ಶಿಕ್ಷಕರನ್ನು ಮಾತ್ರ ನಿವೃತ್ತಿ ನಂತರವೂ ಪ್ರೀತಿ-ಗೌರವದಿಂದ ಕಾಣಲು ಸಾಧ್ಯ…

ಹೊನ್ನಾಳಿ: ಜನಪ್ರತಿನಿಧಿಗಳ ೫ ವರ್ಷಗಳ ಸೇವೆಗೆ ಜನ ಬೇಸರ ಗೊಳ್ಳುತ್ತಾರೆ. ಆದರೆ ಶಿಕ್ಷಕರು ೩೦ ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದ ನಂತರವೂ ಅವರನ್ನು ಪ್ರೀತಿ ಗೌರವಗಳಿಂದ ಕಾಣುತ್ತಾರೆ. ಇದುವೆ ಶಿಕ್ಷಣದ ಶಕ್ತಿ ಎಂದು ಶಾಸಕ ಡಿ.ಜಿ.ಶಾಂತನಗೌಡ ಅವರು ಶಿಕ್ಷರ ಕುರಿತು ಅಭಿಮಾನ ವ್ಯಕ್ತಪಡಿಸಿದರು.
ತಾಲೂಕಿನ ಗೊಲ್ಲರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೫ ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿಯಾದ ಶಿಕ್ಷಕರಾದ ಕೆ.ಆರ್. ಗೋಣಪ್ಪ ಮತ್ತು ಕೆ.ಎಸ್. ಚಂದ್ರಪ್ಪ ಈ ಈರ್ವ ಶಿಕ್ಷಕರನ್ನು ಇಡೀ ಗೊಲ್ಲರಹಳ್ಳಿ ಗ್ರಾಮದವರು, ಹಳೆ ವಿದ್ಯಾರ್ಥಿ ಬಳಗ, ಎಸ್.ಡಿ.ಎಂ.ಸಿ., ಹಾಗೂ ಗೊಲ್ಲರಹಳ್ಳಿಯ ಶಿಕ್ಷಕರ ಬಳಗದ ವತಿಯಿಂದ ಗ್ರಾಮದ ಶ್ರೀ ಅಂಜನೇಯ ಸ್ವಾಮಿ ದೇವಸ್ಥಾನದ ಅವರಣದಲ್ಲಿ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಬಿಳ್ಕೊಡುಗೆ ಸಮಾರಂಭದಲ್ಲಿ ಶಿಕ್ಷಕರುಗಳನ್ನು ಸನ್ನಾನಿಸಿ, ಗೌರವಿಸಿದ ಸಂದಭ ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.


ಭ್ರಷ್ಟಾಚಾರ ರಹಿತ, ಕೇವಲ ಸೇವಾ ಮನೋಭಾವನೆಯಿಂದ ಮಾಡುವ ಏಕೈಕ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿ. ಒಬ್ಬ ವ್ಯಕ್ತಿ ಜೀವನದಲ್ಲಿ ಎಷ್ಠೇ ದೊಡ್ಡ ವ್ಯಕ್ತಿಯಾಗಿ ಬೆಳದರೂ ಕೂಡ ಆತ ತನ್ನ ಜೀವನದಲ್ಲಿ ಬಂದುಹೋದ, ತನಗೆ ಅಕ್ಷರ ಕಲಿಸಿದ ಗುರುಗಳನ್ನು ಮರೆಯುವುದಿಲ್ಲ ಎಂದರು.
ಇದೇ ವೇಳೆ ತಮ್ಮ ಬಾಲ್ಯದ ಶಿಕ್ಷಣ ವ್ಯವಸ್ಥೆಯನ್ನು ಸ್ಮರಿಸಿಕೊಂಡ ಶಾಸಕ ಶಾಂತನಗೌಡರು, ತಮ್ಮ ಗ್ರಾಮದಲ್ಲಿ ಶಿಕ್ಷಕ ವೃತ್ತಿಯನ್ನು ನಿರ್ವಹಿಸಿ ಸೇವೆಯಿಂದ ನಿವೃತ್ತಿಯಾಗುತ್ತಿರುವ ಶಿಕ್ಷಕರನ್ನು ಈ ರೀತಿ ಇಡೀ ಗ್ರಾಮವೇ ನಿಂತು ಅದ್ದೂರಿಯಾಗಿ ಬೀಳ್ಕೂಡುಗೆ ಸಮಾರಂಭ ಮಾಡುತ್ತಿರುವುದು ಎಲ್ಲಿಯೂ ನೋಡಿಲ್ಲ ಎಂದು ಶ್ಲಾಘಿಸಿದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಮಾತನಾಡಿ, ತಾನೂ ಕೂಡ ಒಬ್ಬ ಶಿಕ್ಷಕನ ಮಗ ಎಂದು ಹೇಳಿಕೊಳ್ಳುವುದಕ್ಕೆ ಅತೀವ ಹೆಮ್ಮೆ ಎನಿಸುತ್ತಿದೆ. ತಾಯಿಯೇ ಮೊದಲ ಗುರು, ನಂತರದಲ್ಲಿ ಜೀವನ ರೂಪಿಸುವ ಶಿಲ್ಪಿ ಎಂದರೆ ಅದು ಶಿಕ್ಷಕರು ಎಂದು ವಿವರಿಸಿದರು.
ಸಮಾರಂಭದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ವರದರಾಜಪ್ಪ ಗೌಡ, ಗ್ರಾ.ಪಂ.ಮಾಜಿ ಉಪಾ ಧ್ಯಕ್ಷೆ ಜಿ.ಪಿ.ಇಂದಿರಮ್ಮ ಜಿ.ಪಂ. ಮಾಜಿ ಉಪಾಧ್ಯಕ್ಷ ಸುರೇಂದ್ರ ನಾಯ್ಕ, ಗ್ರಾ.ಪಂ.ಸದಸ್ಯ ನಟರಾಜ್ ದೈಹಿಕ ಶಿಕ್ಷಣಾಧಿಕಾರಿ ಈಶ್ವರಪ್ಪ ಮುಂತಾದವರು ಮಾತನಾಡಿದರು.
ಅಧ್ಯಕ್ಷತೆಯನ್ನು ಎಸ್.ಡಿ. ಎಂ.ಸಿ. ಅಧ್ಯಕ್ಷ ಕುಮಾರ್ ವಹಿಸಿ ದ್ದರು.ಬಿಆರ್‌ಪಿಗಳಾದ ಜಿ.ಕೆ. ಅರುಣ್ ಕುಮಾರ್,ಎಸ್.ಸಿ. ಸುನಿಲ್ ಆರ್‌ಪಿ. ಗಿರೀಶ್, ಶಿಕ್ಷಕ ಜಿ.ಎಸ್.ತಿಮ್ಮಪ್ಪ,ಛೇರ್ಮನ್ ಹಾಲಪ್ಪ, ಗ್ರಾ.ಪಂ. ಸದಸ್ಯರಾದ ಸುಲೋಚನಮ್ಮ ಹಳದಪ್ಪ, ಮುಖಂಡರಾದ ಮುಕುಂದಪ್ಪ, ಹನುಮಂತಪ್ಪ, ಸಿzಚಾರ್, ಮರಿಯಪ್ಪ, ತಿಮ್ಮಪ್ಪ, ಚಂದ್ರಯ್ಯ, ಹನುಮಂತಪ್ಪ, ಗೀತಾ, ಆಶಾ, ಗೋವಿಂದಸ್ವಾಮಿ, ಹಳದಪ್ಪ, ರಮೇಶ್‌ದಾಸಳ್ಳಿ ಇದ್ದರು.
ಗಣೇಶ್ ಸ್ವಾಗತಿಸಿ, ಶಿಕ್ಷಕಿ ಮಂಜುಳ ವಂದಿಸಿದರು. ಶಿಕ್ಷಕ ಸುನಿಲ್ ನಿರೂಪಿಸಿದರು. ಗೊಲ್ಲರಹಳ್ಳಿ ಶಿಕ್ಷಕ ವೃಂದ, ಶ್ರೀ ವಿನಾಯಕ, ಕೆ.ಸಿ.ನರಸಿಂಹಪ್ಪ ,ಶನೀಶ್ವರ ಸೇವಾ ಸಮಿತಿ, ಶ್ರೀ ದುರ್ಗಾಂಜನೇಯ ಸೇವಾಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.