ಹಸಿರಿನ ತಾಣ ರಾಗಿಗುಡ್ಡ ಉಳಿವಿಗೆ ಆಗ್ರಹಿಸಿ ಬೃಹತ್ ಜಾಥಾ…

ಶಿವಮೊಗ್ಗ: ಹಸಿರಿನ ತಾಣ ವಾದ ರಾಗಿಗುಡ್ಡ ಉಳಿಸಲು ಆಗ್ರಹಿಸಿ ಇಂದು ರಾಗಿಗುಡ್ಡ ಉಳಿಸಿ ಅಭಿಯಾನದಿಂದ ರಾಗಿಗುಡ್ಡದಿಂದ ಜಿಧಿಕಾರಿಗಳ ಕಚೇರಿವರೆಗೆ ಕಾಲ್ನಡಿಗೆ ಹಾಗೂ ಸೈಕಲ್ ಜಥಾ ಹಮ್ಮಿಕೊಳ್ಳ ಲಾಗಿತ್ತು. ಈ ಜಥಾಕ್ಕೆ ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ ಚಾಲನೆ ನೀಡಿದರು.
ರಾಗಿಗುಡ್ಡದ ಉತ್ತರ ಭಾಗದಿಂದ ಜಥಾದಲ್ಲಿ ಹೊರಟ ಪರಿಸರ ಪ್ರೇಮಿಗಳು ಉಷಾ ನರ್ಸಿಂಗ್ ಹೋಂ ಸರ್ಕಲ್ ಮೂಲಕ ಜಿಧಿಕಾರಿಗಳ ಕಚೇರಿ ವರೆಗೆ ಸುಮಾರು ೪.೫ಕಿಮೀ. ವರೆಗೆ ನಡೆದುಕೊಂಡು ಬಂದರು. ರಾಗಿಗುಡ್ಡ ಉಳಿಸಿ ಎಂಬ ಘೋಷಣೆಯೊಂದಿಗೆ ಜಿಧಿಕಾರಿಗಳ ಕಚೇರಿ ತಲುಪಿ ಜಿಧಿಕಾರಿಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಶಿವಮೊಗ್ಗ ನಗರಕ್ಕೆ ರಾಗಿಗುಡ್ಡ ಒಂದು ಕಳಸಪ್ರಾಯದಂತೆ ಇದೆ. ನೀರಿನ ಸೆಲೆಯಾಗಿದೆ. ಹಸಿರಿನ ತಾಣವಾಗಿದೆ. ಧಾರ್ಮಿಕ ಪವಿತ್ರ ಕ್ಷೇತ್ರವೂ ಆಗಿದೆ.
ಆದರೆ ಈಗ ಅದರ ನಾಶ ಆರಂಭವಾಗಿದೆ. ಶಿವಮೊಗ್ಗದ ಪರಿಸರಕ್ಕೆ ರಾಗಿಗುಡ್ಡ ನಾಶ ಘೋರ ಶಾಶ್ವತ ಅನ್ಯಾಯ ಮಾಡುತ್ತಿದೆ. ಇದನ್ನು ಉಳಿಸಲು ಪರಿಸರಾಸಕ್ತರು ಈ ಜಥಾ ಹಮ್ಮಿಕೊಂಡಿದ್ದೇವೆ ಎಂದರು.

ರಾಗಿಗುಡ್ಡ ೧೦೮ ಎಕರೆ ವಿಸ್ತೀರ್ಣ ಪ್ರದೇಶವಾಗಿದೆ. ಈಗಾಗಲೇ ಪ್ರಥಮ ದರ್ಜೆ ಮಹಿಳಾಕಾಲೇಜಿಗೆ ೮ ಎಕರೆ, ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಗೆ ೮ ಎಕರೆ, ಬೆಂಕಿ ಪೊಟ್ಟಣ ಕಾರ್ಖಾನೆಗೆ ೧೦ ಎಕರೆ, ವಿeನ ಮತ್ತು ತಂತ್ರeನ ಇಲಾಖೆಗೆ ೮ ಎಕರೆ, ಶಿವಮೊಗ್ಗ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ೫ ಎಕರೆ, ಗೋಶಾಲೆಗೆ ೫ ಎಕರೆ, ಅಂಬೇಡ್ರ್ ಮಿಷನ್‌ನವರಿಗೆ ೨೦ ಎಕರೆ ಜಗ ವನ್ನು ಪರಭಾರೆ ಮಾಡಲಾಗಿದೆ. ಇದರ ಜೊತೆಗೆ ೫ ಎಕರೆ ಇಎಸ್‌ಐ ಆಸ್ಪತ್ರೆಗೆ ಬಳಸಿಕೊಂಡಿದ್ದು, ೫೦ ಅಡಿಯವರೆಗೆ ಗುಡ್ಡ ಕಡಿಯ ಲಾಗಿದೆ. ಲಕ್ಷಾಂತರ ರೂ. ಮಲ್ಯದ ಫಲವತ್ತಾದ ಮಣ್ಣು, ಕಲ್ಲು ಲೂಟಿಯಾಗಿದೆ. ಉಳಿದ ೬೯ ಎಕರೆ ಗುಡ್ಡವೂ ಸಹ ನೆಲಸಮವಾಗಲಿದೆ. ಒಟ್ಟಾರೆ ಇಡೀ ರಾಗಿಗುಡ್ಡವೇ ನಾಶವಾ ಗಲಿದೆ ಎಂದು ಆರೋಪಿಸಿದರು.
ವಿವಿಧ ಯೋಜನೆಗಳಿಗೆ ನೀಡಿರುವ ಜಗದ ಮಂಜೂರಾತಿ ಪತ್ರ ಕೂಡಲೇ ರದ್ದುಮಾಡಬೇಕು. ರಾಗಿಗುಡ್ಡ ಪ್ರದೇಶವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿ ಸಂರಕ್ಷಿತ ಅರಣ್ಯವಾಗಿ ಘೋಷಿಸಬೇಕು. ರಾಗಿಗುಡ್ಡವನ್ನು ಗುಡ್ಡದ ಕಾಡಾಗಿಯೇ ಉಳಿಸಬೇಕು ಎಂದು ಆಗ್ರಹಿಸಿದರು.
ಜಥಾದಲ್ಲಿ ಪ್ರಮುಖರಾದ ಕೆ.ವಿ.ವಸಂತಕುಮಾರ್, ನಾಗೇಶ್ ನವ್ಯಶ್ರೀ, ಶ್ರೀಪತಿ, ಪರಿಸರ ನಾಗರಾಜ್, ಶೇಖರಗೌಳೇರ್, ಸತೀಶ್‌ಕುಮಾರ್ ಶೆಟ್ಟಿ ಜೋಯ್ಸ್., ಚನ್ನವೀರ ಗಾಮನಕಟ್ಟೆ, ಸುನೀತಾ ಶ್ರೀಧರ್, ಕೆ.ಪಿ. ಶ್ರೀಪಾಲ್, ವೈಹೆಚ್. ನಾಗರಾಜ್, ಹೆಚ್.ಆರ್. ಬಸವರಾಜಪ್ಪ, ಟಿ.ಎಂ. ಚಂದ್ರಪ್ಪ, ಎಸ್. ಶಿವಮೂರ್ತಿ, ಜಗದೀಶ್ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಮುಖಂಡರು, ಪರಿಸರಾಸಕ್ತರು, ಪಾಲ್ಗೊಂಡಿದ್ದರು.