ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ೧೦೦೦ ವೃಕ್ಷ ನಾಟಿ ಕಾರ್‍ಯಕ್ರಮ…
ಸೊರಬ: ಶ್ರೀ ಕ್ಷೇತ್ರ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅರಣ್ಯ ಇಲಾಖೆ ಸೊರಬ ಇವರ ಸಹಯೋಗದಲ್ಲಿ ಶಾಲೆ ಹಾಗೂ ದೇವಸ್ಥಾನ ಆವರಣ ಸೇರಿ ಒಟ್ಟು ೧೫ ಕಡೆಗಳಲ್ಲಿ ಉತ್ತಮ ತಳಿಯ ನುಗ್ಗೆ, ಸೀತಾಫಲ, ನಿಂಬು, ಹಲಸು, ಪೇರಳೆ, ಬಾದಾಮಿ ಜತಿಯ ಒಟ್ಟು ೧೦೦೦ ಗಿಡಗಳನ್ನು ನಾಟಿ ಮಾಡುವ ಮೂಲಕ ಪರಿಸರ ಕಾರ್ಯಕ್ರಮ ವನ್ನು ಆಚರಿಸಲಾಯಿತು.
ಸರಕಾರಿಹಿರಿಯ ಪ್ರಾಥಮಿಕ ಶಾಲೆ ತತ್ತೂರು ವಡ್ಡಿಗೇರಿಯ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶಾಲಾ ಮುಖ್ಯೋ ಪಾಧ್ಯಾಯರಾದ ಶ್ರೀ ಬಸವಂತಪ್ಪ ರವರು ಭಾಗವಹಿಸಿ, ಪರಿಸರವನ್ನು ನಾವು ಸಂರಕ್ಷಣೆ ಮಾಡಿದ್ದಷ್ಟು ನಮ್ಮ ಆರೋಗ್ಯ ಉತ್ತಮವಾಗಿ ರುತ್ತದೆ. ಮರ ಕಡಿಯುವುದು ಬಹಳ ಸುಲಭ. ಆದರೆ ಕಡಿದ ಮರದ ಸ್ಥಳದ ಮತ್ತೊಂದು ಗಿಡವನ್ನು ನೆಟ್ಟು ಪೋಷಣೆ ಮಾಡುವ ಮನೋಭಾವನೆಯನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳ ಬೇಕು ಇದರಿಂದ ಪರಿಸರ ಪ್ರe ಮೂಡುತ್ತದೆ. ಮನುಷ್ಯನ ದುರಾ ಸೆಗಾಗಿ ಪರಿಸರ ಮತ್ತು ಜೀವ ಸಂಕುಲ ನಶಿಸುತ್ತಿದೆ. ವಿದ್ಯಾರ್ಥಿ ಗಳು ತಮ್ಮ ಮನೆ ಹಾಗೂ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಪೋಷಕರಲ್ಲಿ ಪರಿಸರ ಸಂರಕ್ಷಣೆಕುರಿತು ಅರಿವು ಮೂಡಿ ಸಬೇಕು ಎಂದರು.
ಪರಿಸರವನ್ನು ಸಂರಕ್ಷಿಸಿದರೆ ಮನುಷ್ಯರು ಮತ್ತು ಇತರ ಜೀವ ಸಂಕುಲ ಆರೋಗ್ಯವಾಗಿ ಜೀವನ ಸಾಗಿಸಲು ಸಾಧ್ಯ. ಪರಿಸರ ಹದ ಗೆಟ್ಟರೆ ಭೂಮಿಯ ಮೇಲೆ ಯಾವ ಜೀವಿಯು ಕೂಡ ಆರೋಗ್ಯದಿಂದ ಬದುಕಲು ಸಾಧ್ಯವಿಲ್ಲ. ಅನಾ ರೋಗ್ಯದಿಂದ ಬೇಗ ಸಾವಿಗೆ ತುತ್ತಾಗುತ್ತೇವೆ. ಹಾಗಾಗಿ ಇಂದಿನ ಯುವಕರು ಪರಿಸರ ಬೆಳವಣಿಗೆಗೆ ಹೆಚ್ಚು ಆಸಕ್ತಿ ವಹಿಸಬೇಕೆಂದು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವಲಯ ಮೇಲ್ವಿಚಾರಕರಾದ ಶ್ರೀ ಸುರೇಶ್‌ರವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನೇಕ ಸಮಾಜಮುಖಿ ಕಾರ್ಯ ಕ್ರಮಗಳಾದ ಶಾಲೆಗಳಿಗೆ ಡೆಸ್ಕ್ ಬೆಂಚ್ ಪೀಠೋಪಕರಣ ವಿತರಣೆ, ಸುeನನಿಧಿ ಶಿಷ್ಯವೇತನ, eನದೀಪ ಶಿಕ್ಷಕರ ಒದಗಣೆ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ, ಕೆರೆ ಪುನಶ್ಚೇತನ, ನಿರ್ಗತಿಕರಿಗೆ ಮಾಶಾಸನ ವಿತರಣೆ, ವಿಶೇಷ ಚೇತನರಿಗೆ ಜನಮಂಗಲ ಕಾರ್‍ಯಕ್ರಮದಡಿಯಲ್ಲಿ ಸಲಕರಣೆ ವಿತರಣೆ, ಮಧ್ಯವರ್ಜನ ಶಿಬಿರ ಇನ್ನಿತರ ಸಮಾಜ ಸೇವೆಯಲ್ಲಿ ಸಂಸ್ಥೆಯು ಅನೇಕ ರೀತಿಯ ಕಾರ್‍ಯ ಕ್ರಮವನ್ನು ಅನುಷ್ಠಾನ ಗೊಳಿಸು ತ್ತಿದೆ. ಇದರಿಂದಾಗಿ ಹೆಚ್ಚಿನ ಜನರು ಪ್ರಯೋಜನವನ್ನು ಪಡೆದು ಕೊಂಡಿರುತ್ತಾರೆ ಎಂದರು.
ಕಾಯಕ್ರಮದಲ್ಲಿ ಸಹ ಶಿಕ್ಷಕರಾದ ಸೌಮ್ಯ, ಲೋಕಪ್ಪ, ನಮಿತಾ ಸೀತಮ್ಮ, ಪೂಜ, ಶಾಲೆಯ ಉಪಾಧ್ಯಕ್ಷರಾದ ಶ್ರೀಮತಿ ರೋಜ ಸದಸ್ಯರಾದ ಶ್ರೀಮತಿ ಶ್ರುತಿ, ಕವಿತಾ, ನಾಗಮ್ಮ ಸಂಘದ ಸದಸ್ಯರಾದ ಶ್ರೀಮತಿ ಗಾಯತ್ರಮ್ಮ, ಚಿನ್ನಮ್ಮ, ಸೂರ್ಯಕಲಾ, ಶ್ರೀ ಶಿವರಾಮಪ್ಪ ಹಾಗೂ ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.