ಹೈನುಗಾರರಿಗೆ ಲೀಟರ್‌ವೊಂದಕ್ಕೆ ಕನಿಷ್ಟ ೪೦ ರೂ. ದೊರೆಯಲಿ: ರವಿಶಂಕರ್

ಶಿವಮೊಗ್ಗ: ತಾಲೂಕಿನ ಶ್ರೀರಾಂಪುರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಇಂದು ಬುಧ ವಾರ ನಡೆದ ಚುನಾವಣೆಯಲ್ಲಿ ರವಿಶಂಕರ್ ಕೆ.ಬಿ. ಇವರು ೫ನೇ ಬಾರಿ ೫ ವರ್ಷಗಳ ಅವಧಿಗೆ ಹಾಗೂ ಉಪಾಧ್ಯಕ್ಷರಾಗಿ ವೀರ ಮಣಿ ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಚುನಾ ವಣಾಧಿಕಾರಿಯಾಗಿ ಸುಜನ ಜೀನ ಕೇರಿ, ಸಂಘದ ಎ ನಿರ್ದೇ ಶಕರು, ಕಾರ್ಯದರ್ಶಿ ರಾಜೇ ಂದ್ರ, ಮಿಲ್ಕ್ ಟೆಸ್ಕರ್ ಕಾರ್ತಿಕ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾ ಡಿದ ರವಿಶಂಕರ್ ಹೈನುಗಾರಿಕೆ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಉಪ ಕಸುಬಾಗಿದ್ದು, ಹಳ್ಳಿ ಜನರ ದಿನ ನಿತ್ಯದ ಆರ್ಥಿಕ ವಹಿವಾಟಿನ ಪ್ರಮುಖ ಮೂಲವಾಗಿದೆ. ಹೈನು ಗಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.
ಹೈನುಗಾರಿಕೆಯ ನಿರ್ವಹಣಾ ವೆಚ್ಚವು ಹೆಚ್ಚಾಗುತ್ತಾ ಹೋಗು ತ್ತಿದೆ. ೫೦ ಕೆಜಿ ಹಿಂಡಿಯ ಬೆಲೆ ಸರಿಸುಮಾರು ೫೦೦ ರೂ.ಇದೆ. ಭತ್ತದ ಒಣಹುಲ್ಲಿನ ದರ ರೋಲ್ ವೊಂದಕ್ಕೆ ೩೦೦ ರೂ. ತಲುಪಿದೆ. ಹುಲ್ಲನ್ನು ಕೊಂಡು ಹೈನುಗಾರಿಕೆ ನಡೆಸಿದಲ್ಲಿ ಆರ್ಥಿಕವಾಗಿ ಯಾವು ದೇ ಪ್ರಯೋಜನವಾಗುವುದಿಲ್ಲ. ಹಾಲು ಉತ್ಪಾದಕರ ಸಹಕಾರ ಸಂಘಗಳು ಸರ್ಕಾರದ ಪ್ರೋತ್ಸಾ ಹಧನ ಸೇರಿದಂತೆ ಲೀಟರ್‌ವೊಂ ದಕ್ಕೆ ೩೬ ರೂ. ನೀಡುತ್ತಿವೆ. ಈ ದರವನ್ನು ೪೦ ರೂ.ಗೆ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದರು.
೧೫೦ ಷೇರುದಾರರನ್ನು ಹೊಂದಿರುವ ಶ್ರೀರಾಂಪುರ ಹಾಲು ಉತ್ಪಾದಕರ ಸಹಕಾರ ಸಂಘವು ಪ್ರತಿನಿತ್ಯ ಸರಿಸುಮಾರು ೬೦೦ ಲೀ.ನಷ್ಟು ಹಾಲನ್ನು ಶಿಮುಲ್‌ಗೆ ಪೂರೈಸುತ್ತಿದೆ.
ಗುಣಮಟ್ಟದ ಹಾಲನ್ನು ಪೂರೈಸುವಲ್ಲಿ ಸಂಘವು ಯಶಸ್ವಿಯಾಗಿದೆ. ಸರ್ಕಾರ ಹೈನು ಗಾರಿಕೆಯನ್ನು ಪ್ರೋತ್ಸಾಹಿಸುವ ಮೂಲಕ ರೈತರಿಗೆ ನೆರವಾಗಲಿ ಎಂದು ಆಶಿಸಿದರು.