ಭಕ್ತಿಪೂರ್ವಕವಾಗಿ ಸಹಸ್ರಾರು ಭಕ್ತ ಸಮ್ಮುಖದಲ್ಲಿ ಸಂಪನ್ನಗೊಂಡ ಮೌಂಟ್ ಕಾರ್ಮೆಲ್ ಮಹೋತ್ಸವ
ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆಯಲ್ಲಿರುವ ವಿಶ್ವವಿಖ್ಯಾತ ಸೇಕ್ರೆಡ್ ಹಾರ್ಟ್ ಚರ್ಚ್ನಲ್ಲಿ ಜು.೧೬ರ ಭಾನುವಾರ ಕಾರ್ಮೆಲ್ ಮಾತೆಯ ಮಹೋತ್ಸವು ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಸಂಪನ್ನಗೊಂಡಿತು.
ಅಂದು ಬೆಳಿಗ್ಗೆ ಮತ್ತು ಸಂಜೆ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ| ಫ್ರಾನ್ಸಿನ್ಸ್ ಶೆರಾವೋ ಎಸ್.ಜೆ. ಅವರೊಂದಿಗೆ ವಿವಿಧ ಧರ್ಮಕೇಂದ್ರಗಳ ಗುರುಗಳೊಂದಿಗೆ ವಿಶೇಷ ಧಾರ್ಮಿಕ ಪೂಜಾವಿಧಿಗಳು ಜರುಗಿದವು.
ಸಂಜೆ ೫.೩೦ಕ್ಕೆ ಜಪಸರ ಪ್ರಾರ್ಥನೆ, ವಿಶೇಷ ಪೂಜೆ ನಂತರ ಹೂವಿನ ಅಲಂಕೃತ ತೇರಿನಲ್ಲಿ ಕಾರ್ಮೆಲ್ ಮಾತೆಯ ರಾಜಬೀದಿ ಉತ್ಸವ ಭಕ್ತಿಪೂರ್ವಕವಾಗಿ ಜರುಗಿತು. ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜಾತಿ ಧರ್ಮವನ್ನು ಮೀರಿ ಭಕ್ತರು ಪಾಲ್ಗೊಂಡು ದೇವಮಾತೆಗೆ ಪೂಜಿಸುವ ಮೂಲಕ ತಮ್ಮ ಹರಕೆ ತೀರಿಸಿದರು.
ಕೃತಜ್ಞತೆ: ನಗರದ ವಿಶ್ವವಿಖ್ಯಾತ ಸೇಕ್ರೆಡ್ ಹಾರ್ಟ್ ಕೆಥೆಡ್ರಲ್ನಲ್ಲಿ ಮೌಂಟ್ ಕಾರ್ಮೆಲ್ ಮಹೋತ್ಸವವನ್ನು ಭಕ್ತಿಪೂರ್ವಕವಾಗಿ ಆಚರಿಸಲು ನವದಿನಗಳ ಪೂಜಾ ವಿಧಿಗಳಲ್ಲಿ ಸಹಕರಿಸಿದ ಆರ್ಥಿಕ ಸಮಿತಿ, ಪಾಲನಾ ಸಮಿತಿ ಸೇರಿದಂತೆ ವಿವಿಧ ಸಮಿತಿಗಳ ಸದಸ್ಯರು ಮತ್ತು ಪದಾಧಿಕಾರಿಗಳು, ಹಬ್ಬದ ಸಂದರ್ಭದಲ್ಲಿ ಉತ್ಸವ ಯಶಸ್ವಿಯಾಗಲು ಸಹಕರಿಸಿದ ಪೊಲೀಸ್ ಇಲಾಖೆ ಸಿಬ್ಬಂದಿಗಳು ಮತ್ತು ಅಧಿಕಾರಿಗಳು, ವಿದ್ಯುತ್ ಇಲಾಖೆ, ವಿವಿಧ ಜನಪ್ರತಿನಿಧಿಗಳಿಗೆ ಹಾಗೂ ಮಹೋತ್ಸವದಲ್ಲಿ ಪಾಲ್ಗೊಂಡು ಸಹಕರಿಸಿದ ಎಲ್ಲಾ ಭಕ್ತಾಧಿಗಳಿಗೆ, ಮಾಧ್ಯಮ ಪ್ರತಿನಿಧಿಗಳಿಗೆ ಸೇಕ್ರಡ್ ಹಾರ್ಟ್ ಪ್ರಧಾನಾಲಯದ ಪ್ರಧಾನ ಗುರುಗಳಾದ ರೆ|ಫಾ| ಸ್ಟ್ಯಾನಿ ಡಿಸೋಜ ಅವರು ತುಂಬು ಹೃದಯದ ಕೃತಜ್ಞತೆಗಳನ್ನು ಕೋರಿದ್ದಾರೆ.