ಜು.೨೩: ಮುಂಗಾರು ಜನಪದ ಸಂಭ್ರಮ
ಶಿಕಾರಿಪುರ : ವಿದ್ಯುನ್ಮಾನ ಬಳಕೆಯ ಭರಾಟೆಯಲ್ಲಿ ಶತ ಮಾನಗಳ ಸೊಗಡು ಬಿಂಬಿಸುವ ಜಾನಪದ ಕಲೆಗಳು ನಶಿಸಿ ಹೋಗುತ್ತಿವೆ, ಈ ಕುರಿತು ಮುಂದಿನ ಪೀಳಿಗೆಗಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಸಾಂಸ್ಕತಿಕ ವೇದಿಕೆ ಸಕ್ರಿಯವಾಗಿದ್ದು ಈ ದಿಸೆಯಲ್ಲಿ ಇದೇ ೨೩ ರಂದು ಶಿವಗಿರಿ ಮರಾಠ ಸಮುದಾಯ ಭವನದಲ್ಲಿ ಮುಂಗಾರು ಜನಪದ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಸಾಂಸ್ಕತಿಕ ವೇದಿಕೆ ಅಧ್ಯಕ್ಷರಾದ ಕೆ. ಎಸ್ ಹುಚ್ಚರಾಯಪ್ಪ ತಿಳಿಸಿದರು.
ಶುಕ್ರವಾರ ಪಟ್ಟಣದ ಸುದ್ದಿ ಮನೆಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,ಆದುನಿಕ ಯುಗದಲ್ಲಿ ಕಂಪ್ಯೂಟರ್ ,ಆಂಡ್ರಾಯ್ಡ್ ಮೊಬೈಲ್ ನಂತಹ ಅತ್ಯಾಧುನಿಕ ವಸ್ತುಗಳ ಬಳಕೆ ಯಿಂದ ಗ್ರಾಮೀಣ ಪ್ರದೇಶಗಳ ಸೊಗಡನ್ನು ಬಿಂಬಿಸುವ ಸಾಹಿತ್ಯ, ಜಾನಪದ ಕಲೆಗಳು ನಶಿಸುತ್ತಿರುವ ಕಾರಣದಿಂದ ಅವುಗಳನ್ನು ಉಳಿಸಿ ಬೆಳೆಸುವ ಸದುದ್ದೇಶದಿಂದ ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಅದ್ಯಕ್ಷ ಪಾಪಯ್ಯರವರ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ಜಾನಪದ ಪರಿಷತ್ತಿನ ಆಶಯದಂತೆ ತಾಲೂಕಿನಲ್ಲಿಯೂ ಮುಂಗಾರು ಜಾನಪದ ಸಂಭ್ರಮ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಅದ್ಯಕ್ಷ ಬಿ.ಪಾಪಯ್ಯರವರ,ಅಭಿಮಾನಿ ಬಳಗ,ಬಾಪೂಜಿ ವಿದ್ಯಾ ಸಂಸ್ಥೆ ಸಹಯೋಗದಲ್ಲಿ ಬಿ.ಪಾಪಯ್ಯ ಹುಟ್ಟು ಹಬ್ಬದ ಪ್ರಯುಕ್ತ ಮುಂಗಾರು ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಇದೇ ದಿ.೨೩ ರ ಬೆಳಿಗ್ಗೆ ೧೦ ಕ್ಕೆ ಪಟ್ಟಣದ ಶಿವಗಿರಿ ಸಮುದಾಯ ಭವನದಲ್ಲಿ ಆಯೋ ಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ, ವೀರಗಾಸೆ, ಗೀಗಿ ಪದ ಸೇರಿದಂತೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜಾನಪದ ಕಲಾ ತಂಡಗಳು ಭಾಗವಹಿಸಲಿವೆ ಈ ತಂಡಗಳಿಂದ ಗ್ರಾಮೀಣ ಪ್ರದೇಶ ಗಳಲ್ಲಿನ ವಿವಿಧ ರೀತಿಯ ಕಲಾ ಪ್ರಕಾರಗಳು ಪ್ರದರ್ಶನಗೊಳ್ಳ ಲಿದೆ.ಸಂಸದ ಬಿ.ವೈ ರಾಘವೇಂದ್ರ ಕಾರ್ಯಕ್ರಮವನ್ನು ಉದ್ಘಾಟಿಸ ಲಿzರೆ ಎಂದು ತಿಳಿಸಿದರು.
ತಾ.ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯದರ್ಶಿ ಸತ್ಯ ನಾರಾಯಣ ಮಾತನಾಡಿ, ಪಾಪಯ್ಯರವರ ಕುರಿತಾಗಿ ಎ. ಕೆ ಹಾಲಪ್ಪ ಇವರ ಸಂಪಾದಕೀ ಯದಲ್ಲಿ,ಪುಸ್ತಕ ಪ್ರಕಾಶಕರಾದ ಸುವ್ವಿ ಬಳಗದ ಸುನೀಲ್ ರವರ ಸಹಕಾರದಿಂದ ಸಂಘಟನಾ ಚತುರ ಬಿ ಪಾಪಯ್ಯ ಹಾಗೂ ದಮನಿತರ ಧ್ವನಿ ಎಂಬ ಎರಡು ಪುಸ್ತಕ ಈಗಾಗಲೇ ಬಿಡುಗಡೆ ಯಾಗಿದೆ ಎಂದು ತಿಳಿಸಿದರು. ಇದೀಗ ಆಯೋಜಿಸಲಾದ ಮುಂಗಾರು ಜನಪದ ಸಂಭ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಸಾಂಸ್ಕತಿಕ ವೇದಿಕೆ ತಾ.ಅಧ್ಯಕ್ಷ ಕೆ ಎಸ್ ಹುಚ್ರಾಯಪ್ಪ ವಹಿಸ ಲಿದ್ದು,ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಕನ್ನಡ ವಿಭಾಗದ ಸಹಾಯ ಪ್ರಾಧ್ಯಾಪಕ ಡಾ.ಮೋ ಹನ್ ಚಂದ್ರಗುತ್ತಿ ಉಪನ್ಯಾಸ ನೀಡಲಿದ್ದಾರೆ.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ್,ಕರ್ನಾಟಕ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಬಿ.ಟಾಕಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್ ಶಶಿಧರ್,ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಮಧುಕೇಶ್ವರ,ತಾ. ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವನ ಕೌಣ್ತಿ,ತಾ.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಮಠದ್,ತಾ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಘು ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಾಪ ಯ್ಯ ಅಭಿಮಾನಿ ಬಳಗದ ಅಧ್ಯಕ್ಷ ಎ.ಕೆ ಹಾಲಪ್ಪ(ಹಾಬೆ),ಸಂಚಾಲಕ ಶಿವಕುಮಾರ್, ಬಾಪೂಜಿ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಕುಲಕರ್ಣಿ ,ಸುರೇಂದ್ರ ಮತ್ತಿತರರು ಉಪಸ್ಥಿತ ರಿದ್ದರು.