ಈ ವರ್ಷ ಶ್ರಾವಣ ಮಾಸದಿಂದಾಗಿ ಅಧಿಕ ಮಾಸಕ್ಕೆ ವಿಶೇಷ ಮಹತ್ವವಿದೆ. ಇದು ೧೯ ವರ್ಷಗಳ ಅಂತರದ ನಂತರ ನಡೆಯುತ್ತಿರುವ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಘಟನೆಯಾಗಿದೆ. ಈ ಸಮಯವನ್ನು ತಮ್ಮ ಆಧ್ಯಾತ್ಮಿಕ ಪ್ರಯಾಣದಲ್ಲಿ ಕೆಲಸ ಮಾಡಲು ಮತ್ತು ಶಿವ ಮತ್ತು ಭಗವಾನ್ ವಿಷ್ಣು ಇಬ್ಬರ ಕಡೆಗೆ ತಮ್ಮ ಭಕ್ತಿಯನ್ನು ಬಲಪಡಿಸಲು ಬಯಸುವ ಭಕ್ತರಿಗೆ ಅತ್ಯಂತ ಮಂಗಳಕರ ಸಮಯವೆಂದು ಪರಿಗಣಿಸಲಾಗಿದೆ.
ಸಾಮಾನ್ಯವಾಗಿ ಮೂರು ವರ್ಷ ಕ್ಕೊಮ್ಮೆ ಅಧಿಕಮಾಸ ಬರುತ್ತದೆ. ಹಿಂದೂ ಚಾಂದ್ರಮಾನ ವರ್ಷದಲ್ಲಿ ಚೈತ್ರ ಮಾಸದಿಂದ ಫಾಲ್ಗುಣ ಮಾಸದ ವರೆಗೆ ೧೨ ತಿಂಗಳಲ್ಲಿ ೩೫೫ ದಿನಗಳು ಇರುತ್ತವೆ. ಅದೇ ಸೌರಮಾನ ವರ್ಷ ದಲ್ಲಿ ೩೬೫ ದಿನಗಳು ಇರುತ್ತವೆ. ಈ ಹತ್ತು ದಿನಗಳು ೩೦ ದಿನಗಳು ಆದ ಮೇಲೆ ಒಂದು ತಿಂಗಳು ಅಧಿಕವಾಗು ತ್ತದೆ. ಸ್ಪಷ್ಟವಾಗಿ ಹೇಳುವುದಾದರೆ ಪ್ರತಿ ೩೩ ತಿಂಗಳುಗಳು ಆದ ಮೇಲೆ ಅಧಿಕ ಮಾಸ ಬರುತ್ತದೆ.
ಸೂರ್ಯ ತಿಂಗಳಿಗೊಮ್ಮೆ ಒಂದು ರಾಶಿಯನ್ನು ಬದಲಿಸುತ್ತಾನೆ. ಇದಕ್ಕೇ ಸಂಕ್ರಾಂತಿ ಎಂದು ಹೆಸರು. ಹೀಗೆ ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಒಂದು ವರ್ಷದಲ್ಲಿ ೧೨ ಸಂಕ್ರಾಂತಿಗಳು ಆಗುತ್ತವೆ. ಚೈತ್ರ ಮಾಸದಿಂದ ಫಾಲ್ಗುಣ ಮಾಸದವರೆಗೆ ಪ್ರತಿಯೊಂದು ಮಾಸದಲ್ಲಿ ಒಂದು ಸಂಕ್ರಮಣ ಇರುತ್ತದೆ. ಇದರಲ್ಲಿ ಬದಲು ಆಗುತ್ತಾ ೩೩ ತಿಂಗಳುಗಳು ಆದ ಮೇಲೆ ಒಂದು ತಿಂಗಳು ಬರುತ್ತದೆ. ಅದರಲ್ಲಿ ಸಂಕ್ರಾಂತಿಯೇ ಇರುವುದಿಲ್ಲ. ಹಿಂದಿನ ತಿಂಗಳಲ್ಲಿ ಅಮಾವಾಸ್ಯೆಯ ದಿನ ಸಂಕ್ರಾಂತಿ ಇರುತ್ತದೆ ಮತ್ತು ಮುಂದಿನ ತಿಂಗಳಲ್ಲಿ ಪ್ರತಿಪದೆಗೆ ಸಂಕ್ರಾಂತಿ ಇರುತ್ತದೆ. ಈ ಸಂಕ್ರಾಂತಿ ಇಲ್ಲದ ತಿಂಗಳಿಗೆ ಅಧಿಕ ಮಾಸ ಎಂದು ಕರೆಯುತ್ತಾರೆ.
ಅಧಿಕ ಮಾಸಕ್ಕೆ ಮುಂದಿನ ಮಾಸದ ಹೆಸರನ್ನು ನೀಡುತ್ತಾರೆ. ಈ ಸಲ ಮುಂದಿನ ಮಾಸ ಇರುವುದು ಆಶ್ವಯುಜ. ಅದಕ್ಕೆ ಈ ಸಲದ ಅಧಿಕ ಮಾಸ ಅಧಿಕ ಆಶ್ವಯುಜ ಮಾಸ.
ಅಧಿಕ ಮಾಸಕ್ಕೆ ಪುರುಷೋತ್ತಮ ಮಾಸವೆಂದೂ ಕರೆಯುತ್ತಾರೆ. ಅಧಿಕ ಮಾಸದ ಅಭಿಮಾನಿ ದೇವತೆ ಗೊಲೋಕದ ರಾಧಾಸಮೇತ ಪುರುಷೋತ್ತಮ ಶ್ರೀ ಕೃಷ್ಣ.
ಹೀಗಾಗಿ ಈ ಮಾಸದಲ್ಲಿ ನಿತ್ಯ ಸ್ತೋತ್ರ ಪಠಣ, ಹರಿ ಸ್ಮರಣೆ, ಗೀತೆ, ಭಾಗವತ, ವಿಷ್ಣು ಸಹಸ್ರ ನಾಮ ಪಾರಾಯಣ ಇತ್ಯಾದಿಗಳನ್ನು ಮಾಡುತ್ತಾರೆ ಹಾಗೂ ಅಪೂಪ ದಾನ, ದೀಪ ದಾನ ಇತ್ಯಾದಿಗಳಿಗೆ ವಿಶೇಷ ಮಹತ್ವವಿದೆ.
ಪುರುಷೋತ್ತಮ ಮಾಸವೆಂದೂ ಹೇಳಲಾದ ಅಧಿಕಮಾಸವನ್ನು ಚಾಂದ್ರ ಸಂವತ್ಸರದಲ್ಲಿ ಗುರುತಿಸಲಾಗುತ್ತದೆ. ಸಂವತ್ಸರವೆಂದರೆ ಸಾಮಾನ್ಯವಾಗಿ ೩೬೦ ದಿನಗಳಾದರೂ ಚಾಂದ್ರಮಾನ ಸಂವತ್ಸರದಲ್ಲಿ ಸಾಮಾನ್ಯವಾಗಿ ೩೫೪ ದಿನಗಳಿರುತ್ತವೆ. ಅದರಂತೆ ಸೌರಮಾನದಲ್ಲಿ ಸುಮಾರು ೩೬೫ ದಿವಸಗಳಿವೆ. ಹೀಗೆ ಒಂದು ವರ್ಷದಲ್ಲಿ ಚಾಂದ್ರ ಸಂವತ್ಸರಕ್ಕೂ ಸೌರ ಸಂವತ್ಸರಕ್ಕೂ ಸುಮಾರು ೧೧ ದಿನಗಳ ಅಂತರವುಂಟಾಗುತ್ತದೆ. ಮೂರು ವರ್ಷಗಳಲ್ಲಿ ಈ ಅಂತರವು ಸುಮಾರು ಒಂದು ತಿಂಗಳಿಗೂ ಹೆಚ್ಚಾಗುತ್ತದೆ. ಅದನ್ನು ಸರಿಪಡಿಸಲು ಅಧಿಕ ಮಾಸವನ್ನು ಕಲ್ಪಿಸಲಾಗಿದೆ. ಇದರಿಂದ ಸೌರಮಾನ ಚಾಂದ್ರಮಾನಗಳು ಜೊತೆಯಾಗಿ ಸಾಗಲು ಅನುಕೂಲವಾಗುತ್ತದೆ. ಸೌರಮಾನದಲ್ಲಿ ಒಂದು ವರ್ಷಕ್ಕೆ ಹನ್ನೆರಡು ತಿಂಗಳು ನಿಯತವಾಗಿದೆ. ಆದರೆ ಚಾಂದ್ರಮಾನದಲ್ಲಿ ಅಧಿಕ ಮಾಸವಿರುವಾಗ ಒಂದು ವರ್ಷದಲ್ಲಿ ಹದಿಮೂರು ಮಾಸಗಳಿರುತ್ತವೆ.
ಒಂದು ಅಧಿಕ ಮಾಸದಿಂದ ಇನ್ನೊಂದು ಅಧಿಕ ಮಾಸಕ್ಕೆ ಸುಮಾರು ೩೨ ತಿಂಗಳ ಅಂತರವಿರುತ್ತದೆ. ವಸಿಷ್ಠ ಸಿದ್ಧಾಂತದಲ್ಲಿ ಅದನ್ನು ಸೂಕ್ಷ್ಮವಾಗಿ ೩೨ ತಿಂಗಳು ೧೬ ದಿನ ೧೯೨ ನಿಮಿಷ ಎನ್ನಲಾಗಿದೆ. ಈ ಆಶ್ವಿನ ಮಾಸ (೨೦೨೦)ದ ಮೊದಲು, ೩೨ ತಿಂಗಳ ಹಿಂದೆ ಅಧಿಕಮಾಸ ಬಂದಿತ್ತು (ಮೇ-ಜೂನ್ ೨೦೧೮). ಅದರಂತೆ ಮುಂದೆ ೩೨ ತಿಂಗಳಾದ ಮೇಲೆ ಅಧಿಕ ಮಾಸ ಬರಲಿದೆ. ಅಧಿಕ ಮಾಸದ ಸಮಯವನ್ನು ಪ್ರಾರ್ಥನೆ ಉಪವಾಸ ದಾನ ಮುಂತಾದವುಗಳಿಗಾಗಿ ಉಪಯೋಗಿಸುವ ರೂಢಿಯಿದೆ.
ಸೂರ್ಯನು ಸುಮಾರು ಒಂದು ತಿಂಗಳ ಕಾಲ ಮೇಷಾದಿ ರಾಶಿಯಲ್ಲಿ ಕಾಣುತ್ತಾನೆ. ಒಂದನ್ನು ಬಿಟ್ಟು ಇನ್ನೊಂದು ರಾಶಿಯಲ್ಲಿ ಕಾಣುವ ಸಮಯವನ್ನು ಸಂಕ್ರಾಂತಿಯೆನ್ನುತ್ತಾರೆ. ಸಾಮಾನ್ಯವಾಗಿ ಚೈತ್ರಾದಿಮಾಸದಲ್ಲಿ ಸಂಕ್ರಾಂತಿಯು ಬಂದೇ ಬರುತ್ತದೆ. ಆದರೆ ಸುಮಾರು ೩೦ ತಿಂಗಳುಗಳಾದ ಮೇಲೆ ಒಂದು ಮಾಸದಲ್ಲಿ ಎರಡು ಅಮಾವಾಸ್ಯೆಗಳ ನಡುವೆ ಸೂರ್ಯ ಸಂಕ್ರಾಂತಿಯಿರುವುದಿಲ್ಲ. ಸಂಕ್ರಾಂತಿಯಿಲ್ಲದ ಈ ಮಾಸವನ್ನು ಅಧಿಕಮಾಸವೆನ್ನುತ್ತಾರೆ.
ಅನಿವಾರ್ಯವಾದ ನಿತ್ಯ ನೈಮಿತ್ತಿಕ ಕರ್ಮಗಳನ್ನು ಅಧಿಕ ಮಾಸದಲ್ಲಿಯೂ ಮಾಡಬಹುದು. ಅದು ಅನಿವಾರ್ಯವಲ್ಲ ಎಂದಾದರೆ ಅಧಿಕ ಮಾಸದಲ್ಲಿ ಮಾಡಬಾರದು. ಉದಾಹರಣೆಗಾಗಿ ಸಂಧ್ಯೋಪಾಸನೆಯು ನಿತ್ಯಕರ್ಮಗಳ ಂದು. ಅದನ್ನು ಅಧಿಕ ಮಾಸವೆಂದು ಬಿಡುವಂತಿಲ್ಲ. ಆದರೆ ನಿತ್ಯವಾದ ಜ್ಯೋತಿಷ್ಟೋಮ ಯಾಗವನ್ನು ಅಧಿಕ ಮಾಸದಲ್ಲಿ ಮಾಡಬಾರದು. ಅದನ್ನು ಶುದ್ಧ ಮಾಸದಲ್ಲಿಯೇ ಮಾಡಬೇಕು.
ಅನಿವಾರ್ಯ ಎಂಬ ಶಬ್ದವನ್ನು ಹೇಳಿರುವುದರಿಂದ ಅಧಿಕ ಮಾಸದಲ್ಲಿ ಮಾಡದಿದ್ದರೆ ತೊಂದರೆ ಆಗಬಹುದಾದ ಕಾರ್ಯಗಳನ್ನೇ ಮಾಡಬೇಕೆಂದು ಹೇಳಲಾಗಿದೆ. ಉದಾಹರಣೆಗಾಗಿ, ದೇವಾಲಯದಲ್ಲಿ ಕೆಲವು ಕರ್ಮಗಳನ್ನು ಮಾಡದಿದ್ದರೆ ಪೂಜೆಯ ಲೋಪವುಂಟಾಗುತ್ತದೆ. ಅಂತಹ ಸಂದರ್ಭದಲ್ಲಿ ಪ್ರತಿಷ್ಠಾ ಕಾರ್ಯವನ್ನು ಮಾಡಲು ಅನುಮತಿಸಲಾಗಿದೆ. ಅನ್ನಪ್ರಾಶನಾಂತ ಸಂಸ್ಕಾರಗಳನ್ನು ಅಧಿಕ ಮಾಸದಲ್ಲಿಯೂ ಮಾಡಬಹುದು. ಪುತ್ರ ಜನನವಾದಾಗ ಜತೇಷ್ಟಿಯೆಂಬ ಒಂದು ಕರ್ಮವನ್ನು ವಿಧಿಸಲಾಗಿದೆ. ಅಧಿಕ ಮಾಸದಲ್ಲಿ ಅದನ್ನು ಮಾಡಲಾಗದು.
ಅಧಿಕ ಮಾಸವು ವಿಷ್ಣುವಿಗೆ ಪ್ರಿಯವಾದ ಸಮಯವಾಗಿದ್ದು, ಅದನ್ನು ಪುರುಷೋತ್ತಮ ಮಾಸ ಎಂದೇ ಹೆಸರಿಸಲಾಗಿದೆ.
ಜ್ಯೋತಿಷ್ಯ ಮತ್ತು ಧರ್ಮಶಾಸ :
ಜ್ಯೋತಿಷ್ಯದ ಆಧಾರದ ಮೇಲೆ ಅಧಿಕ ಮಾಸವು ಸಿದ್ಧವಾದ ಮೇಲೆ, ಧರ್ಮಶಾಸ್ತ್ರವು ಅದನ್ನು ಅವಲಂಬಿಸಿ ಕೆಲವು ವಿಧಿ ನಿಷೇಧಗಳನ್ನು ತಿಳಿಸುತ್ತದೆ. ಯಾರನ್ನೂ ಹೆದರಿಸುವುದಾಗಲಿ ಅಥವಾ ನಿಯಂತ್ರಣದಲ್ಲಿಟ್ಟುಕೊಳ್ಳುವುದಾಗಲಿ ಅದರ ಉದ್ದೇಶವಲ್ಲ. ಪ್ರಲೋಭನೆಯಿಂದ ಆಗಬೇಕಾದುದು ಏನೂ ಇಲ್ಲ. ಎಲ್ಲ ಶಾಸ್ತ್ರಗಳಂತೆ ಧರ್ಮಶಾಸ್ತ್ರವು ತನ್ನದೇ ಆದ ಒಂದು ದಾರಿಯನ್ನು ತೋರಿಸುತ್ತದೆ. ಶ್ರದ್ಧೆಯಿರುವವರು ಅದನ್ನು ಆಚರಿಸುತ್ತಾರೆ. ನಂಬಿಗೆಯಿಲ್ಲದವರು ಅದನ್ನು ಬಿಟ್ಟುಬಿಡುತ್ತಾರೆ. ಆದರೆ ಭಾರತೀಯ ಪರಂಪರೆಯಲ್ಲಿ ಅದನ್ನು ನಂಬಿಕೊಂಡು ಬಂದವರೇ ಹೆಚ್ಚು. ಕೋರೋನಾದಂತಹ ಸನ್ನಿವೇಶದಲ್ಲಿ ಅದನ್ನು ಯಾರೂ ಸೃಷ್ಟಿಸಿಲ್ಲ. ಅದಕ್ಕೆ ದರ್ಶನ ಹಾಗೂ ತರ್ಕಶಾಸ್ತ್ರದ ದೃಢವಾದ ಹಿನ್ನೆಲೆಯಿದೆ.
ಎಲ್ಲರಿಗೂ ಅಧಿಕ ಶ್ರಾವಣ ಮಾಸದ ಶುಭಾಶಯಗಳು..