ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್ – ಜನಜಾಗೃತಿ ವೇದಿಕೆಯಿಂದ ಸ್ವಾಸ್ಥ್ಯ ಸಂಕಲ್ಪ ತರಬೇತುದಾರರ ತರಬೇತಿ ಕಾರ್ಯಗಾರ…

ಶಿವಮೊಗ್ಗ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಮತ್ತು ಜಿ ಜನಜಾಗೃತಿ ವೇದಿಕೆ ಇವರ ಆಶ್ರಯದಲ್ಲಿ ವಿದ್ಯಾನಗರದ ಸಂಸ್ಥೆಯ ಚೈತನ್ಯ ಸೌಧ ಸಭಾಂಗಣದಲ್ಲಿ ಚಿತ್ರದುರ್ಗ ಪ್ರಾದೇಶಿಕ ವಿಭಾಗದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿ ವ್ಯಾಪ್ತಿಯ ಸ್ವಾಸ್ಥ್ಯ ಸಂಕಲ್ಪ ತರಬೇತುದಾರರ ತರಬೇತಿ ಮತ್ತು ನವಜೀವನ ಸಮಿತಿ ಪೊಷಕರ ತರಬೇತಿ ಕಾರ್ಯಾಗಾರವನ್ನು ವೇದಿಕೆಯ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ ಅವರು ಉದ್ಘಾಟಿಸಿದರು.
ಮುಖ್ಯ ಸಂಪನ್ಮೂಲ ವ್ಯಕ್ತಿ ಯಾಗಿ ಆಗಮಿಸಿದ ಜನಜಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶP ವಿವೇಕ್ ವಿನ್ಸೆಂಟ್ ಪಾಯಸ್ ಅವರು ಮಾತನಾಡಿ, ವೇದಿಕೆಯ ಹುಟ್ಟು, ಬೆಳವಣಿಗೆಗಳು ಮತ್ತು ಈವರೆಗಿನ ಕಾರ್ಯ ಚಟುವಟಿಕೆ ಗಳ ಬಗ್ಗೆ ಮಾಹಿತಿ ನೀಡಿದರು.
ಮಧ್ಯ ಮತ್ತು ಮಾದಕ ವಸ್ತುಗಳು ದೇಶದಲ್ಲಿ ಹಾವಳಿ ಮಾಡುತ್ತಿರುವುದು, ಮಾದಕ ಮತ್ತು ಮದ್ಯ ವ್ಯಸನಕ್ಕೆ ಯುವ ಜನತೆಯು ಬಲಿಯಾಗುತ್ತಿzರೆ, ಜೊತೆಗೆ ವಿದ್ಯಾರ್ಥಿಗಳ ಜೀವನವು ಅಮಲು ಪದಾರ್ಥಕ್ಕೆ ಬಲಿಯಾಗಿ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿzರೆ ಎಂದು ವಿಷಾಧಿಸಿದರು.
ಫ್ಯಾಷನ್, ಶೋಕಿ ಜೀವನ, ಕೀಳು ಮನೋಭಾವನೆ, ನಿರಾಸೆ, ಬಡತನ, ನೀರುದ್ಯೋಗ, ಧೈರ್ಯತರಲು ಮಾದಕ ವಸ್ತು ಬಳಸುವುದು, ನೋವು ನಿವಾರಕ, ಮತಿ ವಿಕಾರಕ ಮಾದಕ ವಸ್ತುಗಳು ವ್ಯಾಪಕವಾಗಿ ಹರಡುತ್ತಿದ್ದು, ಪ್ರತಿಯೊಂದು ಶಾಲಾ ಕಾಲೇಜಿನ ಸುತ್ತಮುತ್ತ ಅತೀ ಸುಲಭವಾಗಿ ಇಂತಹ ಹಾನಿಕಾರಕ ವಸ್ತುಗಳು ದೊರೆಯುವ ಕಾರಣ ಮಕ್ಕಳು ಸುಲಭವಾಗಿ ಬಲಿಯಾಗುತ್ತಿದ್ದು, ಇದನ್ನು ತೆಡೆಗಟ್ಟುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಮನ ಪರಿವರ್ತನೆ ಕುರಿತು ಕಾರ್‍ಯಾಗಾರ ಹಮ್ಮಿಕೊಳ್ಳುವ ಮೂಲಕ ಮಕ್ಕಳನ್ನು ಇಂತಹ ದುರಾಭ್ಯಾಸಕ್ಕೆ ಬಲಿ ಬೀಳದಂತೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯಶ್ರೀ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ಪ್ರತಿ ಜಿಯಲ್ಲೂ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿ ತರಬೇತಿಯನ್ನು ನೀಡಿ ಅವರ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣವನ್ನು ಮಾಡಲಾಗುತ್ತಿದೆ, ಈ ನಿಟ್ಟಿನಲ್ಲಿ ಈ ದಿನ ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳು ಶಾಲಾ ಕಾಲೇಜುಗಳಿಗೆ ತೆರಳಿ ಈ ಕಾರ್ಯಕ್ರಮವನ್ನು ಅನುಷ್ಟಾನ ಮಾಡುವಂತೆ ಮಾರ್ಗದರ್ಶನ ಮಾಡಿದರು. ಕಾರ್ಯಗಾರದಲ್ಲಿ ಶಿವಮೊಗ್ಗ -ಚಿಕ್ಕಮಗಳೂರು ಜಿಯ ೬೦ ಮಂದಿ ತರಬೇತು ದಾರರು ತರಬೇತಿ ಪಡೆದರು.
ಶಿವಮೊಗ್ಗ ಜಿ ನಿರ್ದೇಶಕ ಜೆ. ಚಂದ್ರಶೇಖರ್ ಸರ್ವರನ್ನೂ ಸ್ವಾಗತಿಸಿದರು. ಚಿತ್ರದುರ್ಗ ಪ್ರಾದೇಶಿಕ ಕಛೇರಿ ಜನಜಗೃತಿ ಯೋಜನಾಧಿಕಾರಿ ನಾಗರಾಜ್ ಎಂ ವಂದಿಸಿದರು.