ಡಿಸಿಸಿ ನೇಮಕಾತಿ: ಭ್ರಷ್ಟಾಚಾರ ಆರೋಪ…

ಶಿವಮೊಗ್ಗ: ಶಿವಮೊಗ್ಗ ಜಿ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ನೇಮಕಾತಿಯಲ್ಲಿ ಭ್ರಷ ಚಾರ ನಡೆದಿದ್ದು, ಇದರ ಸಂಪೂ ರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳು ವಂತೆ ಸಮಾನ ಮನಸ್ಕರ ವೇದಿಕೆ ರಾಜ್ಯ ಸರ್ಕಾರವನ್ನು ಒತ್ತಾಯಿ ಸಿದೆ.
ನಗರದ ಹೋಟೆಲ್ ಜ್ಯುಯಲ್ ರಾಕ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪ್ರಮುಖ ಕೆ.ಎಲ್. ಅಶೋಕ್ ಅವರು ಮಾತನಾಡಿ, ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ದೂರು ದಾಖ ಲಿಸಿದ್ದರೂ ಯಾವುದೇ ಪ್ರಯೋಜ ನವಾಗಿಲ್ಲ. ಹೀಗಾಗಿ ಲೋಕಾ ಯುಕ್ತ ಐಜಿಗೆ ಇದೀಗ ದೂರು ಸಲ್ಲಿಸಲಾಗಿದೆ ಎಂದು ಹೇಳಿದರು.
ಶಿವಮೊಗ್ಗ ಜಿ ಸಹಕಾರ ಕೇಂದ್ರ ಬ್ಯಾಂಕ್‌ಗೆ ನಡೆಸಲಾದ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಕಷ ಭ್ರಷಚಾರ ನಡೆದಿರುವ ಶಂಕೆ ಇದ್ದು,ಈ ಸಂಬಂಧ ಲೋಕಾಯುಕ್ತ ತನಿಖೆ ನಡೆಸು ವಂತೆ ಮನವಿ ಮಾಡಲಾಗಿದೆ. ರಾಜ್ಯ ಸರ್ಕಾರ ಕೂಡ ಮಧ್ಯ ಪ್ರವೇಶಿಸಿ ಹಗರಣದ ತನಿಖೆ ನಡೆಸಬೇಕು. ಭ್ರಷಚಾರವನ್ನು ಬಯಲಿಗೆ ಎಳೆಯಬೇಕೆಂದು ಒತ್ತಾಯಿಸಿದರು.
ಹಗರಣದಲ್ಲಿ ತಪ್ಪಿತಸ್ಥರು ಯಾರೇ ಕಂಡುಬಂದರೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.
ಇದೆಲ್ಲದರ ಹಿಂದೆ ಕಾಣದ ಕೈಗಳು ಸಾಕಷ ಕೆಲಸ ಮಾಡು ತ್ತಿದೆ. ಈ ಬಗ್ಗೆಯೂ ತನಿಖೆ ನಡೆಸ ಬೇಕು. ನಾವು ಕೂಡ ನ್ಯಾಯಾಲ ಯದ ಮೊರೆ ಹೋಗುವ ಚಿಂತನೆ ನಡೆಸು ತ್ತಿದ್ದೇವೆ. ನಮಗೆ ನ್ಯಾಯ ದೊರಕುತ್ತದೆ ಎಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆರ್. ಕೆ. ಕುಮಾರ್, ಗೋಪಿ, ಅರುಣ್ ಕುಮಾರ್ ಮತ್ತಿತ್ತರರು ಇದ್ದರು.