಮಹಿಳೆಯರಿ ಗೋಸ್ಕರ ತನ್ನ ಜೀವನವನ್ನೆ ಮುಡುಪಾಗಿಟ್ಟ ೧೨ನೇ ಶತಮಾನದ ವೈರಾಗ್ಯ ನಿಧಿ ಮಹಿಳಾ ವಚನಗಾರ್ತಿ ಅಕ್ಕಮಾಹದೇವಿ ಯವರ ಅಂಚೆ ಚೀಟಿ ಇದುವರೆಗೂ ಬಿಡುಗೆಡಯಾದಿರುವುದು ದುರ್ದೈವದ ಸಂಗತಿ ಎಂದರು.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸುತ್ತಿರುವ ಇಂತಹ ಸಂಧರ್ಭದಲ್ಲಿ ಇನ್ನಾದರೂ ಇದನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮಹಿಳೆಯರು ಒತ್ತಡ ಹಾಕಬೇಕು. ಇದಕ್ಕೆ ನಮ್ಮ ನಮ್ಮ ಭಾಗದ ಸಂಸತ್ ಸದಸ್ಯರು ಗಳ ಮೂಲಕ ಮನವಿ ನೀಡಿ ಆಗ್ರ ಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಗಳನ್ನು ವಿತರಿಸಲಾಯಿತು. ಇಂದಿನ ದಿನದ ಅದೃಷ್ಟ ಮಹಿಳೆಯಾಗಿ ಸುಲೇಖ ಮತ್ಯುಂಜಯ ಆಯ್ಕೇಯಾದರು.
ವೀರಶೈವ ಲಿಂಗಾಯಿತ ಮಹಿಳಾ ಸಮಾಜದ ಉಪಾಧ್ಯಕ್ಷೆ ಹಾಗು ರಕ್ತದಾನಿ ಬಿ.ಎಸ್. ಭಾಗ್ಯಲಕ್ಷ್ಮಿ ಹಾಗು ರಾಜ್ಯ ಮಟ್ಟದ ಕರಾಟೆ ಪಟು ಕು.ಸಿಂಚನ ರವರನ್ನು ಸನ್ಮಾನಿಸಲಾಯಿತು.
ಗೌರಮ್ಮ ಶಂಕ್ರಯ್ಯ, ಆರ್. ಮಹೇಶ್ ಕುಮಾರ್, ಯಶೋಧ ಡಾ.ವೀರಭದ್ರಪ್ಪ, ವೇದಿಕೆಯಲಿ ಉಪಸ್ಥಿತರಿದ್ದರು. ನ್ಯಾಯವಾದಿ ಆರ್.ಎಸ್.ಶೋಭಾ ಅಧ್ಯಕ್ಷತೆ ವಹಿಸಿದ್ದರು. ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿ ಸ್ಥಾಪಕಿ ಎಮಿರಿಟಿಸ್ ಪ್ರಾಧ್ಯಾಪಕಿ ಡಾ. ವಿಜಯದೇವಿ ಪ್ರಶಸ್ತಿ ಪುರಸ್ಕೃತ ಡಾ.ಎಸ್.ಜಿ.ಸುಶೀಲಮ್ಮ ನವರು ಹಾಗು ಸಮಂಗಲಿ ಸೇವಾ ಆಶ್ರಮದ ಸೇವಾ ಕಾರ್ಯದ ಕುರಿತು ಮಾತನಾಡಿದರು.
ಮಮತ, ಕವಿತ, ಶೃತಿ ಪ್ರಾರ್ಥನೆ ಮಾಡಿದರು. ಶಶಿಕಲಾ ಸ್ವಾಗತಿಸಿದರು. ಎನ್.ಎಸ್.ರೂಪಾ ಕಾರ್ಯಕ್ರಮ ನಿರೂಪಿಸಿದರು. ಗುಣ, ಸುಶೀಲಮ್ಮ, ಪುಟ್ಟಮ್ಮ ಅಥಿತಿಗಳ ಪರಿಚಯ ಮಾಡಿ ಕೊಟ್ಟರು. ನಾಗರತ್ನ ವಾಗೀಶ್ ಕೋಠಿ ಪ್ರಾಸ್ತಾವಿಕ ಭಾಷಣ ಮಾಡಿದರು. ಪರಿಮಳ ವಂದನಾರ್ಪಣೆ ಮಾಡಿದರು.